ತೀರ್ಥಹಳ್ಳಿ | ಇವತ್ತು ತೆಪ್ಪೋತ್ಸವ, ನಡೆಯಲಿದೆ ತುಂಗಾರತಿ, ಇದೇ ಮೊದಲು ಭಾಗವಸ್ತಿದ್ದಾರೆ ರಾಜ್ಯದ ಸಿಎಂ, ಹೇಗಿದೆ ಗೊತ್ತಾ ವ್ಯವಸ್ಥೆ?

ಶಿವಮೊಗ್ಗ ಲೈವ್.ಕಾಂ | THIRTHAHALLI | 28 ಡಿಸೆಂಬರ್ 2019 ಎಳ್ಳಮವಾಸ್ಯೆ ಅಂಗವಾಗಿ ಪ್ರಥಮ ಬಾರಿಗೆ ಜೀವನದಿ ತುಂಗೆಗೆ ಇವತ್ತು ಸಂಜೆ ತುಂಗಾರತಿ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ನಡೆಯುವ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಟ ವಿಜಯ್ ರಾಘವೇಂದ್ರ, ತೆಲುಗು ನಟ ವಿಜಯ್ ಇತರರು ನಾಡಿನಾದ್ಯಂತ ಬಂದು ಸೇರುವ ಜನರ ನಡುವೆಯೇ ಕುಳಿತು ಈ ಸಂಭ್ರಮವನ್ನು ಕಣ್ಣುಂಬಿಕೊಳ್ಳಲಿದ್ದಾರೆ. 70ರ ದಶಕದಲ್ಲಿ ಆರಂಭಗೊಂಡಿರುವ ತೆಪ್ಪೋತ್ಸವ … Read more

ಯಾರೂ ಇಲ್ಲದಾಗ ಮನೆಗೆ ನುಗ್ಗಿದ, ವಿಕಲಚೇತನ ಯುವತಿಯ ರೇಪ್ ಮಾಡಿದ, ಅತ್ಯಾಚಾರಿಗೆ ಬಿತ್ತು ಧರ್ಮದೇಟು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 27 ಡಿಸೆಂಬರ್ 2019 ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಕಲಚೇತನ ಯುವತಿಯ ಕೈ ಕಾಲು ಕಟ್ಟಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅತ್ಯಾಚಾರಕ್ಕೆ ಯತ್ನಿಸಿದವನನ್ನು ಹಿಡಿದು ಗ್ರಾಮಸ್ಥರೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಯುವತಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ಸಂಭವಿಸಿದೆ. ಅತ್ಯಾಚಾರ ಯತ್ನದ ವೇಳೆ ಯುವತಿ ಜೋರಾಗಿ ಕೂಗಿಕೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಧರ್ಮದೇಟು ಅತ್ಯಾಚಾರಕ್ಕೆ ಯತ್ನಿಸಿದವನನ್ನು ಸತೀಶ್ … Read more

ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆ, ಪುರಾಣ ಪ್ರಸಿದ್ಧ ರಾಮುಕುಂಡದಲ್ಲಿ ಸಾವಿರ ಸಾವಿರ ಭಕ್ತರಿಂದ ತೀರ್ಥ ಸ್ನಾನ | ವಿಡಿಯೋ ರಿಪೋರ್ಟ್

ಶಿವಮೊಗ್ಗ ಲೈವ್.ಕಾಂ | THIRTHAHALLI | 26 ಡಿಸೆಂಬರ್ 2019 ಎಳ್ಳಮವಾಸ್ಯೆ ಜಾತ್ರೆ ಅಂಗವಾಗಿ ಇತ್ತು ತುಂಗಾ ನದಿಯ ರಾಮಕುಂಡದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿದರು. ಸಾವಿರಾರು ಭಕ್ತರು ತೀರ್ಥ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. ರಾಮಕುಂಡಕ್ಕೆ ತೀರ್ಥ ಸ್ನಾನಕ್ಕೆ ಬರಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ರಾಮಕುಂಡದವರೆಗೆ ಬರಲು ಎರಡು ಬದಿಯಲ್ಲೂ ಹಗ್ಗದ ಕಟ್ಟಲಾಗಿತ್ತು. ಸೂಕ್ತ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು. ರಾಮಕುಂಡದಲ್ಲಿ ತೀರ್ಥ ಸ್ನಾನಕ್ಕೇನು ಕಾರಣ? ಮಾತೃ ಹತ್ಯೆ ಶಾಪಕ್ಕೆ ತುತ್ತಾಗಿದ್ದ ಪರಶುರಾಮ, … Read more

ಒಂದು ಸಿಮ್ ಖರೀದಿಸಿದರೆ ಒಂದು ಕೆ.ಜಿ. ಈರುಳ್ಳಿ ಫ್ರೀ.. ಫ್ರೀ.. ಫ್ರೀ.., ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯ ಆಫರ್

ಶಿವಮೊಗ್ಗ ಲೈವ್.ಕಾಂ | SHIMOGA | 26 ಡಿಸೆಂಬರ್ 2019 ಸಾವಿರ ರೂ. ಬಟ್ಟೆ ಖರೀದಿಸಿದರೆ ಒಂದು ಕೆ.ಜಿ ಈರುಳ್ಳಿ ಫ್ರೀ ಅಂತಾ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಾಪಾರಿಯೊಬ್ಬರು ಆಫರ್ ಕೊಟ್ಟಿದ್ದರು. ಈರುಳ್ಳಿ ಬೆಲೆ ನೂರು ರೂ. ಗಡಿ ದಾಟಿದ್ದಾಗ ಇಂತಹ ಆಫರ್ ನೀಡಿದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಈಗ ಶಿವಮೊಗ್ಗದಲ್ಲಿ ಟೆಲಿಕಾಂ ಸಂಸ್ಥೆಯೊಂದು ಇಂತಹುದೇ ಆಫರ್ ಕೊಡುತ್ತಿದೆ. ಶಿವಮೊಗ್ಗದ ಪುರದಾಳು ಗ್ರಾಮದಲ್ಲಿ ಟೆಲಿಕಾಂ ಸಂಸ್ಥೆಯೊಂದು ಒಂದು ಕೆ.ಜಿ ಈರುಳ್ಳಿಯನ್ನು ಉಚಿತವಾಗಿ ಕೊಡುವ ಆಫರ್ ಕೊಟ್ಟಿದೆ. ಬೆಳಗ್ಗೆ ಗ್ರಾಮಕ್ಕೆ … Read more

ಚಾರಣಿಗರ ಹಾಟ್ ಫೇವರೆಟ್ ಬೆಟ್ಟದ ಮೇಲೆ ಹೊಸ ವರ್ಷಾಚರಣೆಗಿಲ್ಲ ಪರ್ಮಿಷನ್, ರೂಂ ಕೊಡದಂತೆ PWDಗೆ ಲೆಟರ್

Kodachadri Mountain Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA | 26 ಡಿಸೆಂಬರ್ 2019 ಚಾರಣಿಗರ ಹಾಟ್ ಫೇವರೆಟ್ ತಾಣ ಕೊಡಚಾದ್ರಿ ಗಿರಿ ಮೇಲೆ, ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು, ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ನಿರ್ಧರಿಸಿದೆ. ಬೆಟ್ಟದ ಮೇಲಿರುವ ಪ್ರವಾಸಿ ಮಂದಿರದಲ್ಲಿ ಪ್ರವಾಸಿಗರಿಗೆ ಕೊಠಡಿ ನೀಡದಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ. ಹೊಸ ವರ್ಷಾಚರಣೆಗೇಕೆ ಬ್ರೇಕ್? ಕೊಡಚಾದ್ರಿಯಲ್ಲಿ ಶೋಲಾ ಅರಣ್ಯ ಮತ್ತು ಹುಲ್ಲುಗಾವಲಿದೆ. ಇಲ್ಲಿ ಬಂದು ಹೊಸ ವರ್ಷಾಚರಣೆ ಮಾಡುವವರು ಮೋಜು ಮಸ್ತಿ ಮಾಡುತ್ತಾರೆ, ಫೈರ್ ಕ್ಯಾಂಪ್ ಹಾಕುತ್ತಾರೆ. ಇದರಿಂದ … Read more

ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ, ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ, ಅಪ್ರಾಪ್ತೆಯ ನಿರ್ಧಾರಕ್ಕೆ ಕಾರಣವೇನು ಗೊತ್ತಾ?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | THIRTHAHALLI | 24 ಡಿಸೆಂಬರ್ 2019 ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪತ್ತೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಅಕೆಯನ್ನು ಶಿಶು ಮತ್ತು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಿದ್ದಾರೆ. ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು ಗ್ರಾಮದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ್ದೇಕೆ? ಅಪ್ರಾಪ್ತೆಯು ಶಿಕಾರಿಪುರ ತಾಲೂಕಿ ಗ್ರಾಮವೊಂದಕ್ಕೆ ಸೇರಿದವಳಾಗಿದ್ದಾಳೆ. ತಂದೆ ಮೃತರಾಗಿದ್ದಾರೆ. ತಾಯಿ ಮತ್ತು ಅಣ್ಣಂದಿರು ಮಾತ್ರ ಇದ್ದಾರೆ. ಅಣ್ಣಂದಿರು ಕೂಲಿ ಕೆಲಸ ಮಾಡುತ್ತಿದ್ದಾರೆ. ಅಪ್ರಾಪ್ತೆಯನ್ನು ಶಾಲೆಗೆ ಸೇರಿಸಿ ಓದಿಸುವುದಾಗಿ ತಿಳಿಸಿ … Read more

ಹೊಸ ವರ್ಷಕ್ಕೆ ಶಿವಮೊಗ್ಗದಿಂದ ಮತ್ತೆರಡು ಹೊಸ ರೈಲು ಆರಂಭ, ಸಂಸದ ರಾಘವೇಂದ್ರ ಭರವಸೆ

Train engine and boggies

ಶಿವಮೊಗ್ಗ ಲೈವ್.ಕಾಂ | SHIKARIPURA | 24 ಡಿಸೆಂಬರ್ 2019 ಹೊಸ ವರ್ಷಕ್ಕೆ ಶಿವಮೊಗ್ಗದಿಂದ ಮತ್ತೆರಡು ಹೊಸ ರೈಲು ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿಕಾರಿಪುರದ ಚನ್ನಕೇಶವ ನಗರದಲ್ಲಿ ಸುಗಂಧ ಬಳಗದ 14ನೇ ವರ್ಷದ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಈಗಾಗಲೇ ಶಿವಮೊಗ್ಗದಿಂದ ಚೆನ್ನೈ, ತಿರುಪತಿ, ಮೈಸೂರಿಗೆ ಮೂರು ರೈಲು ಸಂಚಾರ ಆರಂಭಿಸಿವೆ. ಹೊಸ ವರ್ಷಕ್ಕೆ ಇನ್ನು ಎರಡು ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ ಎಂದರು. ಇನ್ನು ಮೂರು ವರ್ಷದಲ್ಲಿ ಶಿವಮೊಗ್ಗದಿಂದ … Read more

ಭದ್ರಾವತಿಯ ಉಂಬ್ಳೆಬೈಲು ರಸ್ತೆ ಬದಿಯಲ್ಲಿ ಐದು ತಿಂಗಳ ಭ್ರೂಣ ಪತ್ತೆ

ಶಿವಮೊಗ್ಗ ಲೈವ್.ಕಾಂ | BHADRAVATHI | 23 ಡಿಸೆಂಬರ್ 2019 ಬೆಳವಣಿಗೆ ಹಂತದಲ್ಲಿದ್ದ ಆರು ತಿಂಗಳ ಶಿಶುವಿನ ಭ್ರೂಣ ಪತ್ತೆಯಾಗಿದೆ. ರಸ್ತೆ ಬದಿಯಲ್ಲಿ ಭ್ರೂಣವನ್ನು ಬಿಸಾಕಿ ಹೋಗಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಮುಂಭಾಗ ಭ್ರೂಣ ಪತ್ತೆಯಾಗಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರು, ಭ್ರೂಣ ಬಿಸಾಡಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಉಜ್ಜನೀಪುರ ನಗರ ಆರೋಗ್ಯ ಕೇಂದ್ರದ ವೈದ್ಯ ಡಾ.ಗಿರಿಧರ್ … Read more

ಭದ್ರಾವತಿ VISL ಉತ್ಸವಕ್ಕೆ ದಿನಾಂಕ ಫಿಕ್ಸ್, 31 ದಿನದ ಉತ್ಸವದಲ್ಲಿ ಏನೇನೆಲ್ಲ ವಿಶೇಷತೆಗಳಿವೆ ಗೊತ್ತಾ?

VISL Bhadravathi 1

ಶಿವಮೊಗ್ಗ ಲೈವ್.ಕಾಂ | BHADRAVATHI | 21 ಡಿಸೆಂಬರ್ 2019 ವಿಐಎಸ್‌ಎಲ್ ಕಾರ್ಖಾನೆಯಿಂದ ಜ.8ರಿಂದ ಫೆ.7ರವರೆಗೆ 31 ದಿನಗಳ ಕಾಲ ವಿಐಎಸ್‌ಎಲ್ ಉತ್ಸವ ಜರುಗಲಿದೆ ಎಂದು ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್.ಪ್ರವೀಣ್ ಕುಮಾರ್‌ ತಿಳಿಸಿದರು. ಕೇರಳ ಸಮಾಜಂ ಸೇರಿ ವಿವಿಧ ಸಮಾಜಗಳ ಸಂಸ್ಕೃತಿ, ಸಂಪ್ರದಾಯ ಹಾಗೂ ವಿಶೇಷ ಖಾದ್ಯಗಳನ್ನು ಪರಿಚಯಿಸುವ, ವಿವಿಧ ಶಾಲಾ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಆ ಮೂಲಕ ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಕಲಾಪ್ರಕಾರ ಈ ಉತ್ಸವದಲ್ಲಿ ಅನಾವರಣಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಐಎಸ್‌ಎಲ್ … Read more

ಸೊರಬದ ಸಮಗ್ರ ಅಭಿವೃದ್ಧಿಗೆ ಚಿಂತನೆ, ಪ್ರಥಮ ದರ್ಜೆ ಕಾಲೇಜಿನ 4.73 ಕೋಟಿಯ ಕಾಮಗಾರಿಗೆ ಗುದ್ದಲಿ ಪೂಜೆ

ಶಿವಮೊಗ್ಗ ಲೈವ್.ಕಾಂ | SORABA | 21 ಡಿಸೆಂಬರ್ 2019 ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸಾರ್ವಜನಿಕರ ತೆರಿಗೆ ಹಣವಾಗಿದ್ದು, ಗುಣಮಟ್ಟದ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 4.73 ಕೋಟಿ ರೂ. ವೆಚ್ಚದ ಗ್ರಂಥಾಲಯ, ಹೆಚ್ಚುವರಿ ಕೊಠಡಿ, ಶೌಚಗೃಹ, ವಿಶ್ರಾಂತಿ ಕೊಠಡಿ ಹಾಗೂ ಆಡಿಟೋರಿಯಂ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಆಗಬೇಕಾದ ಕೆಲಸಗಳನ್ನು ಕೈಗೊಳ್ಳುವ ಮೊದಲು ಮುಂದಿನ ಪೀಳಿಗೆಗೆ ಅನುಕೂಲವಾಗುವ … Read more