ಯುಗಾದಿ ಆಚರಿಸಲು ಶಿಕಾರಿಪುರಕ್ಕೆ ಯಡಿಯೂರಪ್ಪ, ನಾಲ್ಕು ವರ್ಷ ಯಾರೂ ಅದನ್ನ ನನ್ನಿಂದ ಕಸಿದುಕೊಳ್ಳೋಕೆ ಆಗಲ್ಲ ಅಂತಾ ತಿರುಗೇಟು

ಶಿವಮೊಗ್ಗ ಲೈವ್.ಕಾಂ | 06 ಏಪ್ರಿಲ್ 2019 ಲೋಕಸಭೆ ಚುನಾವಣೆ ಬಳಿಕ ಯಡಿಯೂರಪ್ಪ ಮೂಲೆಗುಂಪಾಗುತ್ತಾರೆ ಅಂತಾ ಜೆಡಿಎಸ್, ಕಾಂಗ್ರೆಸ್ ನಾಯಕರ ಹೇಳಿಕೆಗೆ, ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶಿಕಾರಿಪುರದಲ್ಲಿ ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಯಡಿಯೂರಪ್ಪ, ಪಕ್ಷ ಬದಲಾವಣೆ ಬಯಸಿದರೆ ಸ್ವಾಗತಿಸುತ್ತೇನೆ ಎಂದರು. ಬದಲಾವಣೆ ಬಯಸಿದರೆ ಸ್ವಾಗತ ಚುನಾವಣೆ ಬಳಿಕ, ಒಂದು ವೇಳೆ ಪಕ್ಷದ ಬದಲಾವಣೆ ಬಯಸಿದರೆ ತಾವು ಅದನ್ನು ಸ್ವಾಗತಿಸುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಾನೀಗ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಇನ್ನೂ ನಾಲ್ಕು ವರ್ಷ … Read more

ಚೆಕ್’ಪೋಸ್ಟ್’ನಲ್ಲಿ ವಾಹನ ತಪಾಸಣೆ ಮಾಡದೆ ನಿದ್ರೆ ಮಾಡಿದ ಮೂವರು ಸಸ್ಪೆಂಡ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | 02 ಏಪ್ರಿಲ್ 2019 ಚೆಕ್’ಪೋಸ್ಟ್’ನಲ್ಲಿ ಕರ್ತವ್ಯ ನಿರ್ವಹಿಸುವ ಬದಲು ನಿದ್ರೆ ಮಾಡಿದ ಮೂವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸಸ್ಪೆಂಡ್ ಮಾಡಿದ್ದಾರೆ. ವಾಹನಗಳ ತಪಾಸಣೆ ನಡೆಸದೆ ನಿದ್ರೆ ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು, ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಶಿಕಾರಿಪುರ ತಾಲೂಕಿನ ಖವಾಸಪುರ ಚೆಕ್’ಪೋಸ್ಟ್’ಗೆ ನಿಯೋಜನೆಗೊಂಡಿದ್ದ, ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಶೋಕ್ ರಾಜ್, ಮುದ್ದನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜಪ್ಪ, ಬೇಗೂರು ಸಿ.ಆರ್.ಪಿ ಚನ್ನೇಶ್ ಸಸ್ಪೆಂಡ್ ಆದವರು. ಈ … Read more

ಮಧು ಬಂಗಾರಪ್ಪ ಕಾಂಗ್ರೆಸ್ ಚಿಹ್ನೆ ಅಡಿ ಸ್ಪರ್ಧಿಸಬೇಕು ಅಂತಾ ಒತ್ತಾಯ, ವೇದಿಕೆಯಲ್ಲಿದ್ದ ಮಧು ಏನಂದ್ರು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | 21 ಮಾರ್ಚ್ 2019 ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಚಿಹ್ನೆ ಅಡಿ ಲೋಕಸಭೆ ಚುನಾವಣೆ ಎದುರಿಸಬೇಕು ಅಂತಾ, ಒತ್ತಾಯ ಶುರುವಾಗಿದೆ. ಶಿಕಾರಿಪುರದಲ್ಲಿ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂದಿದೆ. ಶಿಕಾರಿಪುರ ತಾಲೂಕಿನಲ್ಲಿ ಜೆಡಿಎಸ್’ಗಿಂತಲೂ ಕಾಂಗ್ರೆಸ್ ಪಕ್ಷದ ಹೆಚ್ಚು ಸಂಘಟಿತವಾಗಿದೆ. ಗ್ರಾಮೀಣ ಭಾಗದಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಸಂಘಟನೆಯಿದೆ. ಹಾಗಾಗಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷದ ಚಿಹ್ನೆ ಅಡಿ ಸ್ಪರ್ಧಿಸಿದರೆ, ಹೆಚ್ಚು ಮತ ಪಡೆಯಬಹುದು ಅಂತಾ ಯುವ … Read more

ಚುನಾವಣಾ ಚೆಕ್’ಪೋಸ್ಟ್’ನಲ್ಲಿ ಕಾರು ತಪಾಸಣೆ ವೇಳೆ ಬ್ಯಾಗ್’ನಲ್ಲಿ ಕಂತೆ ಕಂತೆ ಹಣ ಪತ್ತೆ

ಶಿವಮೊಗ್ಗ ಲೈವ್.ಕಾಂ | 19 ಮಾರ್ಚ್ 2019 ಚುನಾವಣೆ ನೀತಿ ಸಂಹಿತೆ ಹಿನ್ನೆಲೆ, ವಾಹನಗಳ ತಪಾಸಣೆ ವೇಳೆ, ಚೆಕ್’ಪೊಸ್ಟ್ ಒಂದರಲ್ಲಿ ಹತ್ತು ಲಕ್ಷ ರುಪಾಯಿ ಹಣ ಪತ್ತೆಯಾಗಿದೆ. ಕಾರು ತಪಾಸಣೆ ವೇಳೆ ಬ್ಯಾಗ್’ನಲ್ಲಿ ಹಣವಿರುವುದು ಪತ್ತೆಯಾಗಿದೆ. ಚೆಕ್ ಪೋಸ್ಟ್ ಸಿಬ್ಬಂದಿ, ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ವರ್ಗಾಯಿಸಿದ್ದಾರೆ. ಶಿಕಾರಿಪುರದ ಅತ್ತಿಬೈಲು ಚೆಕ್’ಪೋಸ್ಟ್’ನಲ್ಲಿ ವಾಹನಗಳ ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಹಿರೇಕೆರೂರು ತಾಲೂಕಿನ ಮಳವಳ್ಳಿ ಗ್ರಾಮದ ಕೊಟ್ರೇಶಪ್ಪ ಎಂಬುವವರ ಮಾರತಿ ಕಾರಿನಲ್ಲಿ ಹಣ ಸಿಕ್ಕಿದೆ. ಶಿವಮೊಗ್ಗದ ಆಕ್ಸಿಸ್ … Read more

ಶಿರಾಳಕೊಪ್ಪದಲ್ಲಿ ಮೂರು ದಿನ ಕನ್ನಡದಲ್ಲಿ ಕುರಾನ್ ಪ್ರವಚನ, ಭಾಗವಹಿಸಲಿದ್ದಾರೆ ಪ್ರಮುಖ ಸ್ವಾಮೀಜಿಗಳು

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019 ಜಮಾಅತೆ ಇಸ್ಲಾಮೀ ಹಿಂದ್ ಶಿರಾಳಕೊಪ್ಪ ಶಾಖೆ ವತಿಯಿಂದ ಶಿರಾಳಕೊಪ್ಪದ ಬಿ.ಎಂ.ಮಹದೇವಯ್ಯ ಬಯಲು ರಂಗಮಂದಿರದಲ್ಲಿ ಫೆಬ್ರವರಿ 27 ರಿಂದ ಮೂರು ದಿನ  ಪ್ರತಿದಿನ ಸಂಜೆ 7.20 ರಿಂದ 9.30ರವರೆಗೆ ನೆಮ್ಮದಿಯ ಬದುಕಿಗಾಗಿ ಕನ್ನಡದಲ್ಲಿ ಕುರಾನ್ ಪ್ರವಚನ ನಡೆಸಲಾಗುತ್ತದೆ. ಇನ್ನು, ಪೊಲೀಸ್ ಠಾಣೆಯ ಮುಂಭಾಗದ ಖಾಲಿ ಜಾಗದಲ್ಲಿ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಮಾನವೀಯ ಮೌಲ್ಯಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಅಬ್ದುಲ್ ವಾಹಿಬ್ … Read more

‘ಭದ್ರಾವತಿ ಬಿಟ್ಟು ಉಳಿದೆಲ್ಲ ಕಡೆ ಬಿಜೆಪಿ ಶಾಸಕರೇ ಇದ್ದಾರೆ, ಹಾಗಾರೆ ಅವರೆಲ್ಲ ಗೂಂಡಾಗಳಾ?’

Thi Na Srinivas

ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019 ಭದ್ರಾವತಿ ಬಿಟ್ಟು ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರಿದ್ದಾರೆ. ಹಾಗಾದರೆ, ಅವರೆಲ್ಲ ಗೂಂಡಾಗಳೇ ಅಂತಾ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಪ್ರಶ್ನಿಸಿದ್ದಾರೆ. ಶಿವಮೊಗ್ಗ ಗೂಂಡಾ ರಾಜ್ಯ ಅಂತಾ ಶಾಸಕ ಕೆ.ಎಸ್.ಈಶ್ವರಪ್ಪ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಶಿಕಾರಳಕೊಪ್ಪದಲ್ಲಿ ತೀ.ನಾ.ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಅಭಿನವ್ ಖರೆ ಅವರು ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದಾಗ ಈಶ್ವರಪ್ಪ ಅವರು ಯಾವುದೇ ಚಕಾರವೆತ್ತಲಿಲ್ಲ. ಆದರೆ ಅವರು ವರ್ಗಾವಣೆಯಾಗುತ್ತಿದ್ದಂತೆ ಶಿವಮೊಗ್ಗ ಗೂಂಡಾಗಳ … Read more

ಶಿಕಾರಿಪುರ ಪುರಸಭೆಯಿಂದ ದಿಟ್ಟ ಹೆಜ್ಜೆ, ಇನ್ಮುಂದೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಕವರ್ ಬಳಸುವಂತಿಲ್ಲ

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019 ಶಿಕಾರಿಪುರ ಪಟ್ಟಣದಲ್ಲಿ ಇನ್ಮುಂದೆ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್, ಕೈಚೀಲಗಳನ್ನು ಮಾರಾಟ ಮಾಡದಂತೆ ಪುರಸಭೆ ಪ್ರಕಟಣೆ ಹೊರಡಿಸಿದೆ. ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಸಲುವಾಗಿ, ಪುರಸಭೆ ಈ ಸೂಚನೆ ನೀಡಿದೆ. ಇದರಂತೆ ಪಟ್ಟಣಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಬ್ಯಾಗ್ ಬಳಸುವಂತೆ, ಸಾರ್ವಜನಿಕರು ಮತ್ತು ಅಂಗಡಿ ಮಾಲೀಕರಿಗೆ ಪುರಸಭೆ ಮನವಿ ಮಾಡಿದೆ. ಇನ್ನು, ಬೇಸಿಗೆ ಕಾಲವಾಗಿರುವುದರಿಂದ ನೀರನ್ನು ಮಿತವಾಗಿ ಉಪಯೋಗಿಸಬೇಕು. ಒಂದು ವೇಳೆ, … Read more