ಮರಕ್ಕೆ ಬೈಕ್‌ ಡಿಕ್ಕಿ, ಬೈಕ್‌ನ ಹಿಂಬದಿ ಸವಾರ ಸಾವು

bike-hits-tree-pillion-rider-manjunath-dies

ರಿಪ್ಪನ್‌ಪೇಟೆ: ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಮರಕ್ಕೆ ಡಿಕ್ಕಿ (Fatal Bike Accident) ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ರಿಗೆ ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಣಸೆ ಗ್ರಾಮದ ನಿವಾಸಿ ಶಿವಪ್ಪ ಎಂಬುವರ ಪುತ್ರ ಮಂಜುನಾಥ (35) ಮೃತ ವ್ಯಕ್ತಿ. ಮಂಜುನಾಥ, ಹೊಸನಗರದಲ್ಲಿ ಗ್ರಾಮಒನ್ ನಡೆಸುತ್ತಿದ್ದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಹಾಡಹಗಲೆ ಶಿಕ್ಷಕಿಯ ಪರ್ಸ್‌ ಕಸಿದು ಎಸ್ಕೇಪ್‌, ಎಲ್ಲಿ? ಹೇಗಾಯ್ತು ಘಟನೆ? ಗಿಣಸೆ … Read more

ಶಿವಮೊಗ್ಗ ಜಿಲ್ಲೆಯ ಮಹಿಳೆಗೆ KFD ಪಾಸಿಟಿವ್‌, ಸರ್ವೇಕ್ಷಣಾಧಿಕಾರಿ ಏನಂದ್ರು? ಚಿಕಿತ್ಸೆಗೆ ಏನೆಲ್ಲ ವ್ಯವಸ್ಥೆಯಾಗಿದೆ?

MONKEY-FEVER-KFD-IN-SHIMOGA

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮತ್ತೆ ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಮಂಗಳನ ಕಾಯಿಲೆ) ಆತಂಕ ಶುರುವಾಗಿದೆ. ಮಹಿಳೆಯೊಬ್ಬರಿಗೆ KFD ಪಾಸಿಟಿವ್‌ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸನಗರದ ಮಹಿಳೆಗೆ ಕೆಎಫ್‌ಡಿ ಕೆಎಫ್‌ಡಿ ಪತ್ತೆಗೆ ಪರೀಕ್ಷೆಗಳನ್ನು (TESTING) ನಡೆಸುತ್ತಿದ್ದಾಗ ಹೊಸನಗರದ 54 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಗೊತ್ತಾಗಿದೆ. ಕೂಡಲೆ ಮಹಿಳೆಗೆ ಚಿಕಿತ್ಸೆ (TREATMENT) ಆರಂಭಿಸಲಾಗಿದೆ. ಸದ್ಯ ಅವರು ಗುಣಮುಖರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷದ ಎಷ್ಟಾಗಿತ್ತು ಪ್ರಕರಣ? ಸಾಮಾನ್ಯವಾಗಿ ಮಂಗನಕಾಯಿಲೆ ನವೆಂಬರ್‌ನಿಂದ ಜನವರಿವರೆಗೆ ಹರಡುತ್ತದೆ. ಕಳೆದ ವರ್ಷ ಕೆಎಫ್‌ಡಿಗೆ … Read more

ಕಳೆನಾಶಕ ಸೇವಿಸಿದ್ದ ರೈತ ಕೊನೆಯುಸಿರು

Police-jeep-in-Shimoga.

ರಿಪ್ಪನ್‌ಪೇಟೆ: ಚಂದಳ್ಳಿ ಗ್ರಾಮದ ರೈತ ರಾಜು (46) ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಹಾಗೂ ಇನ್ನಿತರೆಡೆ ಸಾಲ ಮಾಡಿದ್ದು, ಬೆಳೆನಷ್ಟದಿಂದ ಸಾಲ ತೀರಿಸಲಾಗುವುದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಮನೆಯಲ್ಲಿ ನೇಣಿಗೆ ಶರಣಾದ ಯುವಕ

ಮನೆಯಲ್ಲಿ ನೇಣಿಗೆ ಶರಣಾದ ಯುವಕ

Crime-News-General-Image

ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮದ ಯುವಕ ಕಿರಣ (26) ಎಂಬುವರು ಗುರುವಾರ ವಾಸದ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರಣ ಕೆಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಮೃತನು ಅವಿವಾಹಿತನಾಗಿದ್ದು, ತಂದೆ, ತಾಯಿ, ಸಹೋದರ ಇದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಭದ್ರಾವತಿಯ 30 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವು

Areca-Farm-Adike-tota-in-Shimoga

ರಿಪ್ಪನ್‌ಪೇಟೆ: ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕ ಹಳ್ಳಕ್ಕೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ದೊಡ್ಡಿನಕೊಪ್ಪದ ಮಂಜುನಾಥ್ (37) ಮೃತರು. ಮಂಗಳವಾರ ಗವಟೂರು ಗ್ರಾಮದ ವ್ಯಕ್ತಿಯೊಬ್ಬರ ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಘಟನೆ ನಡೆದಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ, ಜೊತೆಗಿದ್ದ ವ್ಯಕ್ತಿ ಯಾರು? ‌SP ಫಸ್ಟ್‌ ರಿಯಾಕ್ಷನ್?

ವಿದೇಶದಿಂದ ಮರಳಿದ್ದ ಯುವಕನಿಗೆ ಹೃದಯಾಘಾತ, ಸಾವು

Youth-Returned-from-saudi-arabia-scummbed-at-ripponpete

ರಿಪ್ಪನ್‌ಪೇಟೆ: ವಿದೇಶದಿಂದ ಮರಳಿದ್ದ ಯುವಕನೊಬ್ಬ ಹೃದಯಾಘಾತಕ್ಕೀಡಾಗಿ (Heart Attack) ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ರಿಪ್ಪನ್‌ಪೇಟೆಯ ಇಮ್ರಾನ್‌ (36) ಮೃತ ದುರ್ದೈವಿ. ಕಳೆದ ಮೂರು ವರ್ಷದಿಂದ ಇಮ್ರಾನ್ ಸೌದಿ ಆರೇಬಿಯಾದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದರು. ಎರಡು ದಿನದ ಹಿಂದೆ ರಿಪ್ಪನ್‌ಪೇಟೆಯ ಮದೀನಾ ಕಾಲೋನಿಯ ಮನೆಗೆ ಬಂದಿದ್ದರು. ಇವತ್ತು ಬೆಳಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೆ ಇಮ್ರಾನ್‌ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶಿವಮೊಗ್ಗದ ಮಾರ್ಗ ಮಧ್ಯೆ ಇಮ್ರಾನ್‌ ಕೊನೆಯುಸಿರೆಳೆದಿದ್ದಾರೆ. ಇಮ್ರಾನ್‌ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ … Read more

ಹೊಂಬುಜದಲ್ಲಿ ಲಕ್ಷ ದೀಪೋತ್ಸವ, ವರ್ಧಂತ್ಯೋತ್ಸವ

Hombuja-Padmavathi-temple-humcha

ರಿಪ್ಪನ್‌ಪೇಟೆ: ಹೊಂಬುಜ (Hombuja) ಜೈನ ಮಠದಲ್ಲಿ ಪ್ರಾಚೀನ ಪರಂಪರೆಯಂತೆ ಕಾರ್ತಿಕ ಮಾಸದ ಪಂಚಮಿ ದಿನವಾದ ನ.9ರಂದು ಲಕ್ಷ ದೀಪೋತ್ಸವ ನೆರವೇರಲಿದೆ. ಪಾರ್ಶ್ವ ನಾಥ ಬಸದಿ, ಪದ್ಮಾವತಿ ಆಲಯ, ಗುಡ್ಡದ ಬಾಹುಬಲಿ ಬಸದಿ ಮತ್ತಿತರೆಡೆ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲಕ್ಷದಿಪೋತ್ಸವ ಜರುಗಲಿದೆ. ನ.10ರಂದು ಸ್ವಾಮೀಜಿ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯೋತ್ಸವ ನೆರವೇರಲಿದೆ. ಇದನ್ನೂ ಓದಿ » ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಶಿವಮೊಗ್ಗದಲ್ಲಿ ಆಕ್ರೋಶ ಬಂಧನಕ್ಕೆ ಒತ್ತಾಯ, ಕಾರಣವೇನು?

ಹೊಸನಗರದಲ್ಲಿ ಯುವಕನನ್ನು ವಶಕ್ಕೆ ಪಡೆದ ಪೊಲೀಸರು, ವೈದ್ಯಕೀಯ ಪರೀಕ್ಷೆ ಬಳಿಕ ಅರೆಸ್ಟ್

Hosanagara-Police-Station-Board

ಹೊಸನಗರ: ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು (Youth Arrest) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಆತನನ್ನು ಬಂದಿಸಿದ್ದಾರೆ. ಹೊಸನಗರ ಪೊಲೀಸರು ಗಸ್ತಿನಲ್ಲಿದ್ದಾಗ ತಾಲೂಕಿನ ಕಚ್ಚಿಗೆಬೈಲು ಗ್ರಾಮದಲ್ಲಿ ಸುಬ್ರಮಣ್ಯ(26) ಎಂಬಾತ ಮಾದಕ ವಸ್ತು ಸೇವನೆ ಮಾಡಿದಂತೆ ಕಂಡುಬಂದಿದ್ದು, ವಿಚಾರಣೆ ಮಾಡಿದಾಗ ತಾನು ಗಾಂಜಾ ಸೇವಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಳಿಕ ವೈದ್ಯಕೀಯ ತಪಾಸಣೆಯಲ್ಲಿ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನ ವಿರುದ್ಧ ಎನ್‌ಡಿಪಿಎಸ್ ಆಕ್ಟ್27(ಬಿ) ಅಡಿಯಲ್ಲಿ … Read more

ರಿಪ್ಪನ್‌ಪೇಟೆಯಲ್ಲಿ ರಂಭಾಪುರಿ ಶ್ರೀ ಆಶೀರ್ವಚನ, ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

Rambapuri-Swamiji-at-Ripponpete-Malali-mutt

ರಿಪ್ಪನ್‌ಪೇಟೆ: ರಂಭಾಪುರಿ (rambhapuri) ಶಾಖಾ ಮಠ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭ ನಡೆಯಿತು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವಾಮೀಜಿ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌ ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲು ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ಜೀವನ, ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಅರಿವಿನ ಕಣ್ಣು ತೆರೆಯಿಸಲು ಧರ್ಮ ಮತ್ತು ಗುರು ಬೇಕು ಎಂಬುದನ್ನು ಅರಿತಾಗ ಬಾಳು … Read more

ಒಣಗಿದ ಮರ ಬಿದ್ದು ಹಸು ಸಾವು

Tree-falls-at-hosanagara-cow-succumbed

ಹೊಸನಗರ: ಮೇಯುತ್ತಿದ್ದ ಹಸುವಿನ (Cow) ಮೇಲೆ ಒಣಗಿದ ಮರ ಬಿದ್ದು ಹಸು ಮೃತಪಟ್ಟಿದೆ. ಹೊಸನಗರ ತಾಲೂಕಿನ ಸಂಕೂರಿನಲ್ಲಿ ಘಟನೆ ಸಂಭವಿಸಿದೆ. ಸಂಕೂರು ಗ್ರಾಮದ ರೈತ ಮಹಿಳೆ ಪುಷ್ಪಾ ಎಂಬವರ ಹಸು ಮೃತಪಟ್ಟಿದ್ದು, ಅಂದಾಜು ₹ 30 ಸಾವಿರ ಮೌಲ್ಯದ್ದಾಗಿದೆ. ತಾಲ್ಲೂಕು ಆಡಳಿತ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ‌ಆಗ್ರಹಿಸಿದ್ದಾರೆ. ಇದನ್ನೂ ಓದಿ » ಮಹಿಳೆಗೆ ದುರ್ಗಿಗುಡಿಯ ವಶೀಕರಣ ಜ್ಯೋತಿಷಿ ಕೊಟ್ಟ ಮಡಿಕೆ, ಮನೆಯಲ್ಲಿ ತೆಗೆದಾಗ ಕಾದಿತ್ತು ಶಾಕ್‌