ಶಿವಮೊಗ್ಗದಲ್ಲಿ ಚಳ್ಳಕೆರೆ ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಮುಂದಾದ ವ್ಯಕ್ತಿಗೆ ಕಾದಿತ್ತು ಶಾಕ್‌

KSRTC-Bus-General-Image-Shimoga-Bangalore

SHIVAMOGGA LIVE NEWS, 3 FEBRUARY 2025 ಶಿವಮೊಗ್ಗ : ಬಸ್‌ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಕಳ್ಳತನ ಮಾಡುತ್ತಿದ್ದ ಖದೀಮರು ಈ ಪುರುಷರ ಜೇಬಿಗೆ ಕೈ ಹಾಕಲು ಆರಂಭಿಸಿದ್ದಾರೆ. ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಪ್ಯಾಂಟ್‌ ಜೇಬಿನಿಂದ ಪರ್ಸ್‌ ಪಿಕ್‌ಪಾಕೆಟ್‌ ಮಾಡಿದ್ದಾರೆ. ಅದರಲ್ಲಿ ದುಬಾರಿ ಬೆಲೆಯ ಬ್ರೇಸ್‌ಲೆಟ್ ಮತ್ತು ನಗದು ಇತ್ತು ಎಂದು ಆರೋಪಿಸಲಾಗಿದೆ. ತೇವರಚಟ್ನಹಳ್ಳಿಯ ಹೊನ್ನೂರಪ್ಪ ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಚಳ್ಳಕೆರೆಗೆ ತೆರಳುವ ಬಸ್‌ ಹತ್ತಿದ್ದರು. ಸೀಟಿನಲ್ಲಿ ಕುಳಿತು ಟಿಕೆಟ್‌ ಮಾಡಿಸಲು ಪರ್ಸ್‌ಗೆ … Read more

ಶಿವಮೊಗ್ಗದಲ್ಲಿ ನಿಂತಿದ್ದ ಬಸ್ಸಿಗೆ ಕಾರು ಡಿಕ್ಕಿ, ಶಾಹಿ ಗಾರ್ಮೆಂಟ್ಸ್‌ ಸಿಬ್ಬಂದಿ ಸಾವು

car-and-bus-mishap-at-sagara-road-in-Shimoga-city.

SHIVAMOGGA LIVE NEWS, 3 FEBRUARY 2025 ಶಿವಮೊಗ್ಗ : ನಿಂತಿದ್ದ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಗಾರ್ಮೆಂಟ್ಸ್‌ (garments) ಒಂದರ ಸೀನಿಯರ್‌ ಕ್ವಾಲಿಟಿ ಮ್ಯಾನೇಜರ್‌ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆ ಭಾರ್ಗವಿ ಪೆಟ್ರೋಲ್‌ ಬಂಕ್‌ ಸಮೀಪ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಧಾರವಾಡ ಮೂಲದ ವಿಜಯ ಕುರ್ಲಿ (48) ಮೃತರು. ವಿನೋಬನಗರದಲ್ಲಿರುವ ಸ್ನೇಹಿತರೊಬ್ಬರ ಮನೆಯಿಂದ ವಿಜಯ ಕುರ್ಲಿ ಮಲವಗೊಪ್ಪದ ಶಾಹಿ ಗಾರ್ಮೆಂಟ್ಸ್‌ಗೆ ತೆರಳುತ್ತಿದ್ದರು. ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಕಾರು ನಿಂತಿದ್ದ ಬಸ್‌ಗೆ ಡಿಕ್ಕಿ … Read more

ಅಡಿಕೆ ತೋಟದಲ್ಲಿ ನೇಣು ಬಿಗಿದುಕೊಂಡ ರೈತ

farmer-puttanaik-at-haratalu-succumbed-at-areca-farm.

SHIVAMOGGA LIVE NEWS, 3 FEBRUARY 2025 ಹೊಸನಗರ : ಸಾಲಬಾಧೆಗೆ ಮನನೊಂದು ರೈತರೊಬ್ಬರು ತಮ್ಮ ತೋಟದಲ್ಲಿ (Adike Farm) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಹುಣಸವಳ್ಳಿ ಘನಂದೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪುಟ್ಟನಾಯ್ಕ್‌ (80) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗಾಗಿ ವಿವಿಧ ಬ್ಯಾಂಕುಗಳಿಂದ 13 ಲಕ್ಷ ರೂ. ಸಾಲ ಮಾಡಿದ್ದರು ಎಂದು ತಿಳಿದು ಬಂದಿದೆ. ಸಾಲಬಾಧೆಗೆ ಮನನೊಂದು ಅಡಿಕೆ ತೋಟದಲ್ಲಿ ಪುಟ್ಟನಾಯ್ಕ್‌ ನೇಣು ಬಿಗಿದುಕೊಂಡಿದ್ದಾರೆ. ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ … Read more

ಗೃಹಪ್ರವೇಶಕ್ಕೆ ತೆರಳಲು ರೆಡಿಯಾಗಲು ಬೀರು ತೆಗೆದ ಗೃಹಿಣಿಗೆ ಕಾದಿತ್ತು ಆಘಾತ, ಆಗಿದ್ದೇನು?

Crime-News-General-Image

SHIVAMOGGA LIVE NEWS, 3 FEBRUARY 2025 ಶಿವಮೊಗ್ಗ : ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ (gold) ನಾಪತ್ತೆಯಾಗಿವೆ ಎಂದು ಆರೋಪಿಸಿ ಅಶೋಕ ನಗರ ನಿವಾಸಿ ಗೀತಾ ಎಂಬುವವರು ದೂರು ನೀಡಿದ್ದಾರೆ. ಗೃಹ ಪ್ರವೇಶ ಸಮಾರಂಭಕ್ಕೆ ತೆರಳಲು ಸಿದ್ಧತೆ ಮಾಡಿಕೊಳ್ಳುವಾಗ ಕಳ್ಳತನ ಬೆಳಕಿಗೆ ಬಂದಿದೆ. ಅಶೋಕ ನಗರದ ಗೀತಾ ಎಂಬುವವರ ಮನೆ ಬೀರುವಿನಲ್ಲಿದ್ದ ಚಿನ್ನಾಭರಣಗಳ ಪೈಕಿ 10 ಗ್ರಾಂ ತೂಕದ ಜುಮುಕಿ ಮತ್ತು 10 ಗ್ರಾಂ ತೂಕದ ಬಂಗಾರದ ಮಾಟಿ ನಾಪತ್ತೆಯಾಗಿವೆ. ಕುಟುಂಬದವರನ್ನು ವಿಚಾರಿಸಿದಾಗ ಯಾರಿಗು ಇದರ ಬಗ್ಗೆ … Read more

ಚಿತ್ರದುರ್ಗದ ವ್ಯಕ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಶಿವಮೊಗ್ಗ ಕೋರ್ಟ್‌ನಲ್ಲಿ ಆರೋಪಿಗಳಿಗೆ ಜಾಮೀನು

140823-Jayanagara-Police-Station

SHIVAMOGGA LIVE NEWS, 30 JANUARY 2024 ಶಿವಮೊಗ್ಗ : ನಕಲಿ ದಾಖಲೆ ಸೃಷ್ಟಿಸಿ ಅಪರಿಚಿತನೊಬ್ಬ ಶಿವಮೊಗ್ಗ ನ್ಯಾಯಾಲಯದಲ್ಲಿ (COURT) ಐವರು ಆರೋಪಿಗಳಿಗೆ ಜಾಮೀನು ನೀಡಿದ್ದಾನೆ. ಆರೋಪಿಯೊಬ್ಬ ವಿಚಾರಣೆಗೆ ಹಾಜರಾಗದಿದ್ದಾಗ ಜಾಮೀನುದಾರನಿಗೆ ನೊಟೀಸ್‌ ಜಾರಿಯಾಗಿದೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣವೊಂದರ ಆರೋಪಿಗಳಾದ ಇಬ್ರಾಹಿಂ ಖಲೀಲ್‌, ಫೈರೋಜ್‌, ಅರ್ಬಾಜ್‌, ನಯಾಜ್‌ ಅಹಮದ್‌, ಸುಹೇಲ್‌ ಎಂಬುವವರಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಜಗದೀಶ್‌ ಎಂಬುವವರು ಶಿವಮೊಗ್ಗ ನ್ಯಾಯಾಲಯದಲ್ಲಿ ಜಾಮೀನಾಗಿದ್ದರು. JAYANA ನಕಲಿ ದಾಖಲೆ ಸೃಷ್ಟಿಸಿ ಜಾಮೀನುದಾರ ಎಂದು ಬಿಂಬಿಸಿಕೊಂಡು … Read more

ಗಾಂಧಿ ಬಜಾರ್‌ ಬಳಿ ತರಕಾರಿ ಖರೀದಿಸಿ ಕಾರು ಬಳಿ ಹಿಂತಿರುಗಿದ ಮಾಲೀಕನಿಗೆ ಕಾದಿತ್ತು ಆಘಾತ, ಆಗಿದ್ದೇನು?

Shimoga-BH-Road-Near-Karnataka-Sanga

SHIVAMOGGA LIVE NEWS, 30 JANUARY 2024 ಶಿವಮೊಗ್ಗ : ಬಿ.ಹೆಚ್‌.ರಸ್ತೆಯಲ್ಲಿ ಕಾರಿನ ಹಿಂಬದಿ ಗಾಜು (GLASS) ಒಡೆದು ಬ್ಯಾಗ್‌ ಕಳ್ಳತನ ಮಾಡಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ರೋಹಿತ್‌ ಎಂಬುವವರು ಕಾರು ನಿಲ್ಲಿಸಿ ತರಕಾರಿ ಖರೀದಿಸಿ ಬರುವಷ್ಟರಲ್ಲಿ ಘಟನೆ ನಡೆದಿದೆ. ಕರ್ನಾಟಕ ಸಂಘದ ಮುಂಭಾಗ ರೋಹಿತ್‌ ಅವರು ತಮ್ಮ ಐ20 ಕಾರನ್ನು ಪಾರ್ಕಿಂಗ್‌ ಮಾಡಿದ್ದರು. ತರಕಾರಿ ಖರೀದಿಸಿ ಕಾರಿನ ಬಳಿ ಬಂದಾಗ ಬಲಭಾಗದ ಹಿಂಬದಿ ಗಾಜು ಒಡೆದಿರುವುದು ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಹಿಂಬದಿ ಸೀಟಿನ ಮೇಲಿಟ್ಟಿದ್ದ ಲ್ಯಾಪ್‌ಟಾಪ್‌ … Read more

ಮೆಗ್ಗಾನ್‌ ಆಸ್ಪತ್ರೆಯಲ್ಲಿ ಡ್ಯೂಟಿಗೆ ತೆರಳಿದ್ದ ವೈದ್ಯ, ಸ್ವಲ್ಪ ಹೊತ್ತಿನ ಬಳಿಕ ಹೊರ ಬಂದಾಗ ಕಾದಿತ್ತು ಆಘಾತ

160125 mc gann hospital general image

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬೈಕ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ಈಗ ವೈದ್ಯರೊಬ್ಬರ (Doctor) ಬೈಕ್‌ ಕಳುವಾಗಿದ್ದು, ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ಭಾರ್ಗವ್‌ ಎಂಬುವವರ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳ್ಳತನವಾಗಿದೆ. ಡಾ. ಭಾರ್ಗವ್‌ ಅವರು ಜ.23ರಂದು ರಾತ್ರಿ 8.45ಕ್ಕೆ ಮೆಗ್ಗಾನ್‌ ಆಸ್ಪತ್ರೆ ಆಡಳಿತ ಭವನದ ಮುಂಭಾಗ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದರು. ರಾತ್ರಿ 9.30ರ ಹೊತ್ತಿಗೆ ಗಮನಿಸಿದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. … Read more

ಕಲ್ಯಾಣ ಮಂಟಪದಲ್ಲಿ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Crime-News-General-Image

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಕಲ್ಯಾಣ ಮಂಟಪವೊಂದರಲ್ಲಿ ಮಹಿಳೆಯರ ಕೊಠಡಿಗೆ ನುಗ್ಗಿದ ಕಳ್ಳರು ಸೂಟ್‌ಕೇಸ್‌ನ ಜಿಪ್‌ ಹರಿದು 4.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewels) ಕಳ್ಳತನ ಮಾಡಿದ್ದಾರೆ. ಎನ್‌.ಟಿ.ರಸ್ತೆಯ ಫಲಕ್‌ ಪ್ಯಾಲೇಸ್‌ನಲ್ಲಿ ಘಟನೆ ಸಂಭವಿಸಿದೆ. ಉದ್ಯಮಿ ನವೀದ್‌ ನವಾಜ್‌ ಎಂಬುವವರು ಪತ್ನಿ ಮತ್ತು ಸಹೋದರಿಯೊಂದಿಗೆ ಸಂಬಂಧಿಯ ಮದುವೆಯಲ್ಲಿ ಭಾಗವಹಿಸಿದ್ದರು. ಮಹಿಳೆಯ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಸೂಟ್‌ ಕೇಸ್‌ ಇರಿಸಿದ್ದರು. ಜಿಪ್‌ಗಳಿಗೆ ಲಾಕ್‌ ಮಾಡಲಾಗಿತ್ತು. ದುಲ್ವಾ ಕಾರ್ಯಕ್ರಮ ಇದ್ದಿದ್ದರಿಂದ ಕುಟುಂಬದವರು ಅದರಲ್ಲಿ ಪಾಲ್ಗೊಂಡಿದ್ದರು. … Read more

ಶಿವಮೊಗ್ಗದಲ್ಲಿ ಬಸ್‌ ಹತ್ತಿ ಕುಳಿತ ನ್ಯಾಮತಿಯ ಮಹಿಳೆಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-Stand-Shivamogga

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಬಸ್‌ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ, ನಗದು ಕಳ್ಳತನ ಮುಂದುವರೆದಿದೆ. KSRTC ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತುವಾಗ ವ್ಯಾನಿಟಿ ಬ್ಯಾಗ್‌ನಿಂದ ಕಳ್ಳತನವಾಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯ ಆರೋಗ್ಯ ವಿಚಾರಿಸಿದ್ದ ಗೀತಾ ಎಂಬುವವರು ತಮ್ಮೂರು ನ್ಯಾಮತಿಗೆ ಹಿಂತಿರುಗುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ಗಮನಿಸಿದಾಗ ಜಿಪ್‌ ತೆರೆದಿರುವುದು ಗೊತ್ತಾಗಿದೆ. ಒಳಗಿದ್ದ ಪರ್ಸ್‌ ನಾಪತ್ತೆಯಾಗಿತ್ತು. … Read more

ಗಾಂಧಿ ಬಜಾರ್‌ ಬಳಿ ತರಕಾರಿ ಖರೀದಿಸಿ ಕಾರು ಬಳಿ ಹಿಂತಿರುಗಿದ ಮಾಲೀಕನಿಗೆ ಕಾದಿತ್ತು ಆಘಾತ, ಆಗಿದ್ದೇನು?

Shimoga-BH-Road-Near-Karnataka-Sanga

SHIVAMOGGA LIVE NEWS, 30 JANUARY 2024 ಶಿವಮೊಗ್ಗ : ಬಿ.ಹೆಚ್‌.ರಸ್ತೆಯಲ್ಲಿ ಕಾರಿನ ಹಿಂಬದಿ ಗಾಜು (Glass) ಒಡೆದು ಬ್ಯಾಗ್‌ ಕಳ್ಳತನ ಮಾಡಲಾಗಿದೆ. ಖಾಸಗಿ ಕಂಪನಿ ಉದ್ಯೋಗಿ ರೋಹಿತ್‌ ಎಂಬುವವರು ಕಾರು ನಿಲ್ಲಿಸಿ ತರಕಾರಿ ಖರೀದಿಸಿ ಬರುವಷ್ಟರಲ್ಲಿ ಘಟನೆ ನಡೆದಿದೆ. ಕರ್ನಾಟಕ ಸಂಘದ ಮುಂಭಾಗ ರೋಹಿತ್‌ ಅವರು ತಮ್ಮ ಐ20 ಕಾರನ್ನು ಪಾರ್ಕಿಂಗ್‌ ಮಾಡಿದ್ದರು. ತರಕಾರಿ ಖರೀದಿಸಿ ಕಾರಿನ ಬಳಿ ಬಂದಾಗ ಬಲಭಾಗದ ಹಿಂಬದಿ ಗಾಜು ಒಡೆದಿರುವುದು ಗಮನಕ್ಕೆ ಬಂದಿತ್ತು. ಪರಿಶೀಲಿಸಿದಾಗ ಹಿಂಬದಿ ಸೀಟಿನ ಮೇಲಿಟ್ಟಿದ್ದ ಲ್ಯಾಪ್‌ಟಾಪ್‌ … Read more