ಭದ್ರಾವತಿ ತಹಶೀಲ್ದಾರ್ ಸೇವೆಯಿಂದ ದಿಢೀರ್ ಬಿಡುಗಡೆ, ಲೈಂಗಿಕ ಕಿರುಕುಳದ ಆರೋಪ, ಬಂಧನಕ್ಕೆ ಆಗ್ರಹ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 15 ಸೆಪ್ಟಂಬರ್ 2020 ತಕ್ಷಣದಿಂದ ಜಾರಿಗೆ ಬರುವಂತೆ ಭದ್ರಾವತಿ ತಹಶೀಲ್ದಾರ್ ಶಿವಕುಮಾರ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ತಹಶೀಲ್ದಾರ್ ಅವರಿಗೆ ಭದ್ರಾವತಿಯ ಪ್ರಭಾರ ಜವಾಬ್ದಾರಿ ವಹಿಸಲಾಗಿದೆ. ಈ ಸಂಬಂಧ ಸೋಮವಾರ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ತಹಶೀಲ್ದಾರ್ ದಿಢೀರ್ ಬಿಡುಗಡೆ ಏಕೆ? ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಮಹಿಳೆಯೊಬ್ಬರಿಗೆ ತಹಶೀಲ್ದಾರ್ ಅವರು ಲೈಂಗಿಕ … Read more

ವಿಭಿನ್ನವಾಗಿ ಅಪ್ಪಾಜಿಗೌಡರನ್ನು ಸ್ಮರಿಸಿಕೊಂಡ ಶಂಕರಘಟ್ಟದ ಅಭಿಮಾನಿಗಳು

140920 Appaji Gowda Fans at Shankaragatta 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 14 ಸೆಪ್ಟಂಬರ್ 2020 ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರ ಸ್ಮರಣಾರ್ಥ ಶಂಕರಘಟ್ಟದ ಅಭಿಮಾನಿಗಳು ಹಣ್ಣಿನ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿದ್ದರು. ಇಲ್ಲಿನ ಎಂ.ಜೆ.ಅಪ್ಪಾಜಿಗೌಡರ ಅಭಿಮಾನಿ ಬಳಗ ಮತ್ತು ಗ್ರೀನ್ ಫೌಂಡೇಶನ್ ವತಿಯಿಂದ ಸಸಿಗಳನ್ನು ವಿತರಿಸಲಾಯಿತು. ಶಂಕರಘಟ್ಟ ಮತ್ತು ಸುತ್ತಮುತ್ತಲ ಗ್ರಾಮಗಳ ಪ್ರಮುಖರಿಗೆ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು. ಸುತ್ತಮುತ್ತ ಗ್ರಾಮಗಳ ಶಾಲಾ ಮಕ್ಕಳಿಗೆ ಅನುಕೂಲವಾಗಲಿ ಎಂದು ಶಾಲೆಗಳ ಬಳಿ ಈ ಹಣ್ಣಿನ ಸಸಿಗಳನ್ನು ನೆಡಲಾಯಿತು. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ … Read more

ಅಪ್ಪಾಜಿಗೌಡರ ಸಮಾಧಿಗೆ ಕುಟುಂಬದಿಂದ ಪೂಜೆ, ಭದ್ರಾವತಿಯ ಮನೆಯಲ್ಲಿ ಮಾಜಿ ಸಿಎಂ ನಮನ

130920 AppajiGowda Pooje at BRP 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020 ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರು ಕೊನೆಯುಸಿರೆಳೆದು ಇವತ್ತಿಗೆ ಹನ್ನೊಂದನೆ ದಿನ. ಈ ಹಿನ್ನೆಲೆಯಲ್ಲಿ ಗೋಣಿಬೀಡು ಗ್ರಾಮದಲ್ಲಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಅಪ್ಪಾಜಿಗೌಡ ಅವರ ಕುಟುಂಬದವರು, ನಂಟರು, ಇಷ್ಟರು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಪ್ಪಾಜಿಗೌಡ ಅವರ ಪರವಾಗಿ ಅಭಿಮಾನಿಗಳು ಘೋಷಣೆ ಕೂಗಿದರು. ಭದ್ರಾವತಿಯಲ್ಲಿ ಅಪ್ಪಾಜಿಗೌಡ ಅವರ ಮನೆಯಲ್ಲೂ ಪೂಜೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಪೂಜೆಯಲ್ಲಿ … Read more

ಅಪ್ಪಾಜಿಗೌಡರನ್ನು ಸ್ಮರಿಸಿದ ಮಾಜಿ ಪ್ರಧಾನಿ, ಶ್ರದ್ಧಾಂಜಲಿ ಸಭೆಗೆ ಸಂತಾಪ ಸಂದೇಶ, ಏನು ಹೇಳಿದ್ದಾರೆ ದೇವೇಗೌಡರು?

030920 MJ Appaji Gowda Bhadravathi MLA 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020 ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರನ್ನು ಮಾಜಿ ಪ್ರಧಾನಿ ಹೆಚ್‍.ಡಿ.ದೇವೇಗೌಡ ಸ್ಮರಿಸಿಕೊಂಡಿದ್ದಾರೆ. ಶ್ರದ್ಧಾಂಜಲಿ ಸಭೆಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದರು. ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಅಪ್ಪಾಜಿ ಗೌಡ ಅವರನ್ನು ಸ್ಮರಿಸಿಕೊಂಡು, ತಾನು, ತನ್ನ ಕುಟುಂಬ ಎಂದು ಬದುಕದೆ ಹಗಲು ರಾತ್ರಿ ರೈತರು, ಕಾರ್ಮಿಕರು, ಬಡವರು ಎಂದು ಮೀಸಲಿಟ್ಟಿದ್ದರು ಎಂದರು. ಆ ಬಳಿಕ ದೇವೇಗೌಡರ ಸಂತಾಪ ಸಂದೇಶವನ್ನು ಸಭೆಯಲ್ಲಿ ಓದಿದರು. ಸಂತಾಪ ಸಂದೇಶದಲ್ಲಿ ಏನಿತ್ತು? ಶಿವಮೊಗ್ಗ … Read more

ಅಪ್ಪಾಜಿಗೌಡ ಶ್ರದ್ಧಾಂಜಲಿ ಸಭೆ, ಸರ್ವ ಧರ್ಮದ ಗುರುಗಳು ಭಾಗಿ, ಯಾರೆಲ್ಲ ಏನೆಲ್ಲ ಹೇಳಿದರು?

130920 Swamijis in Appaji Gowda Shradanjali 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020 ಭದ್ರಾವತಿಯಲ್ಲಿ ಮಾಜಿ ಶಾಸಕ  ಎಂ.ಜೆ.ಅಪ್ಪಾಜಿಗೌಡ ಅವರ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಸರ್ವಧರ್ಮದ ಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಅಪ್ಪಾಜಿಗೌಡ ಅವರ ಕುರಿತು ಮಾತನಾಡಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ : ಆರೋಗ್ಯ ನೋಡಿಕೊಳ್ಳಿ ಎಂದು ಹೇಳುತ್ತಿದ್ದೆ. ಜನ ಸೇವೆಯಲ್ಲಿರುವವರು ಆರೋಗ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿರಲು ಆಗುವುದಿಲ್ಲ. ನಾಲ್ಕು ಜನಕ್ಕೆ ಒಳ್ಳೆಯದಾದರೆ ಸಾಕು ಎಂದು ಹೇಳುತ್ತಿದ್ದರು. ಮಾಜಿ ಪ್ರಧಾನಿ ಹೆಚ್‍.ಡಿ.ದೇವೇಗೌಡರು ಹಾಗೆ ಬದುಕಿದ್ದಾರೆ ಅಂತಾ … Read more

ಅಪ್ಪಾಜಿಗೌಡ ಸಾವಿನ ಕುರಿತು ಮಾಜಿ ಸಿಎಂ ಅನುಮಾನ, ಅವರಿಗೆ ಕರೋನ ಬಂದಿರಲಿಲ್ಲ ಅಂದರು ಅಪ್ಪಾಜಿ ಪುತ್ರ

130920 Kumaraswamy Visit Appaji Gowda House 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಸೆಪ್ಟಂಬರ್ 2020 ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ನಿಧನದ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ. ಅಪ್ಪಾಜಿಗೌಡ ಅವರಿಗೆ ಆಗದವರು ಅವರ ಸಾವಿಗೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಅಪ್ಪಾಜಿಗೌಡ ಅವರ ಪುಣ್ಯ ಸ್ಮರಣೆ ಕಾರ್ಯಕ್ಕೆ ಭದ್ರಾವತಿಗೆ ಆಗಮಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಪ್ಪಾಜಿಗೌಡ ಅವರ ಸಾವಿನ ಕುರಿತು ಅವರ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಜನಪ್ರತಿನಿಧಿಯೊಬ್ಬರಿಗೆ ವೆಂಟಿಲೇಟರ್ ಸಿಗಲಿಲ್ಲ ಅಂದರೆ … Read more

ಭದ್ರಾವತಿ ಬಸ್ ನಿಲ್ದಾಣಕ್ಕೆ ಅಪ್ಪಾಜಿಗೌಡ ಹೆಸರಿಡುವಂತೆ ಆಗ್ರಹ, ಸತ್ಯಾಗ್ರಹ ನಡೆಸಲು ನಿರ್ಧಾರ

030920 MJ Appaji Gowda Bhadravathi MLA 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020 ಭದ್ರಾವತಿ KSRTC ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಅಪ್ಪಾಜಿಗೌಡ ಅವರ ಹೆಸರಿಡಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎನ್.ರಾಜು, ಭದ್ರಾವತಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂದೆ ಸೆಪ್ಟೆಂಬರ್ 14ರಂದು ಸತ್ಯಾಗ್ರಹ ನಡೆಸಲಾಗುತ್ತದೆ. ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಸತ್ಯಾಗ್ರಹಕ್ಕೆ ಚಾಲನೆ ನೀಡಲಿದ್ದಾರೆ. ಎಂ.ಜೆ.ಅಪ್ಪಾಜಿಗೌಡ ಅಭಿಮಾನಿಗಳ ಸಂಘದ ಅಧ್ಯಕ್ಷ ಕರುಣಾಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ … Read more

ಸಾಗರ, ಭದ್ರಾವತಿ, ಶಿಕಾರಿಪುರದಲ್ಲಿ ಪೊಲೀಸರ ದಾಳಿ, ಅಪಾರ ಪ್ರಮಾಣದ ಗಾಂಜಾ ವಶಕ್ಕೆ

110920 Ganja Seized in Shikaripura 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಸೆಪ್ಟಂಬರ್ 2020 ಗಾಂಜಾ ಮಾರಾಟಗಾರರು, ಬೆಳಗಾರರ ವಿರುದ್ಧ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ಬಿರುಸುಗೊಳಿಸಿದ್ದಾರೆ. ಜಿಲ್ಲೆಯ ಮೂರು ಕಡೆ ದಾಳಿ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಎಲ್ಲೆಲ್ಲಿ ದಾಳಿಯಾಗಿದೆ? ಪ್ರಕರಣ 1 | ಭದ್ರಾವತಿ ಹಳೇನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಶೇಖ್ ಅಬೂಬ್, ವೆಲ್ಡಿಂಗ್ ಕೆಲಸಗಾರ ಜಾಫರ್, ಸಾದಿಕ್, ಸಾದಿಕ್ ಪಾಷಾ ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ 1.250 ಕೆ.ಜಿ ಗಾಂಜಾ, ಎರಡು ಬೈಕ್‍ಗಳನ್ನು … Read more

ಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ, ಒಳಹರಿವು ಎಷ್ಟಿದೆ? ಜಲಾಶಯ ನೀರಿನ ಮಟ್ಟ ಎಷ್ಟಿದೆ?

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 10 ಸೆಪ್ಟಂಬರ್ 2020 ಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಬಾಳೆಹೊನ್ನೂರು, ಕಳಸ, ಮೂಡಿಗೆರೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 184.4 ಅಡಿಗೆ ಏರಿಕೆಯಾಗಿದೆ. ಒಳಹರಿವು 4,786 ಕ್ಯೂಸೆಕ್ ಇದೆ. 1,186 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಒಳಹರಿವು ಪ್ರಮಾಣ ಹೀಗೆ ಮುಂದುವರೆದರೆ ಇನ್ನೊಂದೆರಡು ದಿನದಲ್ಲಿ ಜಲಾಶಯದ ಗರಿಷ್ಠ ಮಟ್ಟ 186 ಅಡಿಗೆ ತಲುಪಲಿದೆ. ಮಳೆ ಪ್ರಮಾಣ … Read more

ಭದ್ರಾವತಿಯಲ್ಲಿ ಆಯುಕ್ತರಿಗೆ ಕರೋನ ಪಾಸಿಟಿವ್, ಎರಡು ದಿನ ನಗರಸಭೆ ಬಂದ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 10 ಸೆಪ್ಟಂಬರ್ 2020 ಆಯುಕ್ತರಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಭದ್ರಾವತಿ ನಗರಸಭೆಯನ್ನು ಎರಡು ದಿನ ಬಂದ್ ಮಾಡಲಾಗುತ್ತಿದೆ. ನಗರಸಭೆ ಆವರಣವನ್ನು ಸ್ಯಾನಿಟೈಸ್ ಮಾಡಿ, ಸೀಲ್‍ಡೌನ್ ಮಾಡಲಾಗಿದೆ. ಕೋವಿಡ್ ಪರೀಕ್ಷೆಗೆ ಒಳಗಾದಾಗ ಆಯುಕ್ತರಿಗೆ ಕರೋನ ಇರುವುದು ದೃಢವಾಗಿದೆ. ಅವರು ತಮ್ಮ ಮನೆಯಲ್ಲೇ 14 ದಿನ ಕ್ವಾರಂಟೈನ್‍ಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆಯನ್ನು ಎರಡು ದಿನ ಬಂದ್ ಮಾಡಲಾಗಿದೆ. ಗುರುವಾರ ಮತ್ತು ಶುಕ್ರವಾರ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. … Read more