ನಾಮಪತ್ರ ಸಲ್ಲಿಕೆ ಮೊದಲ ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ನಾಮಪತ್ರ

hi-Na-Srinivas-Nomination-in-Sagara

SHIVAMOGGA LIVE NEWS | 14 APRIL 2023 SHIMOGA : ವಿಧಾನಸಭೆ ಚುನಾವಣೆಗೆ ನಾಮಪತ್ರ (Nomination) ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನ ಜಿಲ್ಲೆಯಲ್ಲಿ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಸಾಗರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 20ರವರೆಗೆ ನಾಮಪತ್ರ (Nomination) ಸಲ್ಲಿಸಲು ಕೊನೆಯ ದಿನಾಂಕ. ಏ.21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏ.24 ಕೊನೆ ದಿನವಾಗಿದೆ. ಇದನ್ನೂ ಓದಿ – ಮಗಳು ಬಿಜೆಪಿ ಸೇರ್ಪಡೆ ಕುರಿತು … Read more

ಲಾರಿಯಲ್ಲಿ ಸಾಗಿಸಲಾಗುತ್ತಿತ್ತು 46 ಬೈಕ್, ಯಾವುದಕ್ಕೂ ಇರಲಿಲ್ಲ ಡಾಕ್ಯೂಮೆಂಟ್

46-bikes-seized-for-not-having-valid-documents

SHIVAMOGGA LIVE NEWS | 14 APRIL 2023 SAGARA : ಸೂಕ್ತ ದಾಖಲೆ ಇಲ್ಲದೆ ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ 46 ಹೊಸ ಬೈಕುಗಳನ್ನು (Bikes) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‍ ಪೋಸ್ಟ್‍ನಲ್ಲಿ ತಪಾಸಣೆ ವೇಳೆ ಬೈಕುಗಳ ಸಾಗಣೆ ಬೆಳಕಿಗೆ ಬಂದಿದೆ. 33,78,336 ರೂ. ಮೌಲ್ಯದ ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಗಲ್ ಪಿಎಸ್‍ಐ ತಿರುಮಲೇಶ್ ನೇತೃತ್ವದಲ್ಲಿ ಪರಿಶೀಲನೆ ವೇಳೆ ಬೈಕುಗಳು ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ … Read more

ಮಗಳು ಬಿಜೆಪಿ ಸೇರ್ಪಡೆ ಕುರಿತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮೊದಲ ಪ್ರತಿಕ್ರಿಯೆ, ಏನಂದ್ರು ಹಿರಿಯ ನಾಯಕ?

Kagodu-Thimmappa-Dr-Rajanandini-in-Shimoga

SHIVAMOGGA LIVE NEWS | 12 APRIL 2023 SAGARA : ಮಗಳು ಡಾ.ರಾಜನಂದಿನಿ ಕಾಂಗ್ರೆಸ್‌ ತೊರೆದು ದಿಢೀರ್‌ ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮೊದಲ ಪ್ರತಿಕ್ರಿಯೆ (First reaction) ನೀಡಿದ್ದಾರೆ. ರಾಜಕೀಯದಲ್ಲಿ ಬದ್ಧತೆ ಇರಬೇಕು ಡಾ.ರಾಜನಂದಿನಿ ಅವರು ಈ ರೀತಿ ಮಾಡುತ್ತಾರೆ ಎಂದು ನಾನು ಕನಸು ಮನಸಿನಲ್ಲಿಯು ಅಂದುಕೊಂಡಿರಲಿಲ್ಲ. ರಾಜಕೀಯದಲ್ಲಿ ಸ್ಥಿರತೆ, ಬದ್ಧತೆ ಇಟ್ಟುಕೊಳ್ಳಬೇಕು. ಬದ್ಧತೆಯಿಂದಾಗಿಯೇ ನಾವು ಇಷ್ಟೊಂದು ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಕಾಗೋಡು ತಿಮ್ಮ ಪ್ಪ ತಿಳಿಸಿದರು. ಇದನ್ನೂ … Read more

ಕಾಂಗ್ರೆಸ್‌ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ದಿಢೀರ್‌ ಬಿಜೆಪಿ ಸೇರ್ಪಡೆ, ಕಾರಣವೇನು? ಮುಂದೇನು?

Dr-rajanandini-Joins-BJp-in-Bangalore

SHIVAMOGGA LIVE NEWS | 12 APRIL 2023 SAGARA / BENGALURU : ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಡಾ.ರಾಜನಂದಿನಿ ಅವರು ಬಿಜೆಪಿ ಸದಸ್ಯತ್ವ (Join BJP) ಪಡೆದರು. ಡಾ.ರಾಜನಂದಿನಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದರು. ಅವರೊಂದಿಗೆ ಚರ್ಚೆ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. … Read more

ಬಾಳೆಬರೆ ಘಾಟ್, ಇನ್ನೂ 10 ದಿನ ವಾಹನ ಸಂಚಾರ ನಿಷೇಧ

030223 Balebare Ghat General Image

SHIVAMOGGA LIVE NEWS | 1 APRIL 2023 SHIMOGA : ಬಾಳೆಬರೆ ಘಾಟ್ ಎರಡು ಭಾಗದಲ್ಲಿ ಕಾಂಕ್ರಿಟ್ ಪೇವ್ಮೆಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ಏ.15ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳಿಗೆ (Vehicle) ಪರ್ಯಾಯ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ. ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿಯ ಬಾಳೆಬರೆ ಘಾಟಿಯಲ್ಲಿ ಕಾಂಕ್ರಿಟ್ ಪೇವ್ಮೆಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆ ಏಪ್ರಿಲ್ 5 ರವರೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ … Read more

ಶಿವಮೊಗ್ಗದಲ್ಲಿ ಕೋಟಿ ಕೋಟಿ ಮೌಲ್ಯದ ಸೀರೆಗಳು ಸೀಜ್, ಕ್ವಿಂಟಾಲ್ ಗಟ್ಟಲೆ ಅಕ್ಕಿ, ನಗದು ವಶಕ್ಕೆ, ಎಲ್ಲೆಲ್ಲಿ ಏನೇನು ಸಿಕ್ತು?

Rice-Bags-seized-Checking-at-Checkpost-in-Shimoga

SHIVAMOGGA LIVE NEWS | 1 APRIL 2023 SHIMOGA : ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ವಿವಿಧೆಡೆ ನಗದು, ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ (Seized). ಎಲ್ಲೆಲ್ಲಿ ಏನೇನು ವಶಕ್ಕೆ ಪಡೆಯಲಾಗಿದೆ? ಇಲ್ಲಿದೆ ಡಿಟೇಲ್ಸ್ ಸೀರೆ ಸೀಜ್ : ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ (Seized). ದಾಖಲೆ ಇಲ್ಲದೆ ಸಂಗ್ರಹಿಸಿಟ್ಟಿದ್ದ 4.50 ಕೋಟಿ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ ಚೆಕ್ ಪೋಸ್ಟ್ ನಲ್ಲಿ … Read more

ಕಾಡಿನ ಮಧ್ಯೆ ಮರಕ್ಕೆ ನೇಣು ಬಿಗದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ, ಪಕ್ಕದಲ್ಲಿ ಸಿಕ್ತು ಬೈಕ್

Youth-Found-hanging-in-Forest-in-Sagra-Ulluru.

SHIVAMOGGA LIVE NEWS | 31 MARCH 2023 SAGARA : ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ (Youth) ಮೃತದೇಹ ಪತ್ತೆಯಾಗಿದೆ. ಪಕ್ಕದಲ್ಲಿಯೇ ಆತನ ಬೈಕ್ ಕೂಡ ಸಿಕ್ಕಿದೆ. ಸಾಗರ ತಾಲೂಕು ಉಳ್ಳೂರಿನ ಜೋಗಿನಗದ್ದೆ ಬಳಿ ಕಾಡಿನಲ್ಲಿ ಯುವಕನೊಬ್ಬನ (Youth) ಮೃತದೇಹ ಪತ್ತೆಯಾಗಿದೆ. ಗುರುವಾರ ಕಾಡಿನಲ್ಲಿ ಬೈಕ್ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಸಾಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪಕ್ಕದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ … Read more

ವಿವಿಧ ಚೆಕ್ ಪೊಸ್ಟ್ ಗಳಿಗೆ ರಾತ್ರಿ ಶಿವಮೊಗ್ಗ ಜಿಲ್ಲಾಧಿಕಾರಿ ದಿಢೀರ್ ಭೇಟಿ

DC-Dr-Selvamani-IAS-visit-Checkpost-in-Suttukote

SHIVAMOGGA LIVE NEWS | 31 MARCH 2023 SHIMOGA : ವಿಧಾನ ಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಗಳನ್ನು (Check Post) ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ವಿವಿಧ ಚೆಕ್ ಪೋಸ್ಟ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ತಾಲೂಕು ಸುತ್ತುಕೋಟೆಯಲ್ಲಿರುವ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಭೇಟಿ ನೀಡಿದ್ದರು. ಚೆಕ್ ಪೋಸ್ಟ್ (Check Post) ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿರುವ ಪರಿಯನ್ನು ಪರಿಶೀಲಿಸಿದರು. ಅಲ್ಲದೆ ಚೆಕ್ … Read more

BREAKING NEWS | ಕಾಂಗ್ರೆಸ್ ಮೊದಲ ಪಟ್ಟಿ, ಶಿವಮೊಗ್ಗ ಜಿಲ್ಲೆಯ 3 ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟ, 4 ಕ್ಷೇತ್ರದಲ್ಲಿ ಇನ್ನೂ ಸಸ್ಪೆನ್ಸ್

Congress-Party-Flag

SHIVAMOGGA LIVE NEWS | 25 MARCH 2023 BENGALURU : ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ (congress list) ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 124  ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಾಗಿದೆ. ಯಾವ್ಯಾವ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟ? ನಿರೀಕ್ಷೆಯಂತೆ ಸೊರಬ ವಿಧಾನಸಭೆ ಕ್ಷೇತ್ರದಿಂದ ಮಧು ಬಂಗಾರಪ್ಪ, ಭದ್ರಾವತಿಯಿಂದ ಬಿ.ಕೆ.ಸಂಗಮೇಶ್ವರ, ಸಾಗರದಿಂದ ಬೇಳೂರು ಗೋಪಾಲಕೃಷ್ಣ ಅವರ ಹೆಸರನ್ನು ಪ್ರಕಟಿಸಲಾಗಿದೆ. ಮೂರು ಕ್ಷೇತ್ರದ … Read more

ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬೆರಳಚ್ಚುಗಾರ

Crime-News-General-Image

SHIVAMOGGA LIVE NEWS | 20 MARCH 2023 SAGARA : ಅನಾರೋಗ್ಯದಿಂದ (ill health) ಬೆಸತ್ತು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆ ಪಕ್ಕದಲ್ಲಿ ಡೆತ್ ನೋಟ್ ಸಿಕ್ಕಿದೆ ಎಂದು ತಿಳಿದು ಬಂದಿದೆ. ನಿತ್ಯಾನಂದ (58) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಭಾನುವಾರ ರಾತ್ರಿ ಸಾಗರದ ಕೆಳದಿ ಕೆರೆಗೆ ಹಾರಿದ್ದಾರೆ. ಸೋಮವಾರ ಅವರ ಮೃತದೇಹ ಪತ್ತೆಯಾಗಿದೆ. ನಿತ್ಯಾನಂದ ಅವರು ಬೆರಳಚ್ಚುಗಾರರಾಗಿದ್ದರು. ಸಾಗರದ ನ್ಯಾಯಾಲಯದ ಮುಂದೆ ಸುಮಾರು 40 ವರ್ಷದಿಂದ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿದ್ದರು. ಸಾಗರ ಗ್ರಾಮಾಂತರ … Read more