ಸಾಗರದಲ್ಲಿ ಮುಂದುವರೆದ ಮಂಗನ ಕಾಯಿಲೆ ಆತಂಕ, ಮತ್ತೊಬ್ಬ ಶಂಕಿತ ಬಲಿ, ಮಂಗಗಳ ಮೃತದೇಹ ಪತ್ತೆ

030119 Mangana Kayale Monkey Death 1

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ಸಾಗರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಗಳ ಅಸಹಜ ಸಾವು ಮುಂದುವರೆದಿದ್ದು, ಮಂಗನ ಕಾಯಿಲೆ ಆತಂಕ ಇಮ್ಮಡಿಯಾಗಿದೆ. ಇನ್ನು, ಮಂಗನ ಕಾಯಿಲೆ ಶಂಕಿತರೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಂಚಿಕೈ ಮಂಜುನಾಥ (22) ಮೃತಪಟ್ಟಿದ್ದಾರೆ. ಮಂಜುನಾಥ ಅವರಿಗೆ ತೀವ್ರ ಜ್ವರ ಮತ್ತು ಜಾಂಡೀಸ್ ಇತ್ತು. ಮಂಗನ ಕಾಯಿಲೆ ಶಂಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಲ್ಯಾಬ್’ಗೆ ಕಳುಹಿಸಲಾಗಿದೆ. ಮುಂದುವರೆದ ಮಂಗಗಳ ಸಾವು ಭಾರಂಗಿ ಹೋಬಳಿಯ ಅರಳಗೋಡು … Read more

ಮಂಗನ ಕಾಯಿಲೆ ಭಯ, ಮುಪ್ಪಾನೆಯಲ್ಲಿ ಚಾರಣ ನಿರ್ಬಂಧ, ಸಿಗಂದೂರು ಭಕ್ತರಿಗೂ ಸದ್ಯದಲ್ಲೇ ಮಾರ್ಗಸೂಚಿ

010119 Muppane Treckking Ban Monkey Fever 1

ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ದಿನೇ ದಿನೇ ಮಲೆನಾಡಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಶರಾವತಿ ಕಣಿವೆ ಅಭಯಾಯರಣ್ಯದ ಮುಪ್ಪಾನೆ ಪ್ರಕೃತಿ ಶಿಬಿರ ಅರಣ್ಯ ವ್ಯಾಪ್ತಿಯಲ್ಲಿ, ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾ ವನ್ಯಜೀವಿ ವಿಭಾಗದ ವತಿಯಿಂದ ಈ ಆದೇಶ ಹೊರಡಿಸಲಾಗಿದೆ. ಮುಪ್ಪಾನೆ ಭಾಗದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆ, ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಜ.1ರಿಂದ ಮುಂದಿನ ಆದೇಶದವರೆಗೂ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಸದ್ಯದಲ್ಲೇ ಸಿಗಂದೂರು ಭಕ್ತರಿಗೂ ಮಾರ್ಗಸೂಚಿ … Read more

ಸಾಗರ ತಾಲೂಕಿನಲ್ಲಿ ಗಾಂಜಾ, ಡ್ರಗ್ಸ್ ಹಾವಳಿ, ಕಟ್ಟುನಿಟ್ಟಿನ ಕ್ರಮಕ್ಕೆ ಮಹತ್ವದ ಮೀಟಿಂಗ್ ಫಿಕ್ಸ್

Haratalu-Halappa

ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ಯುವಕರಲ್ಲಿ ಗಾಂಜಾ ಮತ್ತು ಡ್ರಗ್ಸ್ ಸೇವನೆ ವ್ಯಾಪಕವಾಗುತ್ತಿದೆ. ವ್ಯಸನದ ಕುರಿತು ಮೃದು ಧೋರಣೆಯಿಂದ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಕಠಿಣ ಕ್ರಮ ಕೈಗೊಳ್ಳಬೇಕಿದೆ. ಈ ಸಂಬಂಧ ಜ.10ರಂದು ಜಿಲ್ಲಾ ರಕ್ಷಣಾಧಿಕಾರಿ, ಎಸಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಗಾಂಜಾ ಸೇವನೆ ಹೆಚ್ಚುತ್ತಿರುವ ಹಿನ್ನಲೆ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಹರತಾಳು ಹಾಲಪ್ಪ, ಶಿಘ್ರದಲ್ಲೇ ನಗರ ಮತ್ತು ಗ್ರಾಮೀಣ ಭಾಗದ ಕಾಲೇಜುಗಳ … Read more

BREAKING NEWS | ಜೋಗದಿಂದ ಮರಳುವಾಗ ಮರಕ್ಕೆ ಕಾರು ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು

181218 Car Accident At Sagara 1

ಶಿವಮೊಗ್ಗ ಲೈವ್.ಕಾಂ | 18 ಡಿಸೆಂಬರ್ 2018 ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಾಗರದ ಆಕಾಶ್ (21), ಅಣಲೆಕೊಪ್ಪದ ಲೋಹಿತ್ (21) ಮೃತಪಟ್ಟವರು. ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ಮರತ್ತೂರು ಬಳಿ ಘಟನೆ ನಡೆದಿದೆ. ಜೋಗದಿಂದ ಆಲ್ಟೋ ಕಾರಿನಲ್ಲಿ ಸಾಗರಕ್ಕೆ ಮರಳುವಾಗ, ಚಾಲಕನ ನಿಯಂತ್ರಣ ತಪ್ಪಿ, ಕಾರು ಮರಕ್ಕೆ ಗುದ್ದಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಇನ್ನು, ಗಂಭೀರವಾಗಿ ಗಾಯಗೊಂಡಿದ್ದ ಆಕಾಶ್ … Read more

‘ಹದಿನೈದು ದಿನದಲ್ಲಿ ರೆಡಿಯಾಗಲಿವೆ ಬಗರ್ ಹುಕುಂ ಸಮಿತಿಗಳು’

Kumar Bangarappa Photo 1

ಶಿವಮೊಗ್ಗ ಲೈವ್.ಕಾಂ | 16 ಡಿಸೆಂಬರ್2018 ತಾಳಗುಪ್ಪ | ಹದಿನೈದು ದಿನದೊಳಗೆ ಬಗರ್’ಹುಕುಂ ಸಮಿತಿಗಳನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ ಅಂತಾ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ. ತಾಳಗುಪ್ಪದಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಶಾಸಕರು ಈ ವಿಚಾರ ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಸಮಿತಿಗಳ ರಚನೆ ಕುರಿತು ಸರ್ಕಾರ ಭರವಸೆ ನೀಡಿದೆ ಎಂದರು. ಮಲೆನಾಡಿನ ಸೊಪ್ಪಿನಬೆಟ್ಟ, ಕಾನು ಕುರಿತ ಸಮಸ್ಯೆ, ನೀರಾವರಿ ಮತ್ತು ರಸ್ತೆಗಳ ಕುರಿತು ಸದನದ ಗಮನ ಸೆಳೆಯಲಾಗಿದೆ. ಈ ಕುರಿತು … Read more

ಸಾಗರದಲ್ಲಿ ಎರಡು ದಿನ ಬೆಳಗಿಂದ ಸಂಜೆವರೆಗೂ ಕರೆಂಟ್ ಇರಲ್ಲ, ಎಲ್ಲೆಲ್ಲಿ ಪವರ್ ಕಟ್ ಆಗುತ್ತೆ?

power cut graphics

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ಸಾಗರ ನಗರ ವ್ಯಾಪ್ತಿಯಲ್ಲಿ ಡಿ.5 ಮತ್ತು 7ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಕರೆಂಟ್ ಇರೋದಿಲ್ಲ. ಘಟಕ – 1 ಮತ್ತು ಘಟಕ – 2 ರಲ್ಲಿ ಎಚ್.ಟಿ.ಎ.ಬಿ ಕೇಬಲ್ ಅಳವಡಿಸುವ ಕಾಮಗಾರಿ ಇರುವುದರಿಂದ ಈ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಎಲ್.ಬಿ.ಕಾಲೇಜು, ಪ್ರಗತಿನಗರ, ಲೋಹಿಯಾ ನಗರ, ಮಂಕಳಲೆ, ಅಂಬಾಪುರ, ಕುಗ್ವೆ, ವಿನೋಬನಗರ, ನೆಹರು ನಗರ, ಹಾನಂಬಿ ರಸ್ತೆ, ಎಸ್.ಎನ್.ನಗರ, ಚಿಪ್ಪಳಿ, ವರದಾ ಕಾಲನಿ, ಆದಿಶಕ್ತಿನಗರ, ವಿಜಯನಗರ, … Read more