ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು, ನಾಪತ್ತೆಯಾಗಿ ಮೂರು ದಿನದ ಬಳಿಕ ಮನೆ ಹತ್ತಿರದ ಬಾವಿಯಲ್ಲಿ ಶವ

ಶಿವಮೊಗ್ಗ ಲೈವ್.ಕಾಂ | ರಿಪ್ಪನ್’ಪೇಟೆ | 26 ಸೆಪ್ಟೆಂಬರ್ 2019 ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಯ ಮೃತದೇಹ ಊರಿನ ಬಾವಿಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿಯನ್ನು ಕೊಲೆಗೈದು ಮೃತದೇಹವನ್ನು ಬಾವಿಗೆ ತಂದು ಹಾಕಿರುವ ಕುರಿತು ಶಂಕೆ ವ್ಯಕ್ತವಾಗಿದೆ. ರಿಪ್ಪನ್’ಪೇಟೆ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾದಾಪುರ ಗ್ರಾಮದ ಪೂಜಾ (17) ಮೃತಳು. ಭಾನುವಾರ ಸಂಜೆಯಿಂದ ಪೂಜಾ ಕಾಣೆಯಾಗಿದ್ದಳು. ಮನೆಯವರು ಎಲ್ಲಿಯೆ ಹುಡುಕಾಡಿದರು ಪೂಜಾ ಕುರಿತು ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೂಜಾಳ ಸಹೋದರ ಗೋಪಾಲಕೃಷ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ … Read more

ನಕಲಿ ಹಕ್ಕುಪತ್ರ ನೀಡಿದ ಆರೋಪ, ನಗರ ಆರ್.ಐ ವಿರುದ್ಧ ಎರಡನೇ ಕಂಪ್ಲೇಂಟ್

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಹೊಸನನಗರ | 26 ಸೆಪ್ಟೆಂಬರ್ 2019 ನಕಲಿ ಹಕ್ಕುಪತ್ರ ನೀಡಿದ ಆರೋಪದ ಮೇಲೆ ಹೊಸನಗರ ತಾಲೂಕು ನಗರ ಹೋಬಳಿ ಕಂದಾಯ ನಿರೀಕ್ಷಕ (ಆರ್.ಐ) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಆರ್.ಐ ದತ್ತಾತ್ರೇಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಹಕ್ಕುಪತ್ರ ನೀಡಿದ್ದಲ್ಲದೆ, ಅದನ್ನು ಅವರು ಹಿಂತಿರಿಗಿ ಕೇಳಿದಾಗ ವಾಪಸ್ ನೀಡಿದಿದ್ದ ಹಿನ್ನೆಲೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನೂಲಿಗ್ಗೇರಿ ಶಶಿಕಲಾ ಎಂಬುವವರು ಜಾತಿ ನಿಂದನೆ, ವಂಚನೆ ಮತ್ತು … Read more

ಭದ್ರಾವತಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಸಿಎಂ, ಒಂಭತ್ತು ದಿನ ವಿಭಿನ್ನ ಕಾರ್ಯಕ್ರಮ, ಏನೆಲ್ಲ ವಿಶೇಷತೆಗಳಿವೆ?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 25 ಸೆಪ್ಟೆಂಬರ್ 2019 ಭದ್ರಾವತಿ ನಗರಸಭೆ ವತಿಯಿಂದ ಈ ಬಾರಿ ವಿಭಿನ್ನವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಒಂಭತ್ತು ದಿನ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕೊನೆಯ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, 21.5 ಲಕ್ಷ ರೂ. ವೆಚ್ಚದಲ್ಲಿ ವಿಭಿನ್ನವಾಗಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಇದೆ ಮೊದಲ ಬಾರಿ ಭದ್ರಾವತಿಯಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು … Read more

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಅಡಕೆ ಚೀಲಗಳು ಚೆಲ್ಲಾಪಿಲ್ಲಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 23 ಸೆಪ್ಟೆಂಬರ್ 2019 ಅಡಕೆ ಚೀಲಗಳನ್ನು ತುಂಬಿಕೊಂಡಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಯಾವುದೆ ಸಾವು, ನೋವಿನ ವರದಿಯಾಗಿಲ್ಲ. ಆನಂದಪುರದಿಂದ ಶಿಕಾರಿಪುರಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಭೈರಾಪುರ ಕ್ರಾಸ್’ನಲ್ಲಿ ಬೆಳಗ್ಗೆ ಘಟನೆ ನಡೆದಿದೆ. ಲಾರಿ ಪಲ್ಟಿಯಾಗುತ್ತಿದ್ದಂತೆ ಅಡಕೆ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ. ಅಜಾಗರುಕತೆಯ ಚಾಲನೆಯ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200 ಸುದ್ದಿಗಾಗಿ ಕರೆ ಮಾಡಿ – … Read more

ಮನೆ ಬಾಗಿಲ ಬೀಗ ಒಡೆದು, ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ಬಾಟಲಿ ಕದ್ದ ಕಳ್ಳ..!

theft case general image

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 21 ಸೆಪ್ಟೆಂಬರ್ 2019 ಸಾಗರ ತಾಲೂಕಿನ ಬಚ್ಚಗಾರ ಗ್ರಾಮದ ಮನೆಯೊಂದರಲ್ಲಿ ಕಳ್ಳನಿಗೆ ಒಡವೆ, ಹಣ ಸಿಗದ ಕಾರಣ ಮಾವಿನ ಮಿಡಿ ಉಪ್ಪಿನಕಾಯಿಯನ್ನೇ ಕದ್ದೊಯ್ದ ಕುತೂಹಲಕಾರಿ ಘಟನೆ ಗುರುವಾರ ರಾತ್ರಿ ನಡೆದಿದೆ. ಸಾಗರ-ಜೋಗಫಾಲ್ಸ್ ಮಾರ್ಗದಲ್ಲಿರುವ ಬಚ್ಚಗಾರು ಗ್ರಾಮದ ಶುಂಠಿ ಸತ್ಯನಾರಾಯಣಭಟ್ಟರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಏನೂ ಸಿಕ್ಕಿಲ್ಲ. ಆದರೆ, ಸುವಾಸನೆ ಬೀರುವ ಅಪ್ಪೆ ಮಾವಿನ ಮಿಡಿಯ ಉಪ್ಪಿನಕಾಯಿ ಕಂಡಿದೆ. ಅದರ ರುಚಿಯನ್ನು ಸವಿದ ಕಳ್ಳ ಬಾಟಲಿಯನ್ನೇ … Read more

ಬಾಗಿಲಿಗೆ ಹಾಕಿದ್ದ ಬೀಗ ಹಾಗೆ ಇದೆ, ಆದರೂ ಸರ್ಕಾರಿ ಕಚೇರಿ ಸಭಾಂಗಣದಲ್ಲಿದ್ದ ಸ್ಪೀಕರ್’ಗಳು ನಾಪತ್ತೆ, ಎಲ್ಲಿ ಗೊತ್ತಾ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸಾಗರ | 20 ಸೆಪ್ಟೆಂಬರ್ 2019 ಹಾಕಿದ್ದ ಬೀಗ ಹಾಗೆ ಇದೆ. ಆದರು ಸಭಾಂಗಣದ ಒಳಗಿದ್ದ ಸ್ಪೀಕರ್’ಗಳು ನಾಪತ್ತೆಯಾಗಿವೆ. ಇದು ಸಾಗರ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದಲ್ಲಿ ನಡೆದ ವಿಚಿತ್ರ ಕಳ್ಳತನ. ತಾಲೂಕು ಪಂಚಾಯಿತಿ ಸಭೆ ನಡೆಯುವ ಸಭಾಂಗಣದಲ್ಲಿ ಅಳವಡಿಸಿದ್ದ ಎರಡು ಸ್ಪೀಕರ್’ಗಳು ನಾಪತ್ತೆ ಆಗಿವೆ. ಸಭಾಂಗಣದ ಬಾಗಿಲಿಗೆ ಹಾಕಿದ್ದ ಬೀಗ ಹಾಗೆಯೆ ಇದೆ. ಬೀಗಿ ಒಡೆಯದೆ ಸ್ಪೀಕರ್’ಗಳು ಕಳ್ಳತನವಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ದೂರು ನೀಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಿರ್ಧರಿಸಿದ್ದಾರೆ. … Read more

ವಾಸ್ತವ ಮರೆಮಾಚಿ ಕಲ್ಲು ಗಣಿಗಾರಿಕೆಗೆ ಅನುಮತಿ, ಗ್ರಾಮಸ್ಥರ ಆಕ್ರೋಶ, ಬೀದಿಗಿಳಿದು ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | ಹೊಸನಗರ | 20 ಸೆಪ್ಟೆಂಬರ್ 2019 ಮಾನದಂಡಗಳನ್ನು ನಿರ್ಲಕ್ಷಿಸಿ, ವಾಸ್ತವಾಂಶವನ್ನು ಮರೆಮಾಚಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಇದರಿಂದ ಭಾರಿ ಪ್ರಮಾಣದ ಕಾಡು ನಾಶ, ಜನಜೀವನಕ್ಕೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ತಾಲೂಕು ಕಚೇರಿ ಮುಂಭಾಗ ಕ್ಲಲು ಗಣಿಗಾರಿಕೆ ವಿರುದ್ಧ ಘೋಷಣೆ ಕೂಗಿದರು. ಕುಂಭತ್ತಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ … Read more

ಹೊಸ ಬೈಕ್ ಖರೀದಿಗೆ ತಾಯಿ ಹಣ ಕೊಡಲಿಲ್ಲ ಅಂತಾ ನೇಣು ಬಿಗಿದುಕೊಂಡು ಆತ್ಮಹತ್ಯೆ

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸೊರಬ | 20 ಸೆಪ್ಟೆಂಬರ್ 2019 ಹೊಸ ಬೈಕ್ ಖರೀದಿಗೆ ತಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಜೇಂದ್ರ (19) ಆತ್ಮಹತ್ಯೆ ಮಾಡಿಕೊಂಡಾತ. ಹೊಸ ಬೈಕ್ ಖರೀದಿಗೆ ಗಜೇಂದ್ರ ತನ್ನ ತಾಯಿ ಬಳಿ ಹಣ ಕೇಳಿದ್ದ. ಆದರೆ ತಾಯಿ ಹಣವಿಲ್ಲ ಎಂದಿದ್ದರು. ಅಲ್ಲದೆ ಸ್ವಲ್ಪ ದಿನದ ಬಳಿಕ ಹಣ ಹೊಂದಿಸಿ ಕೊಡುವುದಾಗಿ ತಿಳಿಸಿದ್ದರು. ಇದರಿಂದ ಮನನೊಂದು ಮನೆ ಹಿತ್ತಲಿನಲ್ಲಿ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನವಟ್ಟಿ ಸಮೀಪದ ಜಾವಳ್ಳಿ … Read more

ಸಿಗಂದೂರು ಲಾಂಚ್’ಗೆ ತೆರಳುವ ಟೋಲ್’ನಲ್ಲಿ ನಕಲಿ ರಶೀದಿ ಪುಸ್ತಕ, ಪಿಡಿಒ ಸೇರಿ ಮೂವರ ವಿರುದ್ಧ ಎಫ್ಐಆರ್

Sigandur-Launch-General-Image

ಶಿವಮೊಗ್ಗ ಲೈವ್.ಕಾಂ | ಸಾಗರ | 20 ಸೆಪ್ಟೆಂಬರ್ 2019 ಟೋಲ್’ಗೇಟ್ ಶುಲ್ಕ ಸಂಗ್ರಹಿಸಲು ನಕಲಿ ರಶೀದಿ ಪುಸ್ತಕ ಬಳಸಿ ಹಣ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತುಮರಿ ಗ್ರಾಮ ಪಂಚಾಯಿತಿ ಪಿಡಿಒ ಇಮ್ತಿಯಾಜ್ ಪಾಷಾ, ಟೋಲ್’ಗೇಟ್ ಸಿಬ್ಬಂದಿಗಳಾದ ಮಧುಕುಮಾರ್ ಮತ್ತು ಪವನ್ ಮೇಲೆ ಎಫ್ಐಆರ್ ದಾಖಲಾಗಿದೆ. ಏನಿದು ಪ್ರಕರಣ? ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? ಸಿಗಂದೂರು ಲಾಂಚ್’ಗೆ ತೆರಳುವ ಕಳಸವಳ್ಳಿ ಟೋಲ್’ಗೇಟ್’ನಲ್ಲಿ ನಕಲಿ … Read more

ಅಡ್ಡಾದಿಡ್ಡಿ ಚಲಿಸಿದ ಕಾರು, ಸರಣಿ ಅಪಘಾತ, ನಾಲ್ಕು ತಿಂಗಳ ಗರ್ಭಿಣಿ ಸ್ಥಳದಲ್ಲೇ ಸಾವು, ಹೇಗಾಯ್ತು ಗೊತ್ತಾ ಘಟನೆ?

ಶಿವಮೊಗ್ಗ ಲೈವ್.ಕಾಂ | ಹೊಸನಗರ | 19 ಸೆಪ್ಟೆಂಬರ್ 2019 ಅಡ್ಡಾದಿಡ್ಡಿ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿ, ನಾಲ್ಕು ತಿಂಗಳ ಗರ್ಭಿಣಿ ಸಾವಿಗೆ ಕಾರಣವಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಯುವಕರಿಗೆ ಶೋಧ ಕಾರ್ಯ ನಡೆಯುತ್ತಿದೆ. ಹೊಸನಗರ ತಾಲೂಕು ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ನಾಲ್ವರು ಯುವಕರಿದ್ದ ಕಾರು ಅಡ್ಡಾದಿಡ್ಡಿ ಚಲಿಸಿ, ಸರಣಿ ಅಪಘಾತವಾಗಿದೆ. ಘಟನೆಯಲ್ಲಿ ಗ್ರಾಮದ ಭಾರತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಹೇಗಾಯ್ತು ಘಟನೆ? ಏನಾನು ಹಾನಿಯಾಗಿದೆ? ಮಾರುತಿಪುರ ಕಡೆಯಿಂದ ಬರುತ್ತಿದ್ದ … Read more