ಭದ್ರಾವತಿಯ ಉಂಬ್ಳೆಬೈಲು ರಸ್ತೆ ಬದಿಯಲ್ಲಿ ಐದು ತಿಂಗಳ ಭ್ರೂಣ ಪತ್ತೆ

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಡಿಸೆಂಬರ್ 2019 ಬೆಳವಣಿಗೆ ಹಂತದಲ್ಲಿದ್ದ ಆರು ತಿಂಗಳ ಶಿಶುವಿನ ಭ್ರೂಣ ಪತ್ತೆಯಾಗಿದೆ. ರಸ್ತೆ ಬದಿಯಲ್ಲಿ ಭ್ರೂಣವನ್ನು ಬಿಸಾಕಿ ಹೋಗಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಮುಂಭಾಗ ಭ್ರೂಣ ಪತ್ತೆಯಾಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು, ಭ್ರೂಣ ಬಿಸಾಡಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಉಜ್ಜನೀಪುರ ನಗರ ಆರೋಗ್ಯ ಕೇಂದ್ರದ ವೈದ್ಯ ಡಾ.ಗಿರಿಧರ್ … Read more

ಭದ್ರಾವತಿ VISL ಉತ್ಸವಕ್ಕೆ ದಿನಾಂಕ ಫಿಕ್ಸ್, 31 ದಿನದ ಉತ್ಸವದಲ್ಲಿ ಏನೇನೆಲ್ಲ ವಿಶೇಷತೆಗಳಿವೆ ಗೊತ್ತಾ?

VISL Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI | 21 ಡಿಸೆಂಬರ್ 2019 ವಿಐಎಸ್‌ಎಲ್ ಕಾರ್ಖಾನೆಯಿಂದ ಜ.8ರಿಂದ ಫೆ.7ರವರೆಗೆ 31 ದಿನಗಳ ಕಾಲ ವಿಐಎಸ್‌ಎಲ್ ಉತ್ಸವ ಜರುಗಲಿದೆ ಎಂದು ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಪ್ರವೀಣ್ ಕುಮಾರ್‌ ತಿಳಿಸಿದರು. ಕೇರಳ ಸಮಾಜಂ ಸೇರಿ ವಿವಿಧ ಸಮಾಜಗಳ ಸಂಸ್ಕೃತಿ, ಸಂಪ್ರದಾಯ ಹಾಗೂ ವಿಶೇಷ ಖಾದ್ಯಗಳನ್ನು ಪರಿಚಯಿಸುವ, ವಿವಿಧ ಶಾಲಾ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಆ ಮೂಲಕ ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಕಲಾಪ್ರಕಾರ ಈ ಉತ್ಸವದಲ್ಲಿ ಅನಾವರಣಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಐಎಸ್‌ಎಲ್ … Read more

ತಲೆಮರೆಸಿಕೊಂಡಿದ್ದ ಇಬ್ಬರು ಭದ್ರಾವತಿ ಪೊಲೀಸ್ ಬಲೆಗೆ, ಸಿದ್ದಾಪುರದಲ್ಲಿ ಒಬ್ಬ, ಉಜನೀಪುರದಲ್ಲಿ ಮತ್ತೊಬ್ಬ ಅರೆಸ್ಟ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 16 ಡಿಸೆಂಬರ್ 2019 ಗಾಂಜಾ ಮತ್ತು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ಜಿಂಕ್‌ಲೈನ್ ನಿವಾಸಿ ಸಂತೋಷ್ ಬಂಧಿತ. ಈತನ ವಿರುದ್ದ 2018ರ ಸೆ.9ರಂದು ಗಾಂಜಾ ಮಾರಾಟ ಯತ್ನ ಪ್ರಕರಣ ದಾಖಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಗಡೆ ಬಂದಿದ್ದ ಈತ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿತ್ತು. ಆರೋಪಿ ಪತ್ತೆಗೆ ಪೇದೆಗಳಾದ ಅಶೋಕ್ ಮತ್ತು ರವಿಚಂದ್ರ … Read more

ವಿಐಎಸ್ಎಲ್ ಗೇಟಿಗೆ ಮತ್ತೆ ಬೀಗ, ಕಾರ್ಮಿಕರ ಆಕ್ರೋಶ, ಹೋರಾಟಕ್ಕೆ ಕಾರ್ಮಿಕರ ಕುಟಂಬದವರು ಸಾಥ್

ಶಿವಮೊಗ್ಗ ಲೈವ್.ಕಾಂ | BHADRAVATHI | 16 ನವೆಂಬರ್ 2019 ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ಎರಡನೆ ದಿನವು ಮುಂದುವರೆದಿದೆ. ಇವತ್ತು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಾರ್ಖಾನೆ ಗೇಟ್ ಮುಂದೆ ಆಹೋರಾತ್ರಿ ಧರಣಿ ನಡೆಸಿದ ಗುತ್ತಿಗೆ ಕಾರ್ಮಿಕರು, ಬೆಳಗ್ಗೆಯಿಂದಲೆ ಪ್ರತಿಭಟನೆ  ಶುರ ಮಾಡಿದ್ದರೆ. ಮತ್ತೆ ಗೇಟ್’ಗೆ ಬೀಗ ಹಾಕಿ ಆಡಳಿತ ಮಂಡಳಿ ವಿಐಎಸ್ಎಲ್ ಗೇಟಿಗೆ ಇವತ್ತು ಮತ್ತೊಮ್ಮೆ ಬೀಗ ಹಾಕಲಾಗಿತ್ತು. ಇದು ಪ್ರತಿಭಟನಾಕಾರರನ್ನು ರೊಚ್ಚಿಗೇಳಿಸಿತು. ಕೂಡಲೇ … Read more

VISL ಕಾರ್ಖಾನೆ ಮುಂದೆ ಟೈರ್’ಗೆ ಬೆಂಕಿ, ಗುತ್ತಿಗೆ ಕಾರ್ಮಿಕನಿಗೆ ಸುಟ್ಟ ಗಾಯ, ಸ್ಥಳದಲ್ಲಿ ಬಿಗುವಿನ ವಾತಾವರಣ

ಶಿವಮೊಗ್ಗ ಲೈವ್.ಕಾಂ | SHIMOGA | 15 ನವೆಂಬರ್ 2019 ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಮುಂದೆ ಗುತ್ತಿಗೆ ಕಾರ್ಮಿಕರು ಟೈರ್’ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕಾರ್ಮಿಕರೊಬ್ಬರಿಗೆ ಬೆಂಕಿ ತಗುಲಿದ್ದು, ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾರ್ಖಾನೆ ಗೇಟ್ ಮುಂದೆ ಸಂಜೆ ವೇಳೆಗೆ ಗುತ್ತಿಗೆ ಕಾರ್ಮಿಕರು ಟೈರ್’ಗೆ ಬೆಂಕಿ ಹಚ್ಚಿ, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆ ಕಾರ್ಮಿಕರು ಸಿಡಿದೆದ್ದಿದ್ದೇಕೆ? ಗುತ್ತಿಗೆ ಕಾರ್ಮಿಕರು ಇವತ್ತು ಬೆಳಗ್ಗೆ … Read more

ಭದ್ರಾವತಿ ವಿಐಎಸ್ಎಲ್, ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ವಿನಯ್ ಗುರೂಜಿ

ಶಿವಮೊಗ್ಗ ಲೈವ್.ಕಾಂ | BHADRAVATHI | 11 ನವೆಂಬರ್ 2019 ವಿನಯ್ ಗುರೂಜಿ ಅವರು ಶಾಸಕ ಬಿ.ಕೆ.ಸಂಗಮೇಶ್ವರ್ ಅವರೊಂದಿಗೆ ಭಾನುವಾರ ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿದರು. ಪ್ರಸ್ತುತ ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಸಂಗಮೇಶ್ವರ್ ಅವರಿಂದ ಮಾಹಿತಿ ಪಡೆದ ಗುರೂಜಿ, ಕಾರ್ಖಾನೆಯ ವಿವಿಧ ಪ್ಲಾಂಟ್‌ಗಳ ಪರಿಶೀಲನೆ ನಡೆಸಿದರು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸೇವಾಕಾರ್ಯಗಳಿಗೆ ಚಾಲನೆ ನೀಡಲು ನಗರಕ್ಕೆ ಆಗಮಿಸಿದ್ದ ವಿನಯ್ ಗುರೂಜಿ ಅವರು ಬೆಳಗ್ಗೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ, ಹಳೇನಗರದ ಗ್ರಾಮ ದೇವತೆ ಶ್ರೀ … Read more

ಹೊಳೆಹೊನ್ನೂರು ಬಳಿ ಕುಸಿದ ಮನೆಯ ಗೋಡೆ, ಸ್ಥಳದಲ್ಲೇ ವ್ಯಕ್ತಿ ಸಾವು

ಶಿವಮೊಗ್ಗ ಲೈವ್.ಕಾಂ | HOLEHONNURU | 26 ಅಕ್ಟೋಬರ್ 2019 ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಅರಬಿಳಚಿ ಗ್ರಾಮದಲ್ಲಿ ಘಟನೆ ನಡೆದಿದೆ. ಲಕ್ಷ್ಮಣ (70) ಮೃತ ವ್ಯಕ್ತಿ. ಮಲಗಿದ್ದ ವೇಳೆ ಲಕ್ಷ್ಮಣ ಅವರ ಮೇಲೆಯೆ ಗೋಡೆ ಕುಸಿದಿದೆ. ಇದರಿಂದ ಲಕ್ಷ್ಮಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂರು ದಿನದಿಂದ ನಿರಂತರ ಮಳೆಯಾಗಿದ್ದರಿಂದ ಗೋಡೆ ಒದ್ದೆಯಾಗಿ, ಕುಸಿದಿದೆ ಎಂದು ಹೇಳಲಾಗುತ್ತಿದೆ. ವಿಚಾರ ತಿಳಿಯುತ್ತಿದ್ದಂತ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ, ಭದ್ರಾವತಿ ತಹಶೀಲ್ದಾರ್ ಸ್ಥಳಕ್ಕೆ … Read more

ಭದ್ರಾವತಿಯ ಪುರಾಣ ಪ್ರಸಿದ್ಧ ದೇವಸ್ಥಾನದಲ್ಲಿ ಬಿರುಕು, ಅಲ್ಲಲ್ಲಿ ಸೋರುತ್ತಿದೆ ಮಳೆ ನೀರು, ಭಕ್ತರಲ್ಲಿ ಆತಂಕ

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019 ಭಾರೀ ಮಳೆಗೆ ಭದ್ರಾವತಿಯ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೋರುತ್ತಿದೆ. ಗುರ್ಭಗುಡಿ ಒಳಗೆ ನೀರು ತೊಟ್ಟಿಕ್ಕುತ್ತಿರುವುದು, ಭಕ್ತರನ್ನು ಆತಂಕಕ್ಕೀಡು ಮಾಡಿದೆ. ದೇವಸ್ಥಾನಕ್ಕೆ ಹಾನಿ ಆಗುವ ಭೀತಿ ಎದುರಾಗಿದೆ. ದೇವಸ್ಥಾನದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ, ಪುರುಷೋತ್ತಮ, ವೇಣುಗೋಪಾಲ ಸ್ವಾಮಿ ದೇವರ ಗರ್ಭಗುಡಿ, ಶುಕನಾಸಿನಿ, ನವರಂಗ, ಹುಂಡಿ ಡಬ್ಬದ ಮೇಲೆ ನೀರು ಸೋರುತ್ತಿದೆ. ಇನ್ನು, ವಿದ್ಯುತ್ ಸ್ವಿಚ್’ಗಳಿರುವ ಭಾಗದಲ್ಲಿಯು ನೀರು ಸೋರುತ್ತಿದೆ. ಮಳೆಯ ಪರಿಣಾಮ ಶ್ರೀ ಲಕ್ಷ್ಮೀನರಸಿಂಹ … Read more

ಹೊಳೆಹೊನ್ನೂರು ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವ ಪತ್ತೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019 ಕೆರೆ ಕೋಡಿಯಲ್ಲಿ ತೇಲಿ ಹೋಗಿದ್ದ ವ್ಯಕ್ತಿಯ ಶವ ಇವತ್ತು ಪತ್ತೆಯಾಗಿದೆ. ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ರವಿ (40) ಮೃತ ವ್ಯಕ್ತಿ. ನಿನ್ನೆ ಸಂಜೆ ಕೊಪ್ಪದ ಕೆರೆ ಕೋಡಿ ಮೇಲೆ ನಡೆದುಕೊಂಡು ಬರುವಾಗ ನೀರಿನ ರಭಸಕ್ಕೆ ಕಾಲು ಜಾರಿ ತೇಲಿ ಹೋಗಿದ್ದರು. ರವಿಗಾಗಿ ರಾತ್ರಿ ಶೋಧ ಕಾರ್ಯ ನಡೆದರು ಪ್ರಯೋಜನವಾಗಿರಲಿಲ್ಲ. ಇವತ್ತು ಬೆಳಗ್ಗೆ ಕೆರೆಯ ಕೆಳಭಾಗದ ಗಿಡದಲ್ಲಿ ಶವ ಸಿಲುಕಿಕೊಂಡಿತ್ತು. ಪೊಲೀಸರು ಸ್ಥಳಕ್ಕೆ … Read more

ವಿಐಎಸ್ಎಲ್ ಕಾರ್ಖಾನೆ ಗೇಟ್ ಮುಂದೆ ಮತ್ತೆ ಮುಷ್ಕರ ಶುರು, ಕಾರಣವೇನು ಗೊತ್ತಾ?

VISL Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಅಕ್ಟೋಬರ್ 2019 ಭದ್ರಾವತಿ ವಿಎಐಎಸ್ಎಲ್ ಕಾರ್ಖಾನೆ ಮುಂದೆ ಮತ್ತೊಮ್ಮೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕಾರ್ಮಿಕರು ಸಿದ್ಧತೆ ನಡೆಸದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಸರಿಯಾಗಿ ಕೆಲಸ ಕೊಡದೆ ಇರುವುದೆ ಮುಷ್ಕರಕ್ಕೆ ಕಾರಣವಾಗಿದೆ. ಕಾರ್ಖಾನೆ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ 13 ದಿನಗಳ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದ ವಿಐಎಸ್‌ಪಿ ಆಡಳಿತ ಮಂಡಳಿ ಸರಿಯಾಗಿ ಕೆಲಸ ನೀಡದೆ ವಚನಭ್ರಷ್ಟವಾಗಿದೆ ಎಂದು ಆರೋಪಿಸಿ ವಿಐಎಸ್‌ಎಲ್ ಕಾಂಟ್ರ್ಯಾಕ್ಟ್ ವರ್ಕರ್ ಯೂನಿಯನ್ (ಸಿಐಟಿಯು), … Read more