ನಾಲ್ಕು ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ

HOLALURU NEWS 1

ಶಿವಮೊಗ್ಗ ಲೈವ್.ಕಾಂ | HOLALURU NEWS | 12 JUNE 2021 ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು ಈ ನಿರ್ಧಾರ ಕೈಗೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಭೀಮವ್ವ (32) ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ. ಶಿವಮೊಗ್ಗ ತಾಲೂಕು ಹೊಳಲೂರಿನ ಜನತಾ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ಭೀಮವ್ವ ಅವರು ಪವನ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಗೋಕಾಕ್‍ನಲ್ಲಿ ನೆಲೆಸಿದ್ದ ದಂಪತಿ ಇತ್ತೀಚೆಗೆ ಪವನ್ … Read more

ಇನ್ನೊಂದೆರಡು ದಿನಕ್ಕೆ ರಾಜ್ಯಕ್ಕೆ ಬರುತ್ತೆ ಲಸಿಕೆ, ಜನಸಂಖ್ಯೆ ಆಧಾರದ ಮೇಲೆ ಜಿಲ್ಲೆಗಳಿಗೆ ಹಂಚಿಕೆ

120621 CM BS Yedyurappa at Shikaripura Helipad 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 12 JUNE 2021 ಶಿವಮೊಗ್ಗ ಜಿಲ್ಲೆ ಮತ್ತು ಶಿಕಾರಿಪುರ ತಾಲೂಕಿನಲ್ಲಿ ಕರೋನ ಪ್ರಕರಣಗಳು ಹೆಚ್ಚಿದೆ. ಇದನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ , ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ ಪಾಸಿಟಿವಿಟಿ ರೇಟ್ ಇರಬೇಕು. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ಪ್ರಮಾಣ ಹೆಚ್ಚಳವಾಗಿದೆ. ನಿಯಂತ್ರಣಕ್ಕೆ ಸೂಚಿಸಲಾಗಿದೆ. ಎಂದು ತಿಳಿಸಿದರು. ಜನಸಂಖ್ಯೆ ಆಧಾರದಲ್ಲಿ ಲಸಿಕೆ ಇನ್ನೊಂದೆರಡು ದಿನದಲ್ಲಿ ರಾಜ್ಯಕ್ಕೆ … Read more

ತೀರ್ಥಹಳ್ಳಿಯಲ್ಲಿ ವೃದ್ಧೆಯ ಕತ್ತು ಹಿಸುಕಿ ಹಣ ದೋಚಲು ಯತ್ನ

Thirthahalli Name Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 10 JUNE 2021 ವೃದ್ಧೆಯೊಬ್ಬರ ಕತ್ತು ಹಿಸುಕಿ ಅವರ ಬಳಿಯಿದ್ದ ಹಣವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ಯುವಕನೊಬ್ಬನನ್ನು ಸಾರ್ವಜನಿಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀರ್ಥಹಳ್ಳಿಯ ಕಟ್ಟೆಹಕ್ಕಲು ಬಳಿ ಘಟನೆ ನಡೆದಿದೆ. ಕತ್ತು ಹಿಸುಕಿದ್ದರಿಂದ ಭವಾನಿಯಮ್ಮ (85) ಎಂಬುವವರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭವಾನಿಯಮ್ಮ ಅವರು ಅಂಚೆ ಕಚೇರಿಯಿಂದ ವೃದ್ಧಾಪ್ಯ ವೇತನದ ಹಣ ಬಿಡಿಸಿಕೊಂಡು ಮನೆಗೆ ಮರಳುತ್ತಿದ್ದರು. ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ವೃದ್ಧೆಯ ಕತ್ತು ಹಿಸುಕಿ … Read more

ಇಲಿಯಿಂದಾಗಿ ತೀರ್ಥಹಳ್ಳಿಯಲ್ಲಿ ಮಹಿಳೆಗೆ ಹೃದಯಾಘಾತ, ಸಾವು

Thirrthahalli Taluk Graphics

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 10 JUNE 2021 ಇಲಿಯಿಂದಾಗಿ ಮಹಿಳೆಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿಯ ಕುರುವಳ್ಳಿ ಬೊಮ್ಮಸಯ್ಯನ ಅಗ್ರಹಾರದ ಆಶ್ರಯ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಶಕುಂತಲಾ (52) ಮೃತ ದುರ್ದೈವಿ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮಹಡಿಯಿಂದ ಇಲಿಯೊಂದು ಶಕುಂತಲಾ ಅವರ ಮೇಲೆ ಬಿದ್ದಿದೆ. ಇದರಿಂದ ಗಾಬಾರಿಯಾದ ಶಕುಂತಲಾ ಅವರಿಗೆ ಹೃದಯಾಘಾತವಾಗಿದೆ. ಕೂಡಲೆ ಶಕುಂತಲಾ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಶಿವಮೊಗ್ಗದ ಮೆಗ್ಗಾನ್ … Read more

ಸಾಗರದಲ್ಲಿ ಕರೋನಾದ ನಡುವೆ ಮತ್ತೊಂದು ಕಾಯಿಲೆಯ ಸಂಕಷ್ಟ

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 10 JUNE 2021 ಕರೋನ ಆತಂಕದ ನಡುವೆ ಸಾಗರದಲ್ಲಿ ಡೆಂಗ್ಯೂ ಭೀತಿ ಎದುರಾಗಿದೆ. ದಿನೆ ದಿನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಹಾಲಪ್ಪ ಸೂಚಿಸಿದ್ದಾರೆ. ಡೆಂಡ್ಯೂ ನಿಯಂತ್ರಣ ಸಂಬಂಧ ಸಾಗರ ನಗರಸಭೆ ರಂಗಮಂದಿರ ಆವರಣದಲ್ಲಿ ಶಾಸಕ ಹರತಾಳು ಹಾಲಪ್ಪ ಅವರು ಅಧಿಕಾರಿಗಳ ಸಭೆ ನಡೆಸಿದರು. ತಕ್ಷಣದಿಂದ ಡೆಂಗ್ಯೂ ನಿಯಂತ್ರಣ ಮತ್ತು ಜಾಗೃತಿ ಕಾರ್ಯ ನಡೆಸುವಂತೆ ಸೂಚಿಸಿದರು. ಶಾಸಕರ ಸೂಚನೆಗಳೇನು? ತಾಲೂಕಿನಲ್ಲಿ ಕಳೆದ ತಿಂಗಳು 10 … Read more

ಭಕ್ತರಿಗೆ ಕೈಯಾರೆ ದಾಸೋಹ ಮಾಡಿ ಬಡಿಸುತ್ತಿದ್ದ ಕವಲೆದುರ್ಗದ ಶ್ರೀಗಳು ಕರೋನಾಗೆ ಕೊನೆಯುಸಿರು

070621 Kavaledurga Swamiji Death 1

ಶಿವಮೊಗ್ಗ ಲೈವ್.ಕಾಂ‌ | THIRTHAHALLI NEWS | 07 JUNE 2021 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗದ ಭುವನಗಿರಿ ಸಂಸ್ಥಾನ ಮಹಾಮಹತ್ತಿನ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯರಾಗಿದ್ದಾರೆ‌. ಕಳೆದ ಕೆಲ ದಿನದ ಹಿಂದೆ ಕರೋನಾ ಸೋಂಕಿಗೆ ತುತ್ತಾಗಿದ್ದ ಶ್ರೀಗಳನ್ನು  ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನದ ಹಿಂದೆ ಸ್ವಾಮೀಜಿ ಉಸಿರಾಟದಲ್ಲಿ ತೊಂದರೆ‌ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಂದು ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೆ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. … Read more

ಕರೋನ ಸೋಂಕಿತನಿಗೆ ಧೈರ್ಯ ಹೇಳಿ, ಆಸ್ಪತ್ರೆಗೆ ಕರೆತಂದು ದಾಖಲಿಸಿದ ಪಟ್ಟಣ ಪಂಚಾಯಿತಿ ಸದಸ್ಯ, ಫೋಟೊ ವೈರಲ್

070621 Pattana Panchayath Member Helps covid patient 1

ಶಿವಮೊಗ್ಗ ಲೈವ್.ಕಾಂ‌ | HOSANAGARA NEWS | 07 JUNE 2021 ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಕರೋನ ಸೋಂಕಿತರೊಬ್ಬರನ್ನು ಪಟ್ಟಣ ಪಂಚಾಯಿತಿ ಸದಸ್ಯರೊಬ್ಬರು ಕರೆತಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೊಸನಗರದಿಂದ ಶಿವಮೊಗ್ಗದವರೆಗೆ ಸೋಂಕಿತನ ಜೊತೆಗಿದ್ದು ಧೈರ್ಯ ತುಂಬಿದ್ದಾರೆ. ಇವರ ಕೆಲಸಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹೊಸನಗರ ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಅವರು ಸೋಂಕಿತನೊಂದಿಗೆ ಆಂಬುಲೆನ್ಸ್‍ನಲ್ಲಿ ಶಿವಮೊಗ್ಗದವರೆಗೆ ಬಂದಿದ್ದಾರೆ. ಹೊಸನಗರದ ಟ್ರಯಾಜ್ ಸೆಂಟರ್‍ನಲ್ಲಿದ್ದ ಸೋಂಕಿತರೊಬ್ಬರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್ … Read more

ಭದ್ರಾವತಿಯಲ್ಲಿ ಸ್ಮಶಾನದ ಬಳಿ ಕೆಜಿಗಟ್ಟಲೆ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವರು ಖಾಕಿ ಬಲೆಗೆ

prison hand cuff image

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 JUNE 2021 ಸ್ಮಶಾನದ ಬಳಿ ಕೆಜಿಗಟ್ಟಲೆ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಭದ್ರಾವತಿಯ ಹೊಳೆಹೊನ್ನೂರು ರಸ್ತೆಯ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಭದ್ರಾವತಿಯ ಮೋಮಿನ್ ಮೊಹಲ್ಲಾದ ಸೈಯದ್ ಅರ್ಬಾಜ್ ಅಲಿಯಾಸ್ ಮಂಡ್ಯ (23), ನೆಹರು ನಗರದ ಫರ್ವೀಜ್ ಮಾಯಾ (22) ಬಂಧಿತರು. ಆರೋಪಿಗಳಿಂದ 2 ಕೆಜಿ 100 ಗ್ರಾಂ ಗಾಂಜಾ, 1600 ರೂ. … Read more

ಕಾರು ಅಪಘಾತ, ಗಾಯಾಳುಗಳಿಗೆ ನೆರವಾದ ಸಾಗರ ಶಾಸಕ

070621 Haratalu Halappa Helps Accident Injured 1

ಶಿವಮೊಗ್ಗ ಲೈವ್.ಕಾಂ | SAGARA NEWS | 7 JUNE 2021 ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ ಶಾಸಕ ಹರತಾಳು ಹಾಲಪ್ಪ, ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಲಿಂಗದಹಳ್ಳಿ (ಕೆರೋಡಿ ಕ್ರಾಸ್) ಬಳಿ ಕಾರು ಅಪಘಾತಕ್ಕೀಡಾಗಿತ್ತು. ಅದೆ ಮಾರ್ಗವಾಗಿ ಬರುತ್ತಿದ್ದ ಶಾಸಕ ಹರತಾಳು ಹಾಲಪ್ಪ ಕೂಡಲೆ ಕಾರು ನಿಲ್ಲಿಸಿ ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದಾರೆ. ಅಪಘಾತಕ್ಕೀಡಾದ ಕಾರನ್ನು ಸ್ಥಳೀಯರ ನೆರವಿನಿಂದ ಹಿಂದಕ್ಕೆ ತಳ್ಳಿದ್ದಾರೆ. ಕಾರಿನಲ್ಲಿದ್ದ ಪಲ್ಲವಿ ಜೈನ್ ಎಂಬುವವರಿಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ … Read more

ಪ್ರೀತಿಸುವಂತೆ ಯುವಕನಿಂದ ಬೆದರಿಕೆ, ವಿಷ ಕುಡಿದಿದ್ದ ಬಾಲಕಿ ಮಣಿಪಾಲ ಆಸ್ಪತ್ರೆಯಲ್ಲಿ ಸಾವು

farmer suicide poison

ಶಿವಮೊಗ್ಗ ಲೈವ್.ಕಾಂ | HOSANAGARA NEWS | 6 JUNE 2021 ವಿಷ ಸೇವಿಸಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನೊಬ್ಬ ಪ್ರೀತಿಸುವಂತೆ ಬೆದರಿಕೆ ಹಾಕಿದ್ದೆ ಈ ಕೃತ್ಯಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಹೊಸನಗರ ತಾಲೂಕು ಕನ್ನಳ್ಳಿ ಸುಧಾಕರ್ ಅವರ ಪುತ್ರಿ ಸಹನಾ (17) ಆತ್ಮಹತ್ಯೆ ಮಾಡಿಕೊಂಡಾಕೆ. ಮೇ 3ರಂದು ಸಹನಾ ವಿಷ ಸೇವಿಸಿದ್ದಳು. ಕೂಡಲೆ ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಹೊಸನಗರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ … Read more