ಜಿಲ್ಲೆಯಲ್ಲಿ ಮುಂದುವರೆದ ಮಂಗನ ಕಾಯಿಲೆ ಮರಣ ಮೃದಂಗ, ಮತ್ತೊಬ್ಬ ವ್ಯಕ್ತಿ ಸಾವು
ಶಿವಮೊಗ್ಗ ಲೈವ್.ಕಾಂ | 1 ಮೇ 2019 ಮಂಗನ ಕಾಯಿಲೆಗೆ ಸಾವನ್ನಪ್ಪುವವರ ಸಂಖ್ಯೆ ಮುಂದುವರೆದಿದೆ. ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಂಕಿತ ಮಂಗನ ಕಾಯಿಲೆಗೆ ಮತ್ತೊಬ್ಬರು ಕೊನೆಯುಸಿರೆಳೆದಿದ್ದಾರೆ. ನಂದೋಡಿ ಗ್ರಾಮದ ಕೆರಿಯಪ್ಪ (45) ಮೃತ ವ್ಯಕ್ತಿ. ಮಂಗನ ಕಾಯಿಲೆ ಶಂಕೆಯಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಕೆರಿಯಪ್ಪ ಮೃತಪಟ್ಟಿದ್ದಾರೆ. ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಶಂಕೆಯಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆ ಆಗಿದೆ.