ಭದ್ರಾವತಿ ವೀರಾಪುರದಲ್ಲಿ ಧಗಧಗ ಹೊತ್ತಿ ಉರಿದ ಲಾರಿ ಲೋಡ್, ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ

020521 Bhadravathi Veerapura Truck fire 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 2 MAY 2021 ಟೈರ್ ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಧಗಧಗ ಹೊತ್ತಿ ಉರಿದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಲಾರಿ ಸಂಪೂರ್ಣ ಸುಟ್ಟು ಕರಕಲಾಗುವುದು ತಪ್ಪಿದೆ. ಭದ್ರಾವತಿ ತಾಲೂಕು ವೀರಾಪುರದಲ್ಲಿ ಘಟನೆ ಸಂಭವಿಸಿದೆ. ಮದ್ಯಾಹ್ನ ವೀರಾಪುರಕ್ಕೆ ಬಂದ ಲಾರಿಗೆ ಬೆಂಕಿ ತಗುಲಿತ್ತು. ಬೆಂಕಿ ತಗುಲಿದ್ದು ಹೇಗೆ? ಮುಖ್ಯ ರಸ್ತೆಯಿಂದ ಆಲೆಮನೆಯೊಂದರ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಕರೆಂಟ್ ಕಂಬದ ವೈರ್ ತಗುಲಿ, ಟಾರ್ಪಲ್‍ಗೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ … Read more

ಸ್ಕ್ಯಾನಿಂಗ್ ಸೆಂಟರ್​ಗಳಲ್ಲಿ ದುಬಾರಿ ಹಣ ವಸೂಲಿ, ಶಾಸಕರೆದುರೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸದಸ್ಯ ಆಕ್ರೋಶ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MAY 2021 ಸ್ಕ್ಯಾನಿಂಗ್ ಸೆಂಟರ್​ಗಳಲ್ಲಿ ಕರೋನ ತಪಾಸಣೆಗೆ ಸೋಂಕಿತರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಇದರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೊಪ್ಪುಗುಡ್ಡೆ ರಾಘವೇಂದ್ರ, ರೋಗ ಲಕ್ಷಣಗಳಿರುವ ಕುರಿತು ಪರೀಕ್ಷೆಗೆ ಹಲವರು ಖಾಸಗಿ ಸ್ಕ್ಯಾನಿಂಗ್ ಸೆಂಟರ್​ಗೆ ತೆರಳುತ್ತಾರೆ. ಇಲ್ಲಿ … Read more

ಮದುವೆಯಲ್ಲಿ ಸಾವಿರ ಜನ, ಶಿವಮೊಗ್ಗ ಡಿಸಿಯನ್ನೇ ಯಾಮಾರಿಸಿದರಾ ಅಧಿಕಾರಿ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 MAY 2021 ಸಾಗರದ ಶ್ರೀಧರಪುರದಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭ ಕರೋನ ಸಂಕಷ್ಟದ ಕಾಲದಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡಿಸಿದೆ. ಶಾಸಕ ಹರತಾಳು ಹಾಲಪ್ಪ ಅವರೆ ಈ ಕುರಿತು ಶಂಕೆ ವ್ಯಕ್ತಪಡಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಏನಿದು ಪ್ರಕರಣ? ಸಾಗರ ತಾಲೂಕು ಚಕ್ಕೂರಿನ ಶ್ರೀಧರಪುರದಲ್ಲಿ ಮದುವೆ ಸಮಾರಂಭದಲ್ಲಿ ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು ಎಂಬ ಆರೋಪವಿದೆ.  ಅಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಶಾಸಕ ಹರತಾಳು ಹಾಲಪ್ಪ ಪ್ರಸ್ತಾಪ … Read more

ತಾಳಗುಪ್ಪದಲ್ಲಿ ನೂರು ಮನೆ ಇರುವ ರಸ್ತೆ ಸೀಲ್ ಡೌನ್, ಜನ ಹೊರ ಬರುವಂತಿಲ್ಲ, ಗುಂಪುಗೂಡುವಂತಿಲ್ಲ

020521 Conainment Zone in Talaguppa 1

ಶಿವಮೊಗ್ಗ ಲೈವ್.ಕಾಂ | SAGARA NEWS | 2 MAY 2021 ತಾಳಗುಪ್ಪದ ರಂಗನಾಥ ಬೀದಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 13 ಮಂದಿಯಲ್ಲಿ ಕೋರನ ಕಾಣಿಸಿಕೊಂಡ ಹಿನ್ನೆಲೆ, ರಸ್ತೆಗೆ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪೊಲೀಸ್ ಠಾಣೆ ಪಕ್ಕದಿಂದ ಗೌರಿಕೆರೆ ರಸ್ತೆ ಸೇರುವವರಗೆ ಕಂಟೇನ್ಮೆಂಟ್ ಜೋನ್ ಎಂದು ತಹಶೀಲ್ದಾರ್ ಆದೇಶಿಸಿದ್ದಾರೆ. ಈ ರಸ್ತೆಯಲ್ಲಿ ಜನ ಮನೆಯಿಂದ ಹೊರಬರಬಾರದು, ಗುಂಪುಗೂಡಬಾರದು ಎಂದು ಸೂಚಿಸಲಾಗಿದೆ. ನೂರಕ್ಕೂ ಹೆಚ್ಚು ಮನೆಗಳು, ಐನೂರಕ್ಕೂ ಹೆಚ್ಚು ಮಂದಿ ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿದ್ದಾರೆ. … Read more

ತರಕಾರಿ ಖರೀದಿಗೆ ಜನರು ಗುಂಪುಗೂಡುವುದನ್ನು ತಡೆಯಲು ಶಿಕಾರಿಪುರದಲ್ಲಿ ಪಾಸ್ ಸೂತ್ರ

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 2 MAY 2021 ಮಾರುಕಟ್ಟೆಯಲ್ಲಿ ಜನರು ಅನಗತ್ಯವಾಗಿ ಗುಂಪುಗೂಡುವುದನ್ನು ತಡೆಯಲು ವ್ಯಾಪಾರಿಗಳಿಗೆ ಪಾಸ್ ನೀಡಲು ಶಿಕಾರಿಪುರ ತಾಲೂಕು ಆಡಳಿತ ನಿರ್ಧರಿಸಿದೆ. ಶನಿವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿ ತಹಶೀಲ್ದಾರ್ ಎಂ.ಪಿ.ಕವಿರಾಜ್, ಕಳೆದ ವರ್ಷ ತರಕಾರಿ ವ್ಯಾಪಾರಿಗಳಿಗೆ ಪಾಸ್ ನೀಡಲಾಗಿತ್ತು. ಅದೆ ಮಾದರಿ ಪಾಸ್‍ ವಿತರಿಸಿ, ಆಯಾ ವಾರ್ಡ್‍ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದರೆ ಜನ ಗುಂಪುಗೂಡುವುದು ತಪ್ಪಿಸಿದಂತಾಗುತ್ತದೆ ಎಂದರು. ಸೋಮವಾರದಿಂದ ಶಿಕಾರಿಪುರದಲ್ಲಿ ತರಕಾರಿ … Read more

ಗೆಳೆಯರೊಡನೆ ಭದ್ರಾ ನಾಲೆಯಲ್ಲಿ ಈಜುತ್ತಿದ್ದ ಬಾಲಕ ಕಣ್ಮರೆ, ಸಮೀಪದಲ್ಲಿ ಶವವಾಗಿ ಪತ್ತೆ

Drowned-Reference-Image-

ಶಿವಮೊಗ್ಗ ಲೈವ್.ಕಾಂ | SASVEHALLI NEWS | 1 MAY 2021 ಭದ್ರಾ ನಾಲೆಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಚನ್ನಮುಂಬಾಪುರ ಸಮೀಪ ಭದ್ರಾ ನಾಲೆಯಲ್ಲಿ ಘಟನೆ ಸಂಭವಿಸಿದೆ. ಸಂಜಯ್ (16) ಮೃತ ಬಾಲಕ. ಈತ ಹೊಸಹಳ್ಳಿಯ 2ನೇ ಕ್ಯಾಂಪ್‍ನ ಮುರುಗೇಶ್ ಅವರ ಮಗ. ಸಂಜಯ್ ಮೂಗನಾಗಿದ್ದು, ಭದ್ರಾವತಿಯ ತರಂಗ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ. ಕರ್ಫ್ಯೂ ಮತ್ತು ಕರೋನ ಹರಡುವ ಭೀತಿ ಹಿನ್ನೆಲೆ ಶಾಲೆಗೆ ರಜೆ ನೀಡಲಾಗಿತ್ತು. ಹಾಗಾಗಿ ಸಂಜಯ್ ಮನೆಗೆ ಬಂದಿದ್ದ. … Read more

ಸಾಗರದ ಮಸೀದಿ ಮೇಲೆ ತಹಶೀಲ್ದಾರ್, ಪೊಲೀಸರಿಂದ ದಾಳಿ, 25ಕ್ಕೂ ಹೆಚ್ಚು ಜನರ ಮೇಲೆ ಕೇಸ್

Sagara Town Police Station 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 MAY 2021 ಜಾತ್ರೆ, ಸಮಾರಂಭ, ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿದೆ. ಹಾಗಿದ್ದೂ ಸಾಗರದ ಆಜಾರ್‍ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗಿದೆ. ಈ ಸಂಬಂಧ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಧಿಕಾರಿಗಳು ದಾಳಿ ನಡೆಸಿ, ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ  ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಸುಮಾರು 25 ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಈ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ದಿಢೀರ್ ದಾಳಿ ನಡೆಸಿದ ಪೊಲೀಸರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ವಶಕ್ಕೆ … Read more

ತೀರ್ಥಹಳ್ಳಿಯ ಎರಡು ಅಂಗಡಿಗಳ ಮೇಲೆ ದಿಢೀರ್ ದಾಳಿ, ಮಾಲೀಕರ ವಿರುದ್ಧ ಕೇಸ್, ಕಾರಣವೇನು?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 1 MAY 2021 ಲಾಕ್‍ಡೌನ್ ಮಾದರಿ ಕರ್ಫ್ಯೂ ಸಂದರ್ಭವನ್ನೆ ಲಾಭ ಮಾಡಿಕೊಳ್ಳಲು ಮುಂದಾಗಿದ್ದ ತೀರ್ಥಹಳ್ಳಿಯ ಎರಡು ಅಂಗಡಿಗಳ ಮಾಲೀಕರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅಧಿಕ ಬೆಲೆಗೆ ವಸ್ತುಗಳನ್ನು ಮಾರಾಟದ ಮೇಲೆ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ತೀರ್ಥಹಳ್ಳಿಯ ಆಗುಂಬೆ ಸರ್ಕಲ್‍ ಮತ್ತು ಸಾಗರ ರಸ್ತೆಯಲ್ಲಿರುವ ಸಿಗರೇಟ್ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಕರ್ಫ್ಯೂ ಅವಧಿಯಲ್ಲಿ ನಿಗದಿಗಿಂತಲೂ ಹೆಚ್ಚಿನ ದರಕ್ಕೆ ವಸ್ತುಗಳ ಮಾರಾಟವಾಗುತ್ತಿತ್ತು. ಈ ಹಿನ್ನೆಲೆ ಕಾನೂನು ಮಾಪನಶಸ್ತ್ರ  ಇಲಾಖೆ … Read more

ಭದ್ರಾವತಿ ನಗರಸಭೆ ಕಾಂಗ್ರೆಸ್ ಕೈಗೆ, ಜೆಡಿಎಸ್, ಬಿಜೆಪಿ ಗೆದ್ದಿದ್ದೆಷ್ಟು?

Bhadravathi Nagarasabhe File Image 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 30 APRIL 2021 ತೀವ್ರ ಪ್ರತಿಷ್ಠೆ ಮತ್ತು ಕುತೂಹಲ ಕೆರಳಿಸಿದ್ದ ಭದ್ರಾವತಿ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಜೈತ್ರಯಾತ್ರೆ ಮುಂದುವರೆದಿದೆ. ನಗರಸಭೆಯ 35 ವಾರ್ಡ್​​ಗಳ ಪೈಕಿ 34ರಲ್ಲಿ ಚುನಾವಣೆ ನಡೆದಿತ್ತು. ಈ ಪೈಕಿ 18 ವಾರ್ಡ್​ನಲ್ಲಿ ಕಾಂಗ್ರೆಸ್, 11ರಲ್ಲಿ ಜೆಡಿಎಸ್, 4ರಲ್ಲಿ ಬಿಜೆಪಿ, ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494 ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200 ಶಿವಮೊಗ್ಗ … Read more

ಪಾಸ್ ಕೊಟ್ಟು ಸುಮ್ಮನಾಗ್ತಾರೆ ಅಂತಾ ತಿಳಿದಿದ್ದವರಿಗೆ ಭದ್ರಾವತಿ ನಗರಸಭೆ ಅಧಿಕಾರಿಗಳಿಂದ ರಾತ್ರಿ ಶಾಕ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 APRIL 2021 ನಗರದ ಕಲ್ಯಾಣ ಮಂಟಪಗಳಿಗೆ ಭದ್ರಾವತಿ ನಗರ ಸಭೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದುವೆ ಸಮಾರಂಭದಲ್ಲಿ ನಿಗದಿಗಿಂತಲೂ ಹೆಚ್ಚು ಜನ ಸೇರಿದ್ದರಿಂದ ದಂಡ ವಿಧಿಸಲಾಗಿದೆ. ನಗರಸಭೆ ಆಯುಕ್ತ ಮನೋಹರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭದ್ರಾವತಿ ನಗರದ ವಿವಿಧ ಕಲ್ಯಾಣ ಮಂಟಪಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು. ಆರತಕ್ಷತೆ ನಡೆಯುವ ಸಂದರ್ಭ ಕಲ್ಯಾಣ ಮಂಟಪಗಳಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿದೆಯೇ, ನಿಗದಿತ ಸಂಖ್ಯೆಯ ಜನರು … Read more