ಭದ್ರಾವತಿಯಲ್ಲಿ ಬೆಳ್ಳಂಬೆಳಗ್ಗೆ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸ್‌, ಏನಿದು ಕೇಸ್‌?

Police-Shoot-nasrulla-on-leg-at-Bhadravathi

ಭದ್ರಾವತಿ : ಪಿಸ್ತೂಲ್‌ ಮತ್ತು ಡ್ರಾಗರ್‌ನಿಂದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗಂಡು ಹಾರಿಸಿದ್ದಾರೆ. ನ್ಯೂ ಟೌನ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಬಂದೂಕಿನಿಂದ ಹಾರಿದ ಗುಂಡು ಆರೋಪಿ ನಸ್ರು ಅಲಿಯಾಸ್‌ ನಸ್ರುಲ್ಲಾ ಎಂಬಾತನ ಎಡಗಾಲು ಸೀಳಿದೆ. ಪ್ರಕರಣವೊಂದರಲ್ಲಿ ಪರಾರಿಯಾಗಿದ್ದ ನಸ್ರುಲ್ಲಾನನ್ನು ಬಂಧಿಸಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ನಸ್ರು ಇರುವ ಜಾಗಕ್ಕೆ ಪೊಲೀಸರು ತೆರಳಿದಾಗ ಆತ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪಿಸ್ತೂಲು, ಡ್ರ್ಯಾಗರ್‌ನಿಂದ ದಾಳಿಗೆ ಯತ್ನ ಓಲ್ಡ್‌ ಟೌನ್‌ ಠಾಣೆ … Read more

ಮಹಿಳೆ ಸ್ನಾನ ಮಾಡುವಾಗ ಇಣುಕಿದ ಯುವಕ, ಅರೆಸ್ಟ್‌

Bhadravathi-News-Update

ಭದ್ರಾವತಿ : ಮಹಿಳೆಯೊಬ್ಬರು ಸ್ನಾನ ಮಾಡುವಾಗ ಇಣುಕಿ ನೋಡಿದ ಯುವಕನನ್ನು (Youth) ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಹೊಸಮನೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭಸಿದೆ. ಮನೋಜ್‌ (25) ಎಂಬಾತನನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರು ಸ್ನಾನ ಮಾಡುವಾಗ ಮನೋಜ್‌ ಇಣುಕಿ ನೋಡುತ್ತಿದ್ದ. ಮಹಿಳೆಯ ಪತಿ ಇದನ್ನು ಗಮನಿಸಿದಾಗ ಮನೋಜ್‌ ಅಲ್ಲಿಂದ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ. ದೂರು ನೀಡಿದ ಹಿನ್ನೆಲೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ » ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ, ನೀರಿನಲ್ಲಿ ಮುಳುಗಿ ಸಾವು

ಭದ್ರಾವತಿಯ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

ಭದ್ರಾವತಿ : ನಗರ ಮೆಸ್ಕಾಂ ಉಪ ವಿಭಾಗದಲ್ಲಿ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾರ್ಯ ಇರಲಿದೆ. ಆದ್ದರಿಂದ ಏ.2 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಭದ್ರಾವತಿಯ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ನಗರ ಮೆಸ್ಕಾಂ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನ್ನಾಪುರ, ಹುತ್ತಾಕಾಲೋನಿ, ಅಪ್ಪರ್ ಹುತ್ತಾ, ಜಿಂಕ್ ಲೈನ್, ವೇಲೂರ್ ಶೆಡ್, ಭಂಡಾರಹಳ್ಳಿ ಇನ್ನು ಮುಂತಾದ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಇವತ್ತು ಮಳೆ ಅಲರ್ಟ್‌, … Read more

BREAKING NEWS – ಭದ್ರಾವತಿಯಲ್ಲಿ ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿದ ಲೇಡಿ ಇನ್ಸ್‌ಪೆಕ್ಟರ್‌

breaking news graphics

ಭದ್ರಾವತಿ : ಬಂಧಿಸಲು ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ ಎಸ್ಕೇಪ್‌ ಆಗಲು ಯತ್ನಿಸಿದ್ದ ರೌಡಿ ಶೀಟರ್‌ (Rowdy Sheeter) ಕಡೇಕಲ್‌ ಅಬೀದ್‌ ಕಾಲಿಗೆ ಗುಂಡು ಹಾರಿಸಲಾಗಿದೆ. ಪೇಪರ್‌ ಟೌನ್‌ ಇನ್ಸ್‌ಪೆಕ್ಟರ್‌ ನಾಗಮ್ಮ, ರೌಡಿ ಶೀಟರ್‌ ಕಡೇಕಲ್‌ ಅಬೀದ್‌ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ. ಕೊಲೆ ಯತ್ನ ಪ್ರಕರಣದರಲ್ಲಿ ರೌಡಿ ಶೀಟರ್‌ (Rowdy Sheeter) ಕಡೇಕಲ್‌ ಅಬೀದ್‌ ತಲೆ ಮರೆಸಿಕೊಂಡಿದ್ದ. ಕಳೆದ ಒಂದು ತಿಂಗಳಿನಿಂದ ಈತನಿಗಾಗಿ ಪೊಲೀಸರು ಶೋಧಿಸುತ್ತಿದ್ದರು. ಇಂದು ಈತನ … Read more

ಅಗತ್ಯಬಿದ್ದರೆ ಭದ್ರಾವತಿ ಶಾಸಕರೊಂದಿಗೆ ದೆಹಲಿಗೆ ತೆರಳಿ ಚರ್ಚೆಗೆ ಸಿದ್ಧ, ಸಚಿವ ಮಧು ಬಂಗಾರಪ್ಪ ಪ್ರಕಟ

Minister-Madhu-Bangarappa-and-MLA-Sangameshwara-at-Bhadravathi

ಭದ್ರಾವತಿ : ಮೈಸೂರು ಪೇಪರ್‌ ಮಿಲ್ಸ್‌ (ಎಂ.ಪಿ.ಎಂ) ಕಾರ್ಖಾನೆ (Factory) ಪುನಾರಂಭಕ್ಕೆ ಶಾಸಕ ಸಂಗಮೇಶ್ವರ ಅವರು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೆ ಶಾಸಕರೊಂದಿಗೆ ದೆಹಲಿಗೆ ತೆರಳಿ ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಭದ್ರಾವತಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಂಘಟನಾ ಸಭೆ ಉದ್ಘಾಟಿಸಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು. ರಾಜ್ಯದಲ್ಲಿ ಹಣಕಾಸು ಕೊರತೆ ಇಲ್ಲ. ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ. ಹಣದ ಕೊರತೆ ಉಂಟಾಗಿದ್ದರೆ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಬಿಸಿಯೂಟ, … Read more

ಭದ್ರಾವತಿಯಲ್ಲಿ ಮನೆ ಮೇಲೆ ಪೊಲೀಸ್‌ ದಾಳಿ, ಓರ್ವ ವಶಕ್ಕೆ, ಏನೇನೆಲ್ಲ ಸಿಕ್ತು?

200123 Police Jeep With Light jpg

ಭದ್ರಾವತಿ : ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ (Raid) ನಡೆಸಿದ ಪೊಲೀಸರು ನೂರು ಕೆ.ಜಿ ಗೋಮಾಂಸ ಮತ್ತು ಗೋವುಗಳನ್ನು ರಕ್ಷಿಸಲಾಗಿದೆ. ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿಯ ಅನ್ವರ್‌ ಕಾಲೋನಿಯ ಮನೆಯೊಂದರಲ್ಲಿ ಗೋವಧೆ ಮಾಡಿ ಗೋಮಾಂಸ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ (Raid) ನಡೆಸಿದ್ದಾರೆ. ದಾಳಿ ವೇಳೆ 104 ಕೆ.ಜಿ ಗೋಮಾಂಸ, ಕಬ್ಬಿಣದ ಮಚ್ಚು, ಚೂರಿ, ಎಲೆಕ್ಟ್ರಾನಿಕ್‌ ತೂಕದ ಯಂತ್ರ, 15 ಕಬ್ಬಿಣದ ಹುಕ್ಕುಗಳು, 810 ರೂ. ನಗದು ಪತ್ತೆಯಾಗಿದೆ … Read more

ಲಂಡನ್‌ನಿಂದ ಬಂತು ಫೋನ್‌, ಮೆಸೇಜ್‌, ಭದ್ರಾವತಿ ವ್ಯಕ್ತಿಗೆ ಕಾದಿತ್ತು ಬಿಗ್‌ ಶಾಕ್‌, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ : ಲಂಡನ್‌ನಿಂದ (London) ಬೆಲೆ ಬಾಳುವ ಗಿಫ್ಟ್‌ ಬಂದಿದೆ ಎಂದು ನಂಬಿಸಿ ಭದ್ರಾವತಿಯ ವ್ಯಕ್ತಿಯೊಬ್ಬರಿಗೆ (ಹೆಸರು ಗೌಪ್ಯ) 8.56 ಲಕ್ಷ ರೂ. ವಂಚಿಸಲಾಗಿದೆ. ಇದೇ ಮಾದರಿ ಈ ಹಿಂದೆಯು ಹಲವರಿಗೆ ವಂಚನೆಯಾಗಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಲಂಡನ್‌ನಿಂದ ಬಂತು ಫೋನ್‌ ಲಂಡನ್‌ನಿಂದ (London) ಮೈಕಲ್‌ ಮ್ಯಾಕ್‌ಡೊನಾಲ್ಡ್‌ ಹೆಸರಿನಲ್ಲಿ ಕರೆ ಮತ್ತು ಮೆಸೇಜ್‌ ಮಾಡಿ 43 ಲಕ್ಷ ರೂ. ಮೌಲ್ಯದ ಗಿಫ್ಟ್‌ ಕಳುಹಿಸುತ್ತಿರುವುದಾಗಿ ಭದ್ರಾವತಿಯ ವ್ಯಕ್ತಿಗೆ ನಂಬಿಸಿದ್ದ. ಗಿಫ್ಟ್‌ ಕಳುಹಿಸಲು ಕಂಪನಿಯ ವೇಯ್ಟಿಂಗ್‌ ಚಾರ್ಜ್‌ 5 ಸಾವಿರ … Read more

ಅಡಿಕೆ ಖೇಣಿದಾರರ ಸಮಾವೇಶ | ಕಾಗೋಡು ತಿಮ್ಮಪ್ಪಗೆ ಸನ್ಮಾನ – 3 ಫಟಾಫಟ್‌ ಸುದ್ದಿಗಳು

9-AM-FATAFAT-NEWS.webp

ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, ಎಲ್ಲೆಲ್ಲಿ? ಹೇಗಿದೆ ಹೋಳಿ ಹಬ್ಬದ ಸಿದ್ಧತೆ?

all-set-for-holi-festival-in-Shimoga-city

ಶಿವಮೊಗ್ಗ : ಹೋಳಿ (Holi) ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಮನ್ಮಥ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ಹಲವು ಕಡೆ ಗುರುವಾರ ಮನ್ಮಥನ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಲಾಗಿದೆ. ಹಬ್ಬದ ನಂತರ ಕಾಮದಹನ ಮಾಡಲಾಗುತ್ತದೆ. ಶಿವಮೊಗ್ಗದಲ್ಲಿ ಮಾ.15ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಂಭ್ರಮದ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಗೋಪಿ ವೃತ್ತದಲ್ಲಿ ರೈನ್‌ ಡಾನ್ಸ್‌ ಆಯೋಜಿಸಲಾಗಿದೆ. ಕಾಮಣ್ಣನ ಪ್ರತಿಮೆ ಪ್ರತಿಷ್ಠಾಪನೆ ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನ, … Read more

ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

Shivamogga-Court-Balaraja-Urs-Road

ಶಿವಮೊಗ್ಗ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Jail) ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ. ಏನಿದು ಕೇಸ್‌? 2022ರಲ್ಲಿ ಭದ್ರಾವತಿ ನ್ಯೂ ಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 19 ವರ್ಷದ ಯುವಕನೊಬ್ಬ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂಬಂಧ ಬಾಲಕಿ ನೀಡಿದ್ದ ದೂರಿನ ಹಿನ್ನೆಲೆ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. … Read more