ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗ ಸೂಚಿಸಿದ ಡಿಸಿ

Agumbe Ghat 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 25 JUNE 2021 ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‍ ಅವರು ಆದೇಶ ಹೊರಡಿಸಿದ್ದಾರೆ. ಈ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಘಾಟಿಯಲ್ಲಿ ರಸ್ತೆ ಕಿರಿದಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಭಾರ ತಡೆಯುವ ಕ್ಷಮತೆ ಕ್ಷೀಣಿಸುತ್ತಿದೆ. ಭಾರಿ ಸರಕು ಸಾಗಣೆ ವಾಹನಗಳು ಓಡಾಡುವುದರಿಂದ ರಸ್ತೆ ಬದಿ ಮಣ್ಣು ಕುಸಿತ ಉಂಟಾಗಿ, ಅಪಘಾತಗಳು ಸಂಭವಿಸಬಹುದು. ಆದ್ದರಿಂದ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. … Read more

ತ್ಯಾಗರ್ತಿಯಲ್ಲಿ ಡೆಂಘೆ ಕಂಟ್ರೋಲ್ಗೆ ಕರಪತ್ರ ಜಾಗೃತಿ, ಸ್ಕೂಲ್ಗೆ ಸ್ಯಾನಿಟೈಸ್ ಮಾಡಲು ಕ್ರಮ

tyagarthi sagara graphics

ಶಿವಮೊಗ್ಗ ಲೈವ್.ಕಾಂ | TYAGARTHI NEWS | 25 JUNE 2021 ಸಾಗರ ತಾಲೂಕಿನಲ್ಲಿ ಡೆಂಘೆ ಜ್ವರದ ಭೀತಿ ಹೆಚ್ಚಾಗಿದೆ. ಗ್ರಾಮದಲ್ಲಿ ಡೆಂಘೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತ್ಯಾಗರ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇಸಾಕ್ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರೋನ ಕಾರ್ಯಪಡೆ ಮತ್ತು ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಇಸಾಕ್‍, ಡೆಂಘೆ ಮುನ್ನೆಚ್ಚರಿಕೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕರಪತ್ರಗಳನ್ನು ಹಂಚಲಾಗುತ್ತಿದೆ. ಊರಿನ ಸ್ವಚ್ಛತೆಗೆ ಎಲ್ಲರೂ … Read more

ಜಮೀನಿನಲ್ಲೆ ವಿಷ ಸೇವಿಸಿ ತರಲಘಟ್ಟದ ರೈತ ಆತ್ಮಹತ್ಯೆ

SHIKARIPURA-TALUK-NEWS-1.jpg

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 25 JUNE 2021 ಸಾಲ ಬಾಧೆ ತಾಳಲಾರದೆ ರೈತರೊಬ್ಬರು ತಮ್ಮ ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಹನುಮಂತ (30), ಮೃತ ರೈತ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹನುಮಂತ ಅವರನ್ನು ಕುಟುಂಬದವರು, ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹನುಮಂತ ಅವರು ಮೃತಪಟ್ಟಿದ್ದಾರೆ. ಕೃಷಿಗಾಗಿ ಖಾಸಗಿ ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದರು. ಆದರೆ ಸಾಲ ತೀರಿಸಲಾಗಿದೆ … Read more

ಭದ್ರಾ ಜಲಾಶಯದಲ್ಲಿ ‘ಸಿಮೆಂಟ್ ಬೆಡ್ ಗೋಲ್ಮಾಲ್’, ನೀರು ಬೀಳುವ ಜಾಗದಲ್ಲಿ ರೈತರ ಪ್ರತಿಭಟನೆ

250621 Farmers Protest Against Bhadra Dam Cement Bed 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 25 JUNE 2021 ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭದ್ರಾ ಜಲಾಶಯದ ಮುಂದೆ ರೈತರು ಇವತ್ತು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಭದ್ರಾ ಜಲಾಶಯದ ಮುಂದೆ ನೀರು ಬೀಳುವ ಜಾಗದಲ್ಲಿ ಸಿಮೆಂಟ್ ಬೆಡ್ ಹಾಕಲಾಗಿತ್ತು. ಆದರೆ ಈ ಕಾಮಗಾರಿ ಕಳಪೆಯಾಗಿದ್ದರಿಂದ ಸಿಮೆಂಟ್‍ ಬೆಡ್ ಹಾಳಾಗಿತ್ತು. ಈಗ ಮತ್ತೊಮ್ಮೆ ಕಾಮಗಾರಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಕಾಮಗಾರಿ ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು … Read more

ಎತ್ತುಗಳಿಗೆ ನೀರು ಕುಡಿಸಲು ಹೋದ ಯುವಕ ನೀರು ಪಾಲು

250621 soraba youth drowned in varada river 1

ಶಿವಮೊಗ್ಗ ಲೈವ್.ಕಾಂ | SORABA NEWS | 25 JUNE 2021 ಎತ್ತುಗಳಿಗೆ ನೀರು ಕುಡಿಸಲು ಹೋದ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲ್ಲೂಕಿನ ಭದ್ರಾಪುರ ಸಮೀಪದ ವರದಾ ನದಿಯಲ್ಲಿ ನಡೆದಿದೆ. ಭದ್ರಾಪುರ ಗ್ರಾಮದ ನಿವಾಸಿ ಮಹೇಶ ಈರಪ್ಪ ದೊಡ್ಡ ಕುಂಬಾರ ಮನೆ ( 24) ಮೃತ ದುರ್ದೈವಿ. ಈತ ವರದಾ ನದಿಗೆ ಎತ್ತುಗಳಿಗೆ ನೀರು ಕುಡಿಸಲು ಹೋದಾಗ ಆಕಸ್ಮಿಕವಾಗಿ ಜಾರಿ ನದಿಗೆ ಬಿದ್ದಿದ್ದಾನೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸತತ‌ ಪ್ರಯತ್ನದಿಂದ ಇವತ್ತು … Read more

ಮರಕ್ಕೆ ನೇಣು ಬಿಗಿದುಕೊಂಡು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆತ್ಮಹತ್ಯೆ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 25 JUNE 2021 ಸಾಗರ ತಾಲೂಕು ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಕಾರಣದಿಂದ ಮನನೊಂದು ಈ ನಿರ್ಧಾರ ಕೈಗೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅದರಂತೆ ಗ್ರಾಮದ ಚಂದ್ರಶೇಖರ ಗೌಡ (55) ಅವರು ಬುಧವಾರ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಶೇಖರ ಗೌಡ ಅವರು 2005 ರಿಂದ 2010ರವರೆಗೆ ಕೆಳದಿ ಕ್ಷೇತ್ರದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಶಾಸಕ … Read more

ವಿಶೇಷ ಪೂಜೆ ಸಲ್ಲಿಸಿ ತುಂಗಾ ನದಿಗೆ ಬಾಗಿನ ಅರ್ಪಿಸಿದ ಮಿನಿಸ್ಟರ್

230621 Eshwarappa Family Bagina to Tunga Dam 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JUNE 2021 ರಾಜ್ಯದ ಅತೀ ಚಿಕ್ಕ ಜಲಾಶಯ ಹಾಗೂ ಮುಂಗಾರು ಆರಂಭವಾಗುತ್ತಿದ್ದಂತೆ ತುಂಬಿಕೊಳ್ಳುವ ಗಾಜನೂರು ತುಂಗಾ ಜಲಾಶಯಕ್ಕೆ ಇಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ದಂಪತಿ ಬಾಗಿನ ಸಮರ್ಪಣೆ ಮಾಡಿದರು. ಇಂದು ಮುಂಜಾನೆ ತೀರ್ಥಹಳ್ಳಿ ರಸ್ತೆಯ ಗಾಜನೂರು ಜಲಾಶಯಕ್ಕೆ ಆಗಮಿಸಿದ ಈಶ್ವರಪ್ಪ ಪುರೋಹಿತರ ನೇತೃತ್ವದಲ್ಲಿ ಪೂಜೆ ಸಲ್ಲಿಸಿದರು. ನಂತರ ಶಾಸ್ತ್ರೋಕ್ತವಾಗಿ ಬಾಗೀನ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ನಿರೀಕ್ಷೆ … Read more

ಶಂಕರಘಟ್ಟ ಸಮೀಪದ ಗೋಣಿಬೀಡು ಬಳಿ ಕಾಡಾನೆ ಪ್ರತ್ಯಕ್ಷ

220621 Elephant Found Near Gonibeedu Village 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 22 JUNE 2021 ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಬಳಿ ಕಾಡಾನೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು. ಇವತ್ತು ಬೆಳಗ್ಗೆ ಕಾಡಾನೆ ಪ್ರತ್ಯಕ್ಷವಾಗಿದೆ. ಆನೆಯನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪಟಾಕಿ ಸಿಡಿಸಿ ಅರಣ್ಯಾಧಿಕಾರಿಗಳು ಆನೆಯನ್ನು ಪುನಃ ಕಾಡಿಗೆ ಓಡಿಸಿದ್ದಾರೆ. ಇದನ್ನೂ ಓದಿ | ಅಪರೇಷನ್ ಮುಗಿದು ವಾರ ಕಳೆಯೋದರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ತೋಟಗಳಿಗೆ ದಾಳಿ ವನ್ಯಜೀವಿಗಳು ಕಾಡಿನಿಂದ ಹೊರಗೆ ಬಾರದಂತೆ ಟ್ರೆಂಚ್ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ತಗ್ಗಿದ ಮಳೆ, ಜಲಾಶಯಗಳ ಒಳ ಹರಿವು ಇಳಿಕೆ, ಯಾವ್ಯಾವ ಡ್ಯಾಂಗೆ ಎಷ್ಟೆಷ್ಟು ನೀರು ಬರುತ್ತಿದೆ?

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JUNE 2021 ಜಿಲ್ಲೆಯಾದ್ಯಂತ ಮಳೆ ಕ್ಷೀಣಿಸಿದೆ. ಜಲಾಶಯಗಳ ಒಳ ಹರಿವು ಪ್ರಮಾಣ ಸಂಪೂರ್ಣ ತಗ್ಗಿದೆ. ತುಂಗಾ ಜಲಾಶಯದ ಒಳಹರಿವು 15,414 ಕ್ಯೂಸೆಕ್‍ಗೆ ಇಳಿಕೆಯಾಗಿದೆ. ಈಗಾಗಲೆ ಜಲಾಶಯ ಭರ್ತಿಯಾಗಿರುವುದರಿಂದ, ಒಳ ಹರಿವಿನಷ್ಟೆ ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ಇದರಿಂದ ತುಂಗಾ ನದಿಯಲ್ಲಿ ನೀರಿನ ಹರಿವು ಕಾಣಸಿಗುತ್ತಿದೆ. ಭದ್ರಾ ಡ್ಯಾಂಗೂ ನೀರಿನ ಒಳ ಹರಿವು ಪ್ರಮಾಣ ಕುಸಿತ ಕಂಡಿದೆ. ಪ್ರಸ್ತುತ 9581 ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ ಜಲಾಶಯದ ನೀರಿನ … Read more

ಅಬ್ಬಲಗೆರೆಯ ತಂಬಾಕು ಮಂಡಳಿಗೆ ಅತಿಕ್ರಮ ಪ್ರವೇಶ, ಕೇಸ್ ದಾಖಲು

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JUNE 2021 ತಂಬಾಕು ಮಂಡಳಿಯ ಆವರಣದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಆರೋಪ ಮೇಲೆ ಖಾಸಗಿ ಕಂಪನಿಯೊಂದರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಶಿವಮೊಗ್ಗದ ಅಬ್ಬಲಗೆರೆ ಸಮೀಪ ಇರುವ ತಂಬಾಕು ಮಂಡಳಿಯ ಆವರಣದಲ್ಲಿ ಖಾಸಗಿ ಕಂಪನಿಯವರು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಆ ಕಂಪನಿಗೆ ಸೇರಿದ ಸಾಮಗ್ರಿಗಳನ್ನು ತಂಬಾಕು ಮಂಡಳಿಯ ಆವರಣದೊಳಗೆ ಹಾಕಿಕೊಂಡಿದ್ದಾರೆ. ಜೂನ್ 2ರಂದು ಈ ಕಂಪನಿಯವರು ಅತಿಕ್ರಮ ಪ್ರವೇಶ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ತಂಬಾಕು … Read more