ಸಾಗರದಲ್ಲಿ ಹೊಸ ಲಾಕ್ ಡೌನ್ ರೂಲ್ಸ್ ಇಲ್ಲ, ಗ್ರಾಮ ಪಂಚಾಯ್ತಿ ಟಾಸ್ಕ್ ಫೋರ್ಸ್ ಸಕ್ರಿಯಕ್ಕೆ ಸೂಚನೆ

070720 Sagara MLA Halappa Meeting in Sagara Covid19 report 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಜುಲೈ 2020 ಲಾಕ್‍ ಡೌನ್ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸಿರುವ ನಿಯಮಗಳನ್ನು ಹೊರತುಪಡಿಸಿ, ತಾಲೂಕು ಆಡಳಿತ ಹೊಸ ನಿಯಮಗಳನ್ನು ಜಾರಿಗೊಳಿಸುವುದು ಬೇಡ ಎಂದು ಶಾಸಕ ಹರತಾಳು ಹಾಲಪ್ಪ ಸೂಚಿಸಿದ್ದಾರೆ. ಕೋವಿಡ್ 19 ನಿಯಂತ್ರಣ ಕುರಿತು ಸಾಗರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕರೆಯಾಗಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ ಹಾಲಪ್ಪ, ತಾಲೂಕು ಆಡಳಿತದ ವತಿಯಿಂದ ಹೊಸ ನಿಯಮ ಜಾರಿಗೊಳಿಸುವುದು ಬೇಡ. ಇದರಿಂದ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಲಿದೆ … Read more

ಹಣಗೆರೆಕಟ್ಟೆಯಲ್ಲಿ ನಿಷೇಧಾಜ್ಞೆ, ಪ್ರಾರ್ಥನಾ ಕೇಂದ್ರ ಬಂದ್, ಭಕ್ತರು ಬರುವಂತಿಲ್ಲ, ಹರಕೆ ತೀರಿಸುವಂತಿಲ್ಲ, ಕಾರಣವೇನು?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 7 ಜುಲೈ 2020 ಭಾವೈಕ್ಯತೆಯ ಪ್ರಾರ್ಥನಾ ಕೇಂದ್ರ ಹಣಗೆರೆಕಟ್ಟೆಯ ಶ್ರೀ ಚೌಡೇಶ್ವರಿ, ಭೂತರಾಯ ಮತ್ತು ಸೈಯದ್ ಅಲಿ ಹಜರತ್ ದರ್ಗಾಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಸಂಬಂಧ ತಾಲೂಕು ಆಡಳಿತದ ವತಿಯಿಂದ ಆದೇಶ ಹೊರಡಿಸಲಾಗಿದೆ. ಎಲ್ಲಿಯವರೆಗೆ ನಿಷೇಧಾಜ್ಞೆ? ಹಣಗೆರೆಕಟ್ಟೆಯಲ್ಲಿ ಜುಲೈ 6ರ ಮಧ್ಯರಾತ್ರಿಯಿಂದಲೇ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಗ್ರಾಮದಲ್ಲಿ ಐದು ಜನಕ್ಕಿಂತಲೂ ಹೆಚ್ಚು ಜನರು ಸೇರುವಂತಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಜುಲೈ 15ರವರೆಗೆ ಅಥವಾ ಮುಂದಿನ … Read more

ಎಂಪಿಎಂನಿಂದ ಭದ್ರಾವತಿ ನಗರಸಭೆಗೆ ನೊಟೀಸ್, ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ

MPM Factory Bhadravathi

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಜುಲೈ 2020 ಎಂಪಿಎಂ ಕ್ವಾರ್ಟರ್ಸ್‍ನಲ್ಲಿ ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ, ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ನೊಟೀಸ್ ನೀಡಲಾಗಿದೆ. ಕಾಗದ ನಗರದಲ್ಲಿ ಎಂಪಿಎಂ ವಸತಿ ಪ್ರದೇಶದಲ್ಲಿ ಭದ್ರಾವತಿ ನಗರಸಭೆ ವತಿಯಿಂದ ಕೆಲವು ಮಳಿಗೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಬಾಡಿಗೆಗೆ ನೀಡಲಾಗಿದೆ. ಈಗ ಈ ಮಳಿಗೆಗಳನ್ನು ತೆರವು ಮಾಡುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ಸಚಿವ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ … Read more

ಸಾಗರದ ಲ್ಲಿ ಮೆಸ್ಕಾಂ ಜೆಇಗೆ ಕರೋನ, ಲಕ್ಷಣವಿಲ್ಲದಿದ್ದರೂ ಸೋಂಕು ಪ್ರತ್ಯಕ್ಷ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 6 ಜುಲೈ 2020 ಬಳ್ಳಾರಿಗೆ ಹೋಗಿ ಬಂದಿದ್ದ ಮೆಸ್ಕಾಂ ಸಹಾಯಕ ಅಭಿಯಂತರರೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. 27 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಟ್ರಾವಲ್ ಹಿಸ್ಟರಿ ಇದ್ದ ಕಾರಣ ಇವರು ಕರೋನ ಪರೀಕ್ಷೆಗೆ ಒಳಪಟ್ಟಿದ್ದರು. ಯಾವುದೇ ಲಕ್ಷಣಗಳಿಲ್ಲದೆ ಇದ್ದರೂ ಮಹಿಳೆಯಲ್ಲಿ ಸೋಂಕು ಇರುವುದು ದೃಢವಾಗಿದೆ. ಕೂಡಲೇ ಮೆಸ್ಕಾಂ ಜೆಇಗೆ ಚಿಕಿತ್ಸೆ ಆರಂಭಿಸಲಾಗಿದೆ. ಮಾರ್ಕೆಟ್ ರಸ್ತೆಯ ಲಿಂಬು ಸರ್ಕಲ್ ಬಳಿ ಇವರು ವಾಸವಾಗಿದ್ದು. ಈಗ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. … Read more

ಸಾಗರಕ್ಕೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಟೆಸ್ಟ್, ವಾಹನಗಳಿಗೆ ಸ್ಯಾನಿಟೈಸ್ ಮಾಡಿ, ಮಾಜಿ ಮಿನಿಸ್ಟರ್ ಮನವಿ

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಜುಲೈ 2020 ಸಾಗರ ನಗರದಲ್ಲಿ ಕರೋನ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗಾಗಿ ಸಾಗರ ಪಟ್ಟಣವನ್ನು ಪ್ರವೇಶಿಸುವ ಪ್ರತಿಯೊಬ್ಬರ ಥರ್ಮಲ್ ಸ್ಕ್ಯಾನ್ ಮಾಡಬೇಕು ಮತ್ತು ವಾಹನಗಳಿಗೆ ಸ್ಯಾನಿಟೈಸರ್ ಮಾಡುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮನವಿ ಮಾಡಿದ್ದಾರೆ. ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಚಂದ್ರಶೇಕರ್ ನಾಯ್ಕ್ ಅವರನ್ನು ಭೇಟಿಯಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಾಗರ ಪಟ್ಟಣದಲ್ಲಿ ಶನಿವಾರ ಬೆಳಗ್ಗೆಯೊಳಗೆ ನಾಲ್ಕು ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಹೊರಗಿನಿಂದ … Read more

ಸಾಗರದಲ್ಲಿ ಕರ್ಫ್ಯೂ, ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್, ಯಾವುದಕ್ಕೆಲ್ಲ ವಿನಾಯಿತಿ ನೀಡಲಾಗಿದೆ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಜುಲೈ 2020 ಇವತ್ತು ರಾತ್ರಿ 8 ಗಂಟೆಯಿಂದ ಕರ್ಪ್ಯೂ ವಿಧಿಸಲಾಗುತ್ತಿದ್ದು, ಅನಗ‍ತ್ಯವಾಗಿ ಹೊರಗೆ ಓಡಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ  ವಿಭಾಗಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ. ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಟ್ಟುನಿಟ್ಟು ಕ್ರಮಗಳ ಕುರಿತು ವಿವರಿಸಿದ ಡಾ.ನಾಗರಾಜ್, ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇರಲಿದೆ. ಹಾಲು, ಔಷಧಿ ಅಂಗಡಿಗಳು ಮಾತ್ರ ಲಾಕ್‍ ಡೌನ್‍ನಿಂದ ವಿನಾಯಿತಿ … Read more

ಮತ್ತೊಬ್ಬ ಮೆಸ್ಕಾಂ ಲೈನ್ ಮನ್‌ಗೆ ಕರೋನ, ಕ್ವಾರ್ಟರ್ಸ್ ಸೀಲ್ ಡೌನ್, ಜನರಲ್ಲಿ ಆತಂಕ

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಜುಲೈ 2020 ಸಾಗರದಲ್ಲಿ ಮೆಸ್ಕಾಂನ ಮತ್ತೊಬ್ಬ ಲೈನ್‌ ಮನ್‌ಗೆ ಕರೋನ ಸೋಂಕು ತಗುಲಿದೆ. ಇದರಿಂದ ಮೆಸ್ಕಾಂ ಕ್ವಾರ್ಟರ್ಸ್‌ ಸೀಲ್‌ ಡೌನ್‌ ಮಾಡಲಾಗಿದ್ದು, ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಸೋಂಕು ತಗುಲಿದ್ದು ಹೇಗೆ? ಎರಡು ದಿನದ ಹಿಂದೆ ಮೆಸ್ಕಾಂ ಲೈನ್‌ ಮನ್‌ ಒಬ್ಬರಿಗೆ ಸೋಂಕು ತಗುಲಿತ್ತು. ಈಗ ಅವರ ಸಂಪರ್ಕದಲ್ಲಿದ್ದ ಮತ್ತೊಬ್ಬ ಲೈನ್‌ ಮನ್‌ಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಗೆ ಸ್ಯಾನಿಟೈಸ್‌ ಮಾಡಲಾಗಿದೆ. ಕ್ವಾರ್ಟರ್ಸ್‌ ಸೀಲ್‌ … Read more

ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ, ಧಗಧಗ ಹೊತ್ತಿ ಉರಿದ ಕಾರು

030720 Car Burn Near Mandagadde 1

ಶಿವಮೊಗ್ಗ ಲೈವ್.ಕಾಂ | MANDAGADDE NEWS | 3 ಜುಲೈ 2020 ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೆ ನಿಮಿಷದಲ್ಲಿ ಕಾರಿಗೆ ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ. ಮಂಡಗದ್ದೆ ಬಳಿ 15ನೇ ಮೈಲಿ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಳೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ‌.

ಹಾಲು ಹಾಕುತ್ತಿದ್ದ ವ್ಯಕ್ತಿಗೆ ಎದೆ ನೋವು, ಪರೀಕ್ಷೆ ಮಾಡಿದಾಗ ಪತ್ತೆಯಾಯ್ತು ಕರೋನ ಸೋಂಕು

shivamogga graphics map

ಶಿವಮೊಗ್ಗ ಲೈವ್.ಕಾಂ | AYANRU NEWS | 3 ಜುಲೈ 2020 ಹಾಲು ಹಾಕುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇಟ್ಟಿಗೆಹಳ್ಳಿಯ 42 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಯನೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಾಗ ಕರೋನ ಪರೀಕ್ಷೆ ನಡೆಸಲಾಗಿತ್ತು. ಆಗ ಆತನಲ್ಲಿ ಕರೋನ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಕ್ವಾರಂಟೈನ್ ಮಾಡಲಾಗಿದೆ. ಗದ್ದೆ ಕೆಲಸದ ಜೊತೆಗೆ ಈ ವ್ಯಕ್ತಿ ಹಲವು ಕಡೆ ಹಾಲು ಕೊಡಲು ಹೋಗುತ್ತಿದ್ದರು. ಡೈರಿಯೊಂದಕ್ಕೂ ಹಾಲು ಹಾಕುತ್ತಿದ್ದರು … Read more

ಭದ್ರಾವತಿಯಲ್ಲಿ ಕಂಡಕ್ಟರ್‌ಗೆ ಕರೋನ, ರಸ್ತೆ ಸೀಲ್ ಡೌನ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2020 ಭದ್ರಾವತಿಯಲ್ಲಿ KSRTC ಕಂಡಕ್ಟರ್ ಒಬ್ಬರಿಗೆ ಕರೋನ ಸೋಂಕು ತಗುಲಿದೆ. ಅವರ ತಂದೆ, ತಾಯಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಕಂಡಕ್ಟರ್‍ಗೆ ಸೋಂಕು ತಗುಲಿದ್ದು ಹೇಗೆ? ಬೆಂಗಳೂರು ಡಿಪೋದಲ್ಲಿ ಕಂಡಕ್ಟರ್ ಆಗಿದ್ದರು. ನಿತ್ಯ ಬೆಂಗಳೂರು ಮಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಸೋಂಕು ತಗುಲಿದೆ. ಜೂ.25ರಂದು ಭದ್ರಾವತಿಗೆ ಬಂದಿದ್ದರು. ಜೂನ್ 26ರಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಜೂ.27ರಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪರೀಕ್ಷೆ ನಡೆಸಲಾಗಿತ್ತು. ಜೂ.30ರಂದು … Read more