ನಗದು ತುಂಬಿದ್ದ ಪರ್ಸ್‌ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

honest-residents-of-Ayanur-return-a-lost-purse

ಆಯನೂರು: ‌ದೇವಸ್ಥಾನದ ಬಳಿ ಸಿಕ್ಕ ಪರ್ಸ್ (purse) ಅನ್ನು ಆಯನೂರು ನಿವಾಸಿಗಳು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇದನ್ನೂ ಓದಿ – ಶಿವಮೊಗದಲ್ಲಿ ವಿದ್ಯಾರ್ಥಿಗಳೇ ಟ್ರಾಫಿಕ್‌ ಪೊಲೀಸರಾದರು, ಸಂಚಾರ ನಿಯಂತ್ರಿಸಿದರು, ಕಾರಣವೇನು? ಆಯನೂರಿನ ದಾಮೋದರ, ನಾಗರಾಜ್ ಮತ್ತು ಸತೀಶ್ ಅವರಿಗೆ ಜನವರಿ 17ರಂದು ಆಯನೂರು ಸರ್ಕಲ್‌ನ ಗಣಪತಿ ದೇವಸ್ಥಾನದ ಮುಂಭಾಗ ಪರ್ಸ್‌ ಸಿಕ್ಕಿತ್ತು. ಅದರಲ್ಲಿ ₹10,000 ನಗದು ಮತ್ತು ಪ್ರಮುಖ ದಾಖಲೆಗಳಿದ್ದವು. ತಕ್ಷಣವೇ ಅದನ್ನು ಕುಂಸಿ ಪೊಲೀಸ್ ಠಾಣೆಗೆ ಕೊಂಡೊಯ್ದು ಒಪ್ಪಿಸಿದ್ದರು. ಪರ್ಸ್‌ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಪೊಲೀಸರು … Read more

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಅಪಘಾತ, ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ

Crime-News-General-Image

ಶಿವಮೊಗ್ಗ: ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ (bike rider) ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಹೊಸ ಹೊನ್ನಾಪುರ ಗ್ರಾಮದ ರಸ್ತೆಯಲ್ಲಿ ಶಬೀರ್ ಅಹಮದ್ ಅವರು ತಮ್ಮ ಬೈಕ್‌ನಲ್ಲಿ ಸ್ನೇಹಿತ ಕೆ.ಎಂ. ಅಜೀಜುದ್ದೀನ್ ಅವರನ್ನು ಕೂರಿಸಿಕೊಂಡು ತೆರಳುತ್ತಿದ್ದರು. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಟಾಟಾ ಪಂಚ್ ಕಾರು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ … Read more

ಅಡಿಕೆ ಬೆಳೆಗಾರರೆ ಹುಷಾರ್‌, ಶಿವಮೊಗ್ಗದಲ್ಲಿ ಮತ್ತೆ ಶುರು ಅಡಿಕೆ ಖದೀಮರ ಹಾವಳಿ, ಕೇಸ್‌ ದಾಖಲು

Areca-in-gunny-bag-APMC-Shimoga

ಶಿವಮೊಗ್ಗ: ಮನೆ ಮುಂಭಾಗ ಚೀಲದಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಒಣ ಅಡಿಕೆಯನ್ನು (areca nut) ಕಳ್ಳರು ಹೊತ್ತೊಯ್ದಿದ್ದಾರೆ. ಕುಟುಂಬದವರೆಲ್ಲ ಮನೆಯ ಒಳಗೆ ಮಲಗಿದ್ದ ಸಮಯದಲ್ಲೆ ಕೃತ್ಯ ನಡೆದಿದೆ. ಪುರದಾಳು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪ್ರಶಾಂತ್‌ ಎಂಬುವವರು 3 ಎಕರೆ ತೋಟದಲ್ಲಿ ಬೆಳೆದ ಅಡಿಕೆಯನ್ನು ಕಟಾವು ಮಾಡಿ, ಒಣಗಿಸಿ ಮಾರಾಟ ಮಾಡಲು ಸಿದ್ಧಪಡಿಸಿದ್ದರು. ಒಟ್ಟು 25 ಗೋಣಿ ಚೀಲಗಳಲ್ಲಿ ಒಣ ಅಡಿಕೆಯನ್ನು ತುಂಬಿ ಹನುಮಂತಾಪುರದ ತಮ್ಮ ಮನೆಯ ಮುಂಭಾಗ ಇಟ್ಟಿದ್ದರು. ಜನವರಿ 17ರ ರಾತ್ರಿ ಅಡಿಕೆ … Read more

ಗೋಬಿ ತಿಂದು ವಾಪಸ್‌ ತೆರಳುವಾಗ ಗೊಂದಿಚಟ್ನಹಳ್ಳಿ ಬಳಿ ದುರ್ಘಟನೆ, ಯುವಕ ಸಾವು, ಆಗಿದ್ದೇನು?

ACCIDENT-NEWS-GENERAL-IMAGE.

ಶಿವಮೊಗ್ಗ: ಗೋಬಿ ತಿಂದು ವಾಪಾಸಾಗುವಾಗ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ (bike accident) ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ. ತಾಲೂಕಿನ ಗೊಂದಿಚಟ್ನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದರ್ಶನ್.ಕೆ (18) ತನ್ನ ಬೈಕ್‌ನಲ್ಲಿ ಸ್ನೇಹಿತ ಪುವರಸ ಎಂಬಾತನನ್ನು ಕೂರಿಸಿಕೊಂಡು ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ ತೆರಳುತ್ತಿದ್ದನು. ಗೊಂದಿಚಟ್ನಹಳ್ಳಿ ಗ್ರಾಮದ ಬಳಿ ಬರುತ್ತಿದ್ದಂತೆ ದರ್ಶನ್ ಚಾಲನೆ ಮಾಡುತ್ತಿದ್ದ ಬೈಕ್‌ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಲೆಗೆ ತೀವ್ರ … Read more

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈ ಕೈ ಮಿಲಾಯಿಸಿದ ಕೈದಿಗಳು, ಆಗಿದ್ದೇನು?

Shimoga-Central-Jail-Prison

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ (Central Jail) ಕೈದಿಗಳ ಎರಡು ಗುಂಪುಗಳ ಮಧ್ಯೆ ಜಗಳವಾಗಿದ್ದು, ಕೆಲವು ಕೈದಿಗಳ ಮೇಲೆ ಹಲ್ಲೆ ನಡೆದಿದೆ. ಶರಾವತಿ ವಿಭಾಗದ ಸೊಹೈಲ್ ಅಹ್ಮದ್ ಮತ್ತು ಮೊಹ್ಮದ್ ಜುನೈದ್ ಎಂಬುವವರು ಟವರ್ ವಿಭಾಗದ ಬಳಿ ಬಂದಾಗ ಅನ್ವರ್ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆದಿದೆ. ನಂತರ ಅನ್ವರ್ ಮತ್ತು ಆತನ ಸಹಚರರು ಭದ್ರಾ ವಿಭಾಗದ ಕೊಠಡಿಗೆ ತೆರಳಿ ಸೊಹೈಲ್ ಮತ್ತು ಜುನೈದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಕೈದಿಗಳನ್ನು ಚಿಕಿತ್ಸೆಗಾಗಿ ಕಾರಾಗೃಹದ … Read more

ಶಿವಮೊಗ್ಗಕ್ಕೆ ಡಿಜಿಪಿ ಅಲೋಕ್‌ ಕುಮಾರ್‌, ಕೇಂದ್ರ ಕಾರಾಗೃಹಕ್ಕೆ ಭೇಟಿ

DGP-Prisons-IPS-Officer-Alok-Kumar-visit-to-Shimoga-Airport

ಶಿವಮೊಗ್ಗ: ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಅಲೋಕ್‌ ಕುಮಾರ್‌ (Alok Kumar) ಅವರನ್ನು ಸ್ವಾಗತಿಸಿದರು. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ, ಹೆಚ್ಚುವರಿ ರಕ್ಷಣಾಧಿಕಾರಿ ಕಾರಿಯಪ್ಪ, ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್‌  ಸೇರಿದಂತೆ ಹಲವರು ಈ ಸಂದರ್ಭ ಇದ್ದರು. ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್‌ ಕುಮಾರ್‌ ಅವರು ಭೇಟಿ ನೀಡಿದರು. ಜೈಲು ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳ … Read more

ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ಆಗಿದ್ದೇನು?

BY-Raghavendra-Press-meet-in-Shimoga

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರ ಕಾರಿಗೆ ಮತ್ತೊಂದು ಕಾರು (car) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದರ ಕಾರು ಚಲಿಸುತ್ತಿದ್ದಾಗ ಹಿಂದಿನಿಂದ ಬಂದ ಬೊಲೇರೊ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರುಗಳಿಗೆ ಹಾನಿಯಾಗಿದೆ. ಸಂಸದ ರಾಘವೇಂದ್ರ ಸೇರಿದಂತೆ ಕಾರಿನಲ್ಲಿದ್ದ ಸಂಸದರ ಕಚೇರಿ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ 12‌ ಸುದ್ದಿಗಳು

ಮದ್ಯ ಸೇವಿಸಿ ಜೈಲಿಗೆ ಬಂದ ಕೈದಿ, ಬ್ಯಾಗ್‌ ಚೆಕ್‌ ಮಾಡಿದಾಗ ಸಿಕ್ತು ಓ.ಟಿ. ಪೌಚ್‌, ಏನಿದು ಪ್ರಕರಣ?

Shimoga-Central-Jail-Prison

ಶಿವಮೊಗ್ಗ: ಪೆರೋಲ್ ರಜೆ ಮುಗಿಸಿ ಕಾರಾಗೃಹಕ್ಕೆ ಮರಳುತ್ತಿದ್ದ ಸಜಾ ಬಂದಿಯೊಬ್ಬ (convict) ಕೇಂದ್ರ ಕಾರಾಗೃಹದೊಳಗೆ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕೈದಿ ಮೋಹನ್ ಕುಮಾರ ಎಂಬಾತ ಪೆರೋಲ್ ಮುಗಿಸಿ ಜೈಲಿಗೆ ವಾಪಸ್ಸಾಗುವಾಗ ಮುಖ್ಯದ್ವಾರದ ತಪಾಸಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ – ಶಿವಮೊಗ್ಗದ ಲಾಡ್ಜ್‌ಗಳಲ್ಲಿ ಪೊಲೀಸರಿಂದ ದಿಢೀರ್‌ ತಪಾಸಣೆ, ಏನೆಲ್ಲ ಪರಿಶೀಲಿಸಿದರು? ಜೈಲಿನ ಮುಖ್ಯದ್ವಾರದ ಆಕ್ಸೆಸ್ ಕಂಟ್ರೋಲ್‌ನಲ್ಲಿ ಕರ್ತವ್ಯದಲ್ಲಿದ್ದ KSISF ಸಿಬ್ಬಂದಿ, ಕೈದಿ ಮೋಹನ್ ಕುಮಾರನನ್ನು ತಪಾಸಣೆ ನಡೆಸಿದರು. ಆತ ಮದ್ಯಪಾನ ಮಾಡಿರುವುದು ಮೇಲ್ನೋಟಕ್ಕೆ … Read more

ಮಡಿಕೆಚೀಲೂರು: 19ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ದೂರು

301123-Shimoga-Rural-Police-Station.webp

ಶಿವಮೊಗ್ಗ: ಮಡಿಕೆಚೀಲೂರು ಗ್ರಾಮದಲ್ಲಿ ರಸ್ತೆ ತಡೆ (Highway) ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿದಂತೆ ಸುಮಾರು 19 ಮಂದಿ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಗುಂಪು ಕಟ್ಟಿಕೊಂಡು ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಜವನರಿ 15 ರಂದು ತಡರಾತ್ರಿ ಮಡಿಕೆಚೀಲೂರು ಗ್ರಾಮದ ಬಸ್ ನಿಲ್ದಾಣದ ಬಳಿ ಶಿವಮೊಗ್ಗ -ಹೊನ್ನಾಳಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು 60-70 ಜನರು ರಸ್ತೆ ತಡೆ ನಡೆಸಿದರು. ಇದರಿಂದ ವಾಹನಗಳು ಹಾಗೂ ಆಂಬುಲೆನ್ಸ್ … Read more

ಗಾಜನೂರಿನ ಮದ್ಯದಂಗಡಿ ಮೇಲೆ ಮಹಿಳೆಯರ ದಾಳಿ, ದೂರು, ಪ್ರತಿದೂರು, ದಾಖಲಾಯ್ತು ಮೂರು ಕೇಸ್‌

Women-Raid-on-Liquor-Shop-at-gajanuru

ಶಿವಮೊಗ್ಗ: ಅಕ್ರಮ ಮದ್ಯ (Liquor Protest) ಮಾರಾಟದ ಆರೋಪದ ಹಿನ್ನೆಲೆ ಮಹಿಳೆಯರು ಗಾಜನೂರಿನಲ್ಲಿ ನಡೆಸಿದ ಪ್ರತಿಭೆಟನೆ ವಿಕೋಪಕ್ಕೆ ಹೋಗಿದೆ. ದೂರು, ಪ್ರತಿದೂರು ದಾಖಲಾಗಿದೆ. ತುಂಗಾನಗರ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಬಾರ್‌ ಮುಂದೆಯೆ ಪ್ರತಿಭಟನೆ, ಆಕ್ರೋಶ ಗಾಜನೂರು ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬೆಳಗಿನ ಜಾವವೆ ಗಂಡಸರು, ಯುವಕರು ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಗಾಜನೂರಿನ ಬಾರ್‌ನಿಂದಲೇ ಹಳ್ಳಿ ಹಳ್ಳಿಯ ಮನೆಗಳಲ್ಲಿ ಮಾರಾಟಕ್ಕೆ … Read more