‘ನಿಖಿಲ್ ಎಲ್ಲಿದ್ದೀಯಪ್ಪ’ಕ್ಕೆ ಈಶ್ವರಪ್ಪ ಕೊಟ್ಟರು ಉತ್ತರ, ಮಧು ಎಲ್ಲಿದ್ದೀಯಪ್ಪ ಅಂತಾ ಶಿಕಾರಿಪುರದಲ್ಲಿ ಪ್ರಶ್ನಿಸಿದರು ನಟಿ ತಾರಾ

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ಶಿಕಾರಿಪುರದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲೂ ‘ನಿಖಿಲ್ ಎಲ್ಲದ್ದಿಯಪ್ಪ’ ಸೌಂಡ್ ಮಾಡಿದೆ. ಪ್ರಚಾರ ಸಭೆಯ ವೇದಿಕೆಯಲ್ಲೇ, ಶಾಸಕ ಕೆ.ಎಸ್.ಈಶ್ವರಪ್ಪ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯೆ, ನಟಿ ತಾರಾ ಈ ಡೈಲಾಗ್ ಪ್ರಸ್ತಾಪಿಸಿ, ಜೆಡಿಎಸ್ ಮತ್ತು ಅದರ ಅಭ್ಯರ್ಥಿಗಳನ್ನು ವ್ಯಂಗ್ಯ ಮಾಡಿದರು. ಜಾತ್ರೆಯಲ್ಲಿದ್ದೀನಪ್ಪ ಅನ್ನಬೇಕಾಗುತ್ತೆ? ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಶಿಕಾರಿಪುರದಲ್ಲಿ ಇವತ್ತು ಬಿಜೆಪಿ ವತಿಯಿಂದ ಬಹಿರಂಗ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ, ನಿಖಿಲ್ ಎಲ್ಲಿದ್ದಿಯಪ್ಪ ಅನ್ನೋ ಡೈಲಾಗ್ ಪ್ರಸ್ತಾಪಿಸಿದ … Read more

‘ನಾನು ಪ್ರತಿದಿನ ಕಣ್ಣೀರು ಹಾಕುತ್ತೇನೆ, ಆದರೆ ಸುಮ್ ಸುಮ್ನೆ ಕಣ್ಣೀರು ಹಾಕೋದಿಲ್ಲ’

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ನಾನು ಭಾವುಕ ಜೀವಿ. ಪ್ರತಿದಿನ ಕಣ್ಣೀರು ಹಾಕುತ್ತೇನೆ. ಆದರೆ ಸುಮ್ ಸುಮ್ನೆ ಕಣ್ಣೀರು ಹಾಕುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಅಂತಾ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾವು ಕಣ್ಣೀರು ಹಾಕಲು ಕಾರಣವೇನು ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಅವರ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತದೆ … Read more

ಹೊಳೆಹೊನ್ನೂರಿನಿಂದ ಭದ್ರಾವತಿಗೆ ತೆರಳುತ್ತಿದ್ದ ಬೈಕ್’ನಲ್ಲಿ ಕಂತೆ ಕಂತೆ ಹಣ ಪತ್ತೆ, ದುಡ್ಡು ಯಾರಿಗೆ ಸೇರಿದ್ದು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 17 ಏಪ್ರಿಲ್ 2019 ಬೈಕ್’ನಲ್ಲಿ ಸಾಗಿಸುತ್ತಿದ್ದ ನಾಲ್ಕು ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಗತಿ ಬೆಳಗಲು ಚೆಕ್’ಪೋಸ್ಟ್’ನಲ್ಲಿ ವಾಹನ ತಪಾಸಣೆ ನಡೆಸುವಾಗ ಹಣ ಪತ್ತೆಯಾಗಿದೆ. ಮಂಗಳವಾರ ಹೊಳೆಹೊನ್ನೂರು ಕಡೆಯಿಂದ ಭದ್ರಾವತಿ ಕಡೆಗೆ ಬರುತ್ತಿದ್ದ ಪಲ್ಸರ್ ಬೈಕನ್ನು ಚೆಕ್’ಪೋಸ್ಟ್’ನಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ನಾಲ್ಕು ಲಕ್ಷ ರೂ. ಹಣ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದೆ, ಸಾಗಿಸುತ್ತಿದ್ದರಿಂದ, ಹಣವನ್ನು ವಶಕ್ಕೆ ಪಡೆಯಲಾಯಿತು. ಚುನಾವಣಾಧಿಕಾರಿ ರಾಮಚಂದ್ರ, ನಾಗರಾಜ್ ಮತ್ತು ಪೊಲೀಸ್ ಸಿಬ್ಬಂದಿ ಸಿ.ಕೆ.ರವಿಕುಮಾರ್ … Read more

11 ಬಸ್’ನಲ್ಲಿ ಜನರನ್ನ ಕರೆದೊಯ್ದವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 11 ಏಪ್ರಿಲ್ 2019 ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ, ಹನ್ನೊಂದು ಬಸ್’ನಲ್ಲಿ ಜನ ಕರೆದುಕೊಂಡು ಹೋದ ಆರೋಪದ ಹಿನ್ನೆಲೆ, ಸಾಗರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯ 11 ಬಸ್’ಗಳಲ್ಲಿ ಜನರನ್ನು ಕರೆದೊಯ್ಯಲಾಗಿತ್ತು. ಈ ಸಂಬಂಧ ಮಹಾಬಲೇಶ್ವರ ಎಂಬುವವರ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ತ್ಯಾಗರ್ತಿ, ಬರೂರು, ಪಡವಗೋಡು, ಮಾಸೂರು ಸೇರಿದಂತೆ ಸುತ್ತಮುತ್ತ ಗ್ರಾಮ ಪಂಚಾಯಿತಿಯಿಂದ ಜನರನ್ನು ಕರೆದೊಯ್ಯಲಾಗಿತ್ತು. ಈ … Read more

‘ಮಿನಿಸ್ಟರ್’ಗಳನ್ನು ಭೇಟಿಯಾಗಿ, ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ, VISL ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿಲ್ಲ’

ಶಿವಮೊಗ್ಗ ಲೈವ್.ಕಾಂ | 10 ಏಪ್ರಿಲ್ 2019 ವಿಐಎಸ್ಎಲ್ ಕಾರ್ಖಾನೆ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಇದರ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇನೆ ಅಂತಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಭದ್ರಾವತಿಯ ಜನ್ನಾಪುರದ ಜಯಶ್ರೀ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಐಎಸ್ಎಲ್ ನಿವೃತ್ತ ಕಾರ್ಮಿಕರ ಸಮಾವೇಶದಲ್ಲಿ ರಾಘವೇಂದ್ರ ಮಾತನಾಡಿದರು. ಕಾರ್ಖಾನೆಯ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಕಳೆದ ಮೂರು ತಿಂಗಳಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಕಾರ್ಖಾನೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಿಐಎಸ್ಎಲ್ ಕಾರ್ಮಿಕರ ಮನೆಗಳ ನವೀಕರಣ, ಕಾರ್ಖಾನೆಗೆ ಅವಶ್ಯಕತೆ … Read more

ನಾವು ವೋಟ್ ಹಾಕಲ್ಲ ಅಂತಾ ಊರ ಮುಂದೆ ದೊಡ್ಡ ಬ್ಯಾನರ್ ಕಟ್ಟಿದ ಗ್ರಾಮಸ್ಥರು, ಅಧಿಕಾರಿಗಳ ತಂಡ ದೌಡು

ಶಿವಮೊಗ್ಗ ಲೈವ್.ಕಾಂ | 08 ಏಪ್ರಿಲ್ 2019 ಮತದಾನ ಬಹಿಷ್ಕರಿಸುವುದಾಗಿ ಊರಿನ ಮುಂದೆ ಗ್ರಾಮಸ್ಥರು ಬ್ಯಾನರ್ ಕಟ್ಟಿದ್ದಾರೆ. ಊರಿನ ಜನರೆಲ್ಲ ಒಟ್ಟಿಗೆ ನಿಂತು, ಪ್ರತಿಭಟನೆ ನಡೆಸಿ ತೆಗೆಸಿಕೊಂಡಿರುವ ಫೋಟೊವನ್ನು ಬ್ಯಾನರ್’ನಲ್ಲಿ ಹಾಕಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆಬೈಲು ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆದರೆ ಹೆಗ್ಗೆಬೈಲು ಗ್ರಾಮಕ್ಕೆ ಸರಿಯಾದ ರಸ್ತೆಯೇ ಇಲ್ಲ. ಹಾಗಾಗಿ ಜನರು ಓಡಾಡುವುದೇ ಕಷ್ಟವಾಗಿದೆ. ಕಳೆದ ಚುನಾವಣೆ ಸಂದರ್ಭ, ಜನಪ್ರತಿನಿಧಿಗಳಿಗೆ … Read more

ಜೆಡಿಎಸ್ ತೊರೆದಿದ್ದ ತೀರ್ಥಹಳ್ಳಿ ಅಧ್ಯಕ್ಷ ರಾತ್ರೋರಾತ್ರಿ ಬಿಜೆಪಿಗೆ, ಮೈತ್ರಿಯಲ್ಲೂ ತಳಮಳ, ಬಿಜೆಪಿಯಲ್ಲೂ ಗೊಂದಲ

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | 08 ಏಪ್ರಿಲ್ 2019 ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ತೀರ್ಥಹಳ್ಳಿ ತಾಲೂಕು ಅಧ್ಯಕ್ಷ ಮದನ್, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ವಾರವಷ್ಟೇ ಮದನ್ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ತೀರ್ಥಹಳ್ಳಿ ಬಿಜೆಪಿ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಮದನ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ತಾಲೂಕು ಅಧ್ಯಕ್ಷ ಮೋಹನ್ ಶೆಟ್ಟಿ, ಮದನ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಚುನಾವಣೆ ಹೊಸ್ತಿಲಲ್ಲಿ ಮಹತ್ವದ ಬೆಳವಣಿಗೆ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷರಾಗಿದ್ದ ಮದನ್, ದೀಢರ್ ಬೆಳವಣಿಗೆಯಲ್ಲಿ ಪಕ್ಷಕ್ಕೆ ರಾಜೀನಾಮೆ  ನೀಡಿದ್ದರು. ಜೆಡಿಎಸ್ … Read more

ಜ್ಯೋತಿಷಿ ಕಿರುಕುಳ, ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ, ಯಾರದು ಜ್ಯೋತಿಷಿ? ಏನಿದು ಸಮಸ್ಯೆ?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 8 ಏಪ್ರಿಲ್ 2019 ರಸ್ತೆ ಮಾಡಿಸಿಲ್ಲ. ನೀರು ಕೊಟ್ಟಿಲ್ಲ. ಕರೆಂಟ್ ಇರಲ್ಲ. ಹೀಗೆ ಮೂಲಸೌಕರ್ಯಗಳಿಲ್ಲ ಎಂಬ ಕಾರಣಕ್ಕೆ ಚುನಾವಣೆ ಬಹಿಷ್ಕರಿಸುವುದು ಸಾಮಾನ್ಯ. ಆದರೆ ಇಲ್ಲಿ, ಜ್ಯೋತಿಷಿಯೊಬ್ಬರ ಕಿರುಕುಳಕ್ಕೆ ಬೇಸತ್ತು ಇಡೀ ಗ್ರಾಮವೇ ಮತದಾನ ಬಹಿಷ್ಕರಿಸಲು ನಿರ್ಧರಿಸಿದೆ. ಸಾಗರ ತಾಲೂಕಿನ ಹಿರೇಮನೆ ಗ್ರಾಮದಲ್ಲಿ 22 ಕುಟುಂಬದ 60 ಮಂದಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಹತ್ತು ವರ್ಷದಿಂದ ಜ್ಯೋತಿಷಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ. ಕೋರ್ಟ್’ಗೆ ಅಲೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿ, ಚುನಾವಣೆಯನ್ನೇ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. … Read more

ಯುಗಾದಿ ಆಚರಿಸಲು ಶಿಕಾರಿಪುರಕ್ಕೆ ಯಡಿಯೂರಪ್ಪ, ನಾಲ್ಕು ವರ್ಷ ಯಾರೂ ಅದನ್ನ ನನ್ನಿಂದ ಕಸಿದುಕೊಳ್ಳೋಕೆ ಆಗಲ್ಲ ಅಂತಾ ತಿರುಗೇಟು

ಶಿವಮೊಗ್ಗ ಲೈವ್.ಕಾಂ | 06 ಏಪ್ರಿಲ್ 2019 ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಮೂಲೆಗುಂಪಾಗುತ್ತಾರೆ ಅಂತಾ ಜೆಡಿಎಸ್, ಕಾಂಗ್ರೆಸ್ ನಾಯಕರ ಹೇಳಿಕೆಗೆ, ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶಿಕಾರಿಪುರದಲ್ಲಿ ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಯಡಿಯೂರಪ್ಪ, ಪಕ್ಷ ಬದಲಾವಣೆ ಬಯಸಿದರೆ ಸ್ವಾಗತಿಸುತ್ತೇನೆ ಎಂದರು. ಬದಲಾವಣೆ ಬಯಸಿದರೆ ಸ್ವಾಗತ ಚುನಾವಣೆ ಬಳಿಕ, ಒಂದು ವೇಳೆ ಪಕ್ಷದ ಬದಲಾವಣೆ ಬಯಸಿದರೆ ತಾವು ಅದನ್ನು ಸ್ವಾಗತಿಸುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಾನೀಗ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನೂ ನಾಲ್ಕು ವರ್ಷ … Read more

ಸಚಿವ ರೇವಣ್ಣ ಅವರ ಹಣ ನಿಮ್ಮಲ್ಲಿದೆ, ಮನೆ ಮೇಲೆ ರೇಡ್ ಮಾಡ್ತೀವಿ ಅಂತಾ ಅಧಿಕಾರಿಗೆ ಬೆದರಿಕೆ, ಸೊರಬದಲ್ಲಿ ಕೇಸ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | 04 ಏಪ್ರಿಲ್ 2019 ಎಸಿಬಿ ಡಿವೈಎಸ್ಪಿ ಎಂದು ಹೇಳಿ ಸೊರಬ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗೆ ಬ್ಲ್ಯಾಕ್’ಮೇಲ್ ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ. ಮಂಜುನಾಥ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ ವಿರುದ್ಧ ಕೆ.ಸಿ.ದೇವರಾಜೇಗೌಡ, ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾದ ನಿಮ್ಮಲ್ಲಿ ಅವರ ಹಣ ಇಡಲಾಗಿದೆ. ಈ ಕುರಿತು ಚರ್ಚಿಸಬೇಕಿದೆ. ಕೂಡಲೇ ವೈಯಕ್ತಿಕವಾಗಿ ನನಗೆ ಭೇಟಿ ನೀಡಿ. ಇಲ್ಲವಾದರೆ, ಹಾಸನದಲ್ಲಿರುವ ನಿಮ್ಮ ಮನೆಯ ಮೇಲೆ … Read more