ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡ, ಏನೆಲ್ಲ ಸಮಸ್ಯೆ ಆಗ್ತಿದೆ?

Multi-level-car-parking-building-usage-delay

SHIVAMOGGA LIVE NEWS, 15 DECEMBER 2024 ಶಿವಮೊಗ್ಗ : ನಗರದ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ನೀಡಲು ನಿರ್ಮಾಣವಾಗಿರುವ ಮಲ್ಟಿ ಲೆವೆಲ್‌ ಪಾರ್ಕಿಂಗ್‌ (Parking) ಕಟ್ಟಡ ಧೂಳು ಹಿಡಿಯುತ್ತಿದೆ. ಉದ್ಘಾಟನೆಯಾಗಿ ವರ್ಷ ಕಳೆದರು ಇದು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಬಿ.ಹೆಚ್.‌ರಸ್ತೆಯಲ್ಲಿದ್ದ ಹೂವಿನ ಮಾರುಕಟ್ಟೆ ಸ್ಥಳದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ವತಿಯಿಂದ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟ ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಮತ್ತೊಮ್ಮೆ ಬಂದರೂ 25 ಕೋಟಿ … Read more

ಶಿವಮೊಗ್ಗದಲ್ಲಿ ಸೂಪರ್‌ ಮಾರ್ಕೆಟ್‌ಗಳ ಟ್ರೆಂಡ್‌ ಜೋರು, ನಿತ್ಯ ಸಾವಿರ ಸಾವಿರ ಗ್ರಾಹಕರು, ಕಾರಣವೇನು?

Super-Market-trend-in-Shimoga-city

SHIVAMOGGA LIVE NEWS, 12 DECEMBER 2024 ಶಿವಮೊಗ್ಗ : ನಗರದಲ್ಲಿ ಹೈಪರ್‌ ಮಾರ್ಕೆಟ್‌, ಸೂಪರ್‌ ಮಾರ್ಕೆಟ್‌ಗಳ (Market) ಟ್ರೆಂಡ್‌ ಬಿರುಸಾಗಿದೆ. ಸಿಟಿಯ ಉದ್ದಗಲಕ್ಕು ಅಲ್ಲಲ್ಲಿ ಹೈಟೆಕ್‌ ಶಾಪಿಂಗ್‌ ಸೆಂಟರ್‌ಗಳು ತಲೆ ಎತ್ತಿವೆ. ನಿತ್ಯ ಸಾವಿರಾರು ಮಂದಿ ಸೂಪರ್‌ ಮಾರ್ಕೆಟ್‌ನಲ್ಲಿ ಖರೀದಿ ಮಾಡುತ್ತಿದ್ದಾರೆ. ಕಿರಾಣಿ ಅಂಗಡಿಯಿಂದ ಶಿಫ್ಟ್‌ ಆದ ಗಿರಾಕಿಗಳು ನಗರದಲ್ಲಿ ಬೀದಿಗೊಂದು ಕಿರಾಣಿ ಅಂಗಡಿ ಇದೆ. ಹಾಗಿದ್ದೂ ಸೂಪರ್‌ ಮಾರ್ಕೆಟ್‌ಗಳಲ್ಲಿ ಜನಸಂದಣಿ ಜೋರಿರುತ್ತದೆ. ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಲಕ್ಷಾಂತರ ರೂ. ವಹಿವಾಟು … Read more

ಶುರುವಾಯ್ತು ಹೋರಿ ಹಬ್ಬದ ಕ್ರೇಜ್‌, ಈ ಬಾರಿ ಹೇಗಿದೆ ಉತ್ಸಾಹ?

Hori-Habba

SHIKARIPURA NEWS, 4 NOVEMBER 2024 : ಬೆಳಕಿನ ಹಬ್ಬ ದೀಪಾವಳಿ ಆಚರಣೆ ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹೋರಿ ಹಬ್ಬದ ಅಬ್ಬರ ಆರಂಭವಾಗಿದೆ. ಕೆಲವೆಡೆ ದೀಪಾವಳಿಯಂದೇ ಹೋರಿ ಹಬ್ಬ (Hori Habba) ನಡೆಸಲಾಗಿದೆ. ಇನ್ನು ವಿವಿಧೆಡೆ ದೊಡ್ಡ ಮಟ್ಟದ ಸ್ಪರ್ಧೆಗಳಿಗೆ ಸಿದ್ಧತೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಹಾವೇರಿ, ಉತ್ತರ ಕನ್ನಡ, ದಾವಣಗೆರೆ ಜಿಲ್ಲೆಯ ಹಲವು ಕಡೆ ಹೋರಿ ಹಬ್ಬ ಆಯೋಜಿಸಲಾಗುತ್ತದೆ. ಅಖಾಡಕ್ಕಿಳಿಯುವ ಪೈಲ್ವಾನರು ಹೋರಿಗಳನ್ನು ತಡೆದು ನಿಲ್ಲಿಸಬೇಕು. ಅವುಗಳಿಗೆ ಕಟ್ಟಿರುವ ಕೊಬ್ಬರಿ ಹರಿದುಕೊಳ್ಳಬೇಕು. ಇದು … Read more

ಶಿವಮೊಗ್ಗ ಡಿಸಿ ಕಚೇರಿ, ಯದ್ವತದ್ವ ಪಾರ್ಕಿಂಗ್‌ಗೆ ಲಗಾಮು, ವಾಹನ ನಿಲುಗಡೆಗೆ ಕಟ್ಟಬೇಕು ಫೀಸ್‌

101024 Vehicle parking at Shimoga DC office

SHIMOGA NEWS, 10 OCTOBER 2024 : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯದ್ವಾ ತದ್ವ ವಾಹನಗಳ ಪಾರ್ಕಿಂಗ್‌ಗೆ (Parking) ಬ್ರೇಕ್‌ ಬಿದ್ದಿದೆ. ಪಾರ್ಕಿಂಗ್‌ ಶುಲ್ಕ ವಿಧಿಸಲಾಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಸುಖಾಸುಮ್ಮನೆ ವಾಹನಗಳನ್ನು ತಂದು ನಿಲ್ಲಿಸುವವರಿಗೆ ಕಡಿವಾಣ ಬಿದ್ದಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೊಠಡಿಯೊಳಗೆ ಗಂಡ, ಹೆಂಡತಿ Digital Arrest, ಏನಿದು? ಇನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಹನಗಳ ಪಾರ್ಕಿಂಗ್‌ ಶುಲ್ಕ ದುಬಾರಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣಪುಟ್ಟ ಕೆಲಸಕ್ಕೆಂದು ಹಳ್ಳಿಗಳಿಂದ ಬರುವವರು, … Read more

ರೈಲಲ್ಲಿ ಶಿವಮೊಗ್ಗಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿದೆ ಮೃತ್ಯು ಕೂಪ, ರಕ್ತ ಹೀರಲು ಕಾಯುತ್ತಿದೆ ಚರಂಡಿ ಮುಚ್ಚಳ

Pot-holes-at-KEB-Cirlce-in-Shimoga-near-railway-station

SHIMOGA, 8 SEPTEMBER 2024 : ಮಳೆಗಾಲ ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರದ ರಸ್ತೆಗಳಲ್ಲಿ ಪಾತಾಳ ಕಾಣುವಂತಹ ಗುಂಡಿಗಳು (Pot Holes) ಸೃಷ್ಟಿಯಾಗಿವೆ. ವಾಹನ ಸವಾರರ ಪಾಲಿಗೆ ಇವು ಅಕ್ಷರಶಃ ಮೃತ್ಯು ಕೂಪವಾಗಿವೆ. ಕಳೆದ ತಿಂಗಳು ಶಿವಮೊಗ್ಗ ನಗರದಲ್ಲಿ ಮಳೆಯಾಗುತ್ತಿದ್ದಂತೆ ನಾಯಿ ಕೊಡೆಗಳಂತೆ ಗುಂಡಿಗಳು ಪ್ರತ್ಯಕ್ಷವಾಗಿವೆ. ಹೆದ್ದಾರಿಯಿಂದ ಹಿಡಿದು ಕಿರುದಾರಿವರೆಗೆ ಡಾಂಬಾರು ಕಿತ್ತು ಬಂದು, ಅಡಿ ಲೆಕ್ಕದ ಆಳದ ಗುಂಡಿ ಬಿದ್ದಿವೆ. ರೈಲು ನಿಲ್ದಾಣದ ಕಡೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್‌ ಕಡೆಗೆ ತಿರುವು ಪಡೆಯುವಲ್ಲಿ ಎರಡು ಬೃಹತ್‌ ಗುಂಡಿಗಳಾಗಿವೆ. … Read more

ಶಿವಮೊಗ್ಗದ ರೋಡ್‌ ರೋಮಿಯೋಗಳಿಗೆ ಕಾದಿದೆ ಗ್ರಹಚಾರ, ಇವತ್ತಿಂದ ಚೆನ್ನಮ್ಮ ಪಡೆ ಆರಂಭ, ಏನಿದು?

Chennamma-Pade-by-Shimoga-Police.

SHIVAMOGGA LIVE NEWS | 27 MAY 2024 SHIMOGA : ರೋಡ್‌ ರೋಮಿಯೋಗಳಿಗೆ (Road Romeos) ಬಿಸಿ ಮುಟ್ಟಿಸಲು ಪೊಲೀಸ್‌ ಇಲಾಖೆ ಈ ಹಿಂದೆ ಓಬವ್ವ ಪಡೆದ ಆರಂಭಿಸಿತ್ತು. ಈಗ ಆ ಪಡೆಗೆ ಮರು ಜೀವ ನೀಡಲಾಗಿದೆ. ಚೆನ್ನಮ್ಮ ಪಡೆ ಎಂಬ ಹೊಸ ಹೆಸರಿನೊಂದಿಗೆ ಇವತ್ತಿನಿಂದ ಗಸ್ತು ಆರಂಭಿಸಲಿದೆ. ಹೊಸ ಕಾರು, ವಿನೂತನ ಲೋಗೊ ಓಬವ್ವ ಪಡೆ ಮಾದರಿಯಲ್ಲೇ ಚೆನ್ನಮ್ಮ ಪಡೆಗು ಪ್ರತ್ಯೇಕ ವಾಹನ ನಿಗದಿಪಡಿಸಲಾಗಿದೆ. ಏರ್ಟಿಗಾ ವಾಹನವನ್ನು ಪಡೆಗೆ ಮೀಸಲಿರಿಸಲಾಗಿದೆ. ಓಬವ್ವ ಪಡೆಗೆ ಪ್ರತ್ಯೇಕ … Read more

ಶಿವಮೊಗ್ಗದ ಹರಕೆರೆ ರಾಮೇಶ್ವರ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಕುತೂಹಲಕಾರಿ ಪಾಯಿಂಟ್‌

Harakere-Temple-Special-Shivarathri

SHIVAMOGGA LIVE NEWS | 7 MARCH 2024 SHIMOGA : ಶಿವರಾತ್ರಿಯಂದು ಹರಕೆರೆಯ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ. ಪರಮೇಶ್ವರನನ್ನು ಧ್ಯಾನಿಸಿ, ಪ್ರಾರ್ಥಿಸಿ, ಸಂಕಷ್ಟ ನಿವಾರಣೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ದೇವಾಲಯದ ಆವರಣದಲ್ಲಿರುವ ಬೃಹತ್ ಶಿವನ ಮೂರ್ತಿಗೆ ಕೈ ಮುಗಿದು, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ರಾಮಾಯಣ ಕಾಲದ ಹಿನ್ನೆಲೆ ಇದೆ. ಬೇಲೂರು, ಹಳೆಬೀಡು ದೇಗುಲಗಳ ಜೊತೆಗೆ ನಂಟು ಇದೆ. ಈ ದೇಗುಲ ಶೃಂಗೇರಿ ಮಠದ ನಿರ್ವಹಣೆಯಲ್ಲಿದೆ. ಇಲ್ಲಿರುವ ಲಿಂಗದ … Read more

ಶಿವಮೊಗ್ಗದಲ್ಲಿ ನಂಬರ್‌ ಪ್ಲೇಟ್‌ ಅಂದ್ರೆ ಕೆಲ ಬೈಕ್‌ ಸವಾರರಿಗೆ ಅಲರ್ಜಿ, ರಿಜಿಸ್ಟ್ರೇಷನ್‌ ಇಲ್ಲದೆ ಸರ್ಕಾರಿ ವಾಹನ ಓಡಾಡ್ತಿರೋದ್ಯಾಕೆ?

No-Number-Plate-vehicles-in-Shimoga-city.

SHIVAMOGGA LIVE NEWS | 01 MARCH 2024 SHIMOGA : ನಗರದಲ್ಲಿ ನಂಬರ್‌ ಪ್ಲೇಟ್‌ ರಹಿತ ವಾಹನಗಳ ಹಾವಳಿ ಹೆಚ್ಚಾಗಿದೆ. ಸವಾರರು ನಂಬರ್‌ ಪ್ಲೇಟ್‌ ಇಲ್ಲದೆ, ಹೆಲ್ಮೆಟ್‌ ಧರಿಸದೆ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕಣ್ತಪ್ಪಿಸಿ ಸಂಚರಿಸುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮ ಕಡ್ಡಾಯ ಪಾಲನೆಗೆ ಪೊಲೀಸರು ಒತ್ತು ನೀಡಿದ್ದಾರೆ. ವಿವಿಧ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಸ್ಮಾರ್ಟ್‌ ಕ್ಯಾಮರಾಗಳನ್ನು ಬಳಸಿ ದಂಡ ವಿಧಿಸಲಾಗುತ್ತಿದೆ. ದಂಡ ಪವಾತಿಸದವರನ್ನು ಪತ್ತೆ ಹಚ್ಚಿ ಉದ್ದದ ರಶೀದಿ ನೀಡಿ, ದಂಡ ಕಟ್ಟಿಸಿಕೊಳ್ಳಲಾಗಿದೆ. … Read more

ಎಚ್ಚೆತ್ತುಕೊಳ್ಳದಿದ್ದರೆ ಗಾಡಿಕೊಪ್ಪದಲ್ಲಿ ಮತ್ತಷ್ಟು ಅವಘಡ ನಿಶ್ಚಿತ, ಮೈ ಜುಮ್‌ ಅನಿಸುತ್ತೆ ಸಿಸಿಟಿವಿ ದೃಶ್ಯ

CCTV-Visuals-of-gadikoppa-incident-on-january-2

SHIVAMOGGA LIVE NEWS | 7 JANUARY 2024 SHIMOGA : ಗಾಡಿಕೊಪ್ಪದಲ್ಲಿ ಜ.2ರಂದು ಸಂಭವಿಸಿದ ಅಪಘಾತದ ಸಿಸಿಟಿವಿ ದೃಶ್ಯ ಈಗ ವೈರಲ್‌ ಆಗಿದೆ. ಘಟನೆಯಲ್ಲಿ ಶಾಲೆ ವಿದ್ಯಾರ್ಥಿನಿ ಮತ್ತು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗಲೆ ಎಚ್ಚೆತ್ತುಕೊಳ್ಳದೆ ಇದ್ದರೆ ಇಲ್ಲಿ ಇನ್ನಷ್ಟು ಅಪಘಾತ ಸಂಭವಿಸುವ ಸಾಧ್ಯತೆ ಇದೆ.   ಹೇಗಾಯ್ತು ಅಪಘಾತ? ಆಯನೂರು ಕಡೆಯಿಂದ ವೇಗವಾಗಿ ಬಂದ ಅಪಾಚೆ ಬೈಕ್‌, ಮೊದಲು 12 ವರ್ಷದ ಬಾಲಕಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ರಸ್ತೆಯ ಎಡ ಭಾಗದಲ್ಲಿ ಅಂಗಡಿಯೊಂದರ ಮುಂದೆ … Read more

ಶಿವಮೊಗ್ಗದ ಈ 3 ಸಿಗ್ನಲ್‌ನಲ್ಲಿ ಸ್ವಲ್ಪ ಯಾಮಾರಿದರೆ ಜೀವವೇ ಹೋಗುತ್ತೆ, ಕಾರಣವೇನು?

Dangerous-pot-holes-at-three-signals-in-Shimoga.

SHIVAMOGGA LIVE NEWS | 3 JANUARY 2023 SHIMOGA : ಕೆಂಪು ಲೈಟ್‌ ಹೊತ್ತಿಕೊಳ್ಳುವ ಮುನ್ನ ಸಿಗ್ನಲ್‌ ದಾಟಬೇಕು ಎಂದು ವಾಹನ ಸವಾರರು ಧಾವಂತದಲ್ಲಿ ನುಗ್ಗುವುದು ಸಾಮಾನ್ಯ. ಸಿಗ್ನಲ್‌ ಲೈಟ್‌ ಇಲ್ಲದೆ ಇದ್ದರಂತು ವಾಹನಗಳ ವೇಗ ತಗ್ಗುವುದೇ ಇಲ್ಲ. ಅದರೆ ನಗರದ ಮೂರು ಕಡೆ ಸಿಗ್ನಲ್‌ನಲ್ಲಿ ಧಾವಂತ ತೋರಿಸಿದರೆ, ಕತ್ತಲಲ್ಲಿ ಸ್ವಲ್ಪ ಮೈಮರೆತರೆ ದ್ವಿಚಕ್ರ ವಾಹನ ಸವಾರರು ಕೈ, ಕಾಲು ಕಳೆದುಕೊಳ್ಳುವುದು ನಿಶ್ಚಿತ. ಹಣೆಬರಹ ಸರಿ ಇಲ್ಲದೆ ಇದ್ದರೆ ಪ್ರಾಣಕ್ಕೆ ಸಂಚಕಾರ ಎದುರಾಗಲಿದೆ. ಎಲ್ಲೆಲ್ಲಿ ಏನಿದು … Read more