‘ಸಾಗರದ ಕ್ಷೇತ್ರದ ಜನರಿಗೆ ಸಂಸದರು ದ್ರೋಹ ಬಗೆದಿದ್ದಾರೆ, ಒತ್ತಡ ಹೇರುವಲ್ಲಿ ಶಾಸಕರು ವಿಫಲವಾಗಿದ್ದಾರೆ’

Thi Na Srinivas

ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020 ತಾಳಗುಪ್ಪದಲ್ಲೇ ರೈಲ್ವೆ ಟರ್ಮಿನಲ್ ನಿರ್ಮಿಸುತ್ತೇವೆ ಎಂದು ಈವರೆಗೂ ಜನರಿಗೆ ಭರವಸೆ ನೀಡಿ, ಈಗ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಈ ಮೂಲಕ ಸಾಗರ ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನಾ.ಶ್ರೀನಿವಾಸ್, ಕೋಟೆಗಂಗೂರಿನಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಆರು ಕೋಟಿ ರೂ. ಹಣ ಮಂಜೂರಾಗಿದೆ. ಈಗಾಗಲೆ ಜಾಗ ಸಮತಟ್ಟು … Read more

ಬೈಕು, ಟ್ರ್ಯಾಕ್ಟರ್‌ನಲ್ಲಿ ಓಡಾಡೋರನ್ನಷ್ಟೆ ಅಟ್ಟಾಡಿಸಿ ಕಚ್ಚುತ್ತಿದೆ ಮಂಗ, ಮನೆಯಿಂದ ಹೊರಬರಲು ಜನಕ್ಕೆ ಢವಢವ

251120 Monkey Manace in Shikaripura Shirihalli Tanda 1

ಶಿವಮೊಗ್ಗ ಲೈವ್.ಕಾಂ |SHIKARIPURA NEWS | 25 NOVEMBER 2020 ಈ ಊರಲ್ಲಿ ಬೈಕ್ ಓಡಿಸೋಕೆ ಹೆದರುತ್ತಿದ್ದಾರೆ ಜನ. ಟ್ರ್ಯಾಕ್ಟರ್ ಹತ್ತಿದವರಂತು ಆಸ್ಪತ್ರೆಗೆ ಹೋಗೋದು ಪಕ್ಕಾ. ಇದಕ್ಕೆಲ್ಲ ಕಾರಣ ಒಂದು ಮಂಗ. ಶಿಕಾರಿಪುರ ತಾಲೂಕು ಶೀರಿಹಳ್ಳಿ ತಾಂಡದ ಜನ ಮಂಗವೊಂದರ ಕಾಟದಿಂದ ರೋಸಿ ಹೋಗಿದ್ದಾರೆ. ಯಾವಾಗ, ಎಲ್ಲಿ, ಯಾರ ಮೇಲೆ ದಾಳಿ ಮಾಡುತ್ತದೋ ಎಂಬ ಆತಂಕದಿಂದ ದಿನ ದೂಡುವಂತಾಗಿದೆ. ಬೈಕ್, ಟ್ರಾಕ್ಟರ್ ಕಂಡರೆ ಅಟ್ಯಾಕ್ ಶೀರಿಹಳ್ಳಿ ತಾಂಡದಲ್ಲಿರುವ ಮಂಗಕ್ಕೆ ಬೈಕು, ಟ್ರ್ಯಾಕ್ಟರ್ ಕಂಡರೆ ವಿಪರೀತ ಸಿಟ್ಟು. ಇವುಗಳ … Read more

ಆರು ಸಾವಿರ ಕೋಟಿ ಅಂದರು ಆರು ರುಪಾಯಿಯೂ ಬರಲಿಲ್ಲ, ಸಂಸದರ ಮನೆಗೆ 22 ಸರ್ತಿ ಹೋದರೂ ಪ್ರಯೋಜವಾಗಲಿಲ್ಲ

251120 VISL Senior worker Balakrishna Press Meet 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020 ಭದ್ರಾವತಿ ವಿಐಎಸ್‍ಎಲ್ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲು ವಿಐಎಸ್‍ಎಲ್ ಉಳಿಸಿ ಹೋರಾಟ ಸಮಿತಿ ರಚಿಸಲಾಗಿದೆ ಎಂದು ಕಾರ್ಖಾನೆಯ ಹಿರಿಯ ಕಾರ್ಮಿಕ ಮುಖಂಡ ಬಾಲಕೃಷ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಕೃಷ್ಣ ಅವರು, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ, ವಿಐಎಸ್‍ಎಲ್ ಸೊರಗಿದೆ. ಖಾಸಗೀಕರಣ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲು ಸಮಿತಿ ರಚಿಸಲಾಗಿದೆ ಎಂದರು. ಎಲ್ಲ ಪಕ್ಷದ ಮುಖಂಡರಿದ್ದಾರೆ ವಿಐಎಸ್‍ಎಲ್ ಉಳಿಸಿ ಹೋರಾಟ ಸಮಿತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍, ಎಎಪಿ … Read more

ತೀರ್ಥಹಳ್ಳಿಯಲ್ಲಿ ಮಹಿಳೆಗೆ ಗುದ್ದಿ ಪರಾರಿಯಾದ ಓಮಿನಿ ಕಾರು, ಮಹಿಳೆ ಸಾವು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 25 NOVEMBER 2020 ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಗಂಟೆಹಕ್ಕಲು ಗ್ರಾಮದ ನಿವಾಸಿ ಶಾರದಾ ರಮೇಶ್, ಮೃತ ದುರ್ದೈವಿ. ಹಾಲು ಕೊಡಲು ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ತೀರ್ಥಹಳ್ಳಿ ಕಡೆಯಿಂದ ಆಗುಂಬೆ ಕಡೆಗೆ ತೆರಳುತ್ತಿದ್ದ ಓಮಿನಿ ಕಾರೊಂದು ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಗಂಟೆಹಕ್ಕಲು ಸಮೀಪ ರಾಷ್ಟ್ರೀಯ ಹೆದ್ದಾರಿ 169ಎರಲ್ಲಿ ಘಟನೆ ಸಂಭವಿಸಿದೆ. ಅಪಘಾತ ಆಗುತ್ತಿದ್ದಂತೆ … Read more

ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಡಿಸಿಗೆ ದೂರು ನೀಡಿದ 86 ವರ್ಷದ ವೃದ್ಧೆ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ, ಕಾರಣವೇನು?

ಶಿವಮೊಗ್ಗ ಲೈವ್.ಕಾಂ |SHIMOGA NEWS | 24 NOVEMBER 2020 ಗ್ರಾಮ ಲೆಕ್ಕಾಧಿಕಾರಿಯ ಎಡವಟ್ಟಿನಿಂದ ತಮಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ವಿಚಾರಿಸಿದರೆ ಗ್ರಾಮ ಲೆಕ್ಕಾಧಿಕಾರಿ ಉದ್ಧಟತನದಿಂದ ಉತ್ತರಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ವೃದ್ಧೆಯೊಬ್ಬರು ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ಎಚ್ಚರಿಸಿದ್ದಾರೆ. ಉಳ್ಳೂರು ಗ್ರಾಮದ ಮಂಚಾಲೆ ಗ್ರಾಮದ ಸರಸ್ವತಮ್ಮ (86), ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಎಡವಟ್ಟೇನು? ಸರಸ್ವತಮ್ಮ ಅವರಿಗೆ ಸಿರಗುಪ್ಪ … Read more

GOOD NEWS | ಅದ್ಧೂರಿ ಮದುವೆಯ ಹಣ ಶಾಲೆಗೆ ದೇಣಿಗೆ ನೀಡಿದ ತೀರ್ಥಹಳ್ಳಿ ಯುವತಿ

251120 Donation For School by Bride in Thirthahalli Agumbe 1

ಶಿವಮೊಗ್ಗ ಲೈವ್.ಕಾಂ |THIRTHAHALLI NEWS | 25 NOVEMBER 2020 ಅದ್ಧೂರಿ ವಿವಾಹದ ಬದಲು ತಾನು ಓದಿದ ಶಾಲೆಗೆ ಹಣ ದೇಣಿಗೆ ನೀಡಿ, ಯುವತಿಯೊಬ್ಬರು ಜನ ಮೆಚ್ಚುಗೆ ಗಳಿಸಿದ್ದಾರೆ. ಮದುವೆ ಲಕ್ಷಾಂತರ ರುಪಾಯಿ ಖರ್ಚು ಮಾಡುವ ಬದಲು, ಶಾಲೆಯ ಅಭಿವೃದ್ಧಿದಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ತೀರ್ಥಹಳ್ಳಿಯ ತಾಲೂಕು ಮನಸ್ಸುಗಾರ ಗ್ರಾಮದ ಟೀಕಪ್ಪ ಗೌಡ ಅವರ ಪುತ್ರಿ ಚೇತನಾ ಒಂದು ಲಕ್ಷ ರೂ. ಹಣವನ್ನು ಶಾಲೆಗೆ ದೇಣಿಗೆ ನೀಡಿದ್ದಾರೆ. ತಾವು ಓದಿದ ಗುಡ್ಡೇಕೇರಿ ಪ್ರೌಢಶಾಲೆ ಮತ್ತು … Read more

ಕಾರು, ಬೈಕ್ ಡಿಕ್ಕಿ, ನಿವೃತ್ತ ಪ್ರಾಂಶುಪಾಲರೊಬ್ಬರಿಗೆ ಗಂಭೀರ ಗಾಯ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ |SAGARA NEWS | 23 NOVEMBER 2020 ಸಾಗರದ ಜೋಗ ರಸ್ತೆಯಲ್ಲಿ ಕಾರು ಮತ್ತು ಮೊಪೆಡ್ ಬೈಕ್‍ ನಡುವೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರನ ತಲೆಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಿವೃತ್ತ ಪ್ರಾಂಶುಪಾಲ ನೀರ್ ಕೊಡು ಬಡಾವಣೆಯ ಹನುಮಂತಪ್ಪ ಅವರ ತಲೆಗೆ ಗಂಭೀರ ಹೊಡೆತ ಬಿದ್ದಿದೆ. ತೀವ್ರ ರಕ್ತಸ್ರಾವವಾಗುತ್ತಿತ್ತು. ಕೂಡಲೆ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹನುಮಂತಪ್ಪ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆಯಲ್ಲಿ … Read more

ಕರೋನ ವರದಿಯ ಸೀಲ್‌ನಲ್ಲಿ ಅಕ್ಷರ ವ್ಯತ್ಯಾಸ, ತೀರ್ಥಹಳ್ಳಿ ಮಹಿಳೆಗೆ ವಿಮಾನ ಹತ್ತಿಸದ ಸ್ಪೈಸ್ ಜೆಟ್, ವ್ಯತ್ಯಾಸ ಆಗಿದ್ದೇನು?

Corona PPE Kit and swab box

ಶಿವಮೊಗ್ಗ ಲೈವ್.ಕಾಂ |SHIMOGA NEWS | 23 NOVEMBER 2020 ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೀಲ್‍ ಎಡವಟ್ಟಿನಿಂದ, ತೀರ್ಥಹಳ್ಳಿಯ ಮಹಿಳೆಯೊಬ್ಬರನ್ನು ಮಂಗಳೂರು ಏರ್‍ಪೋರ್ಟ್‍ನಲ್ಲಿ ವಿಮಾನ ಹತ್ತದಂತೆ ತಡೆಯಲಾಗಿದೆ. ಸಿಮ್ಸ್‍ ಸಂಸ್ಥೆ ನೀಡಿದ್ದ ಕರೋನ ವರದಿಯಲ್ಲಿ ಸ್ಪೆಲ್ಲಿಂಗ್ ವ್ಯತ್ಯಾಸದಿಂದ ಗೊಂದಲ ನಿರ್ಮಾಣವಾಗಿತ್ತು. ಏನಿದು ಘಟನೆ? ತೀರ್ಥಹಳ್ಳಿಯ 47ನೇ ವರ್ಷದ ಚಾಂದ್ ಬೇಗಂ ಅವರು ದುಬೈಗೆ ತೆರಳಲು ವಿಮಾನದ ಟಿಕೆಟ್‌ ಬುಕ್‌ ಮಾಡಿದ್ದರು. ದುಬೈನಲ್ಲಿರುವ ಮಗನ ಮನೆಗೆ ತೆರಳಬೇಕಿತ್ತು. ಮಂಗಳೂರಿನಿಂದ ಸ್ಪೈಸ್‌ ಜೆಟ್‌ ಸಂಸ್ಥೆಯ ವಿಮಾನದಲ್ಲಿ ಶುಕ್ರವಾರ ರಾತ್ರಿ … Read more

ಭದ್ರಾವತಿ ಜನ್ನಾಪುರದಲ್ಲಿ ದೇವಸ್ಥಾನದ ಬಳಿಯೇ ಮದ್ಯದ ಅಂಗಡಿ, ತೆರವಿಗೆ ಒತ್ತಾಯ

211120 Bhadravathi Liquor Shop Protest Press Meet 1

ಶಿವಮೊಗ್ಗ ಲೈವ್.ಕಾಂ |SHIMOGA / BHADRAVATHI NEWS | 21 NOVEMBER 2020 ಭದ್ರಾವತಿಯ ಜನ್ನಾಪುರದಲ್ಲಿ ದೇವಸ್ಥಾನದ ಸಮೀಪದಲ್ಲಿ ಮದ್ಯದ ಅಂಗಡಿ ನಡೆಸಲಾಗುತ್ತಿದೆ. ಅದನ್ನ ಬಂದ್ ಮಾಡಿಸಬೇಕು ಎಂದು ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಜನ್ನಾಪುರದ ಅಂತರಘಟ್ಟಮ್ಮ ದೇವಸ್ಥಾನವಿದೆ. ಅದರ ಸಮೀಪದಲ್ಲೇ ಮದ್ಯದ ಅಂಗಡಿ ಇದೆ. ಇಲ್ಲಿ ಮದ್ಯ ಮಾರಾಟಕ್ಕಷ್ಟೆ ಅವಕಾಶವಿದೆ. ಆದರೆ ಅಲ್ಲಿಯೇ ಕುಳಿತು ಕುಡಿಯುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಅಬಕಾರಿ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. … Read more

ಬಿಹಾರದಿಂದ ಮನೆ ಬಿಟ್ಟು ಸಾಗರಕ್ಕೆ ಬಂದ ಯುವಕ, ಮತ್ತೆ ಪೋಷಕರನ್ನು ಸೇರಲು ನೆರವಾದ ಕರ್ಕಿಕೊಪ್ಪ ಆಟೋ ಚಾಲಕ

211120 Bihar Youth Re Unites with Family in Shimoga 1

ಶಿವಮೊಗ್ಗ ಲೈವ್.ಕಾಂ |SAGARA / SHIMOGA NEWS | 21 NOVEMBER 2020 ಜಾರ್ಖಂಡ್ ರಾಜ್ಯದ ರಾಂಚಿಯಿಂದ ಮನೆ ಬಿಟ್ಟು ಬಂದು ಸಾಗರದ ಸುತ್ತಮುತ್ತ ಅಲೆದಾಡುತ್ತಿದ್ದ ಯುವಕ ಪುನಃ ಕುಟುಂಬ ಸೇರಿದ್ದಾನೆ. ಒಂದು ತಿಂಗಳ ಬಳಿಕ ಯುವಕ ಮನೆಯವರನ್ನು ಸೇರಲು ನೆರವಾದ ಸಾಗರದ ಆಟೋ ಚಾಲಕನಿಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಶಂಸೆ ಪತ್ರ ನೀಡಿದೆ. ಬಿಹಾರದಿಂದ ಬಂದಿದ್ದ ಯುವಕ ಶಾಶ್ವತ್ ಕುಮಾರ್ (24) ಎಂಬಾತ ಬಿಹಾರದಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದ. ಅಲ್ಲಿ ಗಲಾಟೆ ಮಾಡಿಕೊಂಡು ಮನೆ … Read more