ಪಿಳ್ಳಂಗಿರಿಯಲ್ಲಿದ್ದ ಮತಗಟ್ಟೆ ಬದಲಾವಣೆ, ಹೊಸ ಮತಗಟ್ಟೆ ಎಲ್ಲಿದೆ?

Shimoga-Election-News-General-Image

SHIVAMOGGA LIVE NEWS | 1 APRIL 2023 SHIMOGA : ಪಿಳ್ಳಂಗಿರಿ ಗ್ರಾಮದಲ್ಲಿ ಈ ಹಿಂದೆ ಇದ್ದ ಮತಗಟ್ಟೆಯನ್ನು (Polling Booth) ಬದಲಾವಣೆ ಮಾಡಲಾಗಿದೆ ಎಂದು ಶಿವಮೊಗ್ಗ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ. ಹಿಂದೆ ಎಲ್ಲಿತ್ತು ಮತಗಟ್ಟೆ? ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ (Polling Booth) ಸಂಖ್ಯೆ 155 ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಳ್ಳಂಗಿರಿಯಲ್ಲಿ ಇತ್ತು. ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಶಾಲೆ ಕಟ್ಟಡ ತೆರವುಗೊಳಿಸಲಾಗಿದೆ. ಹಾಗಾಗಿ ಆ ಶಾಲಾ … Read more

ವಿವಿಧ ಚೆಕ್ ಪೊಸ್ಟ್ ಗಳಿಗೆ ರಾತ್ರಿ ಶಿವಮೊಗ್ಗ ಜಿಲ್ಲಾಧಿಕಾರಿ ದಿಢೀರ್ ಭೇಟಿ

DC-Dr-Selvamani-IAS-visit-Checkpost-in-Suttukote

SHIVAMOGGA LIVE NEWS | 31 MARCH 2023 SHIMOGA : ವಿಧಾನ ಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಗಳನ್ನು (Check Post) ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ವಿವಿಧ ಚೆಕ್ ಪೋಸ್ಟ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ತಾಲೂಕು ಸುತ್ತುಕೋಟೆಯಲ್ಲಿರುವ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಭೇಟಿ ನೀಡಿದ್ದರು. ಚೆಕ್ ಪೋಸ್ಟ್ (Check Post) ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿರುವ ಪರಿಯನ್ನು ಪರಿಶೀಲಿಸಿದರು. ಅಲ್ಲದೆ ಚೆಕ್ … Read more

ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಅಪಘಾತ, ಭದ್ರಾವತಿಯ ಯುವಕನಿಗೆ ಗಂಭೀರ ಗಾಯ

Head-on-Between-College-bus-and-bike-at-machenahalli.

SHIVAMOGGA LIVE NEWS | 30 MARCH 2023 SHIMOGA : ಕಾಲೇಜು ಬಸ್ ಮತ್ತು ಬೈಕ್ (bike) ಮುಖಾಮುಖಿ ಡಿಕ್ಕಿಯಾಗಿದ್ದು ಭದ್ರಾವತಿಯ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಾಚೇನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಮದನ್, ಗಾಯಗೊಂಡಿರುವ ಬೈಕ್ (bike) ಸವಾರ. ತಲೆಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ. ಖಾಸಗಿ ಕಾಲೇಜಿನ ಬಸ್ ಶಿವಮೊಗ್ಗದ ಕಡೆಯಿಂದ ಬರುತ್ತಿತ್ತು. ಮದನ್ ಭದ್ರಾವತಿ ಕಡೆಯಿಂದ ಶಿವಮೊಗ್ಗದ ಕಾಲೇಜಿಗೆ ತೆರಳುತ್ತಿದ್ದ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ – ಚುನಾವಣೆ ಹೊತ್ತಲ್ಲಿ ಎಷ್ಟು ಹಣ ಕೊಂಡೊಯ್ಯಬಹುದು? … Read more

BREAKING NEWS | ಶಿವಮೊಗ್ಗ – ಶಿಕಾರಿಪುರ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿ ಗ್ರಾಮಸ್ಥರ ಆಕ್ರೋಶ, ಟ್ರಾಫಿಕ್ ಜಾಮ್

Shimoga-Shikaripura-Road-Blocked-at-Kunchenahalli

SHIVAMOGGA LIVE NEWS | 28 MARCH 2023 SHIMOGA : ಒಳ ಮೀಸಲಾತಿ ಜಾರಿ ಸಂಬಂಧ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿ ಹೆದ್ದಾರಿ (Highway Block) ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಮೇಲೆ ತೆಂಗಿ ಗರಿ ಇಟ್ಟು ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗ – ಶಿಕಾರಿಪುರ ಹೆದ್ದಾರಿಯ ಕುಂಚೇನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಗ್ರಾಮಸ್ಥರು ದಿಢೀರ್ ರಸ್ತೆಗಿಳಿದು, ಬಂಜಾರ ಸಮುದಾಯದ ಧ್ವಜಗಳನ್ನು … Read more

ಮೂರು ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ವಿಶೇಷ ವಿಮಾನ ಹತ್ತಿದ ಪ್ರಧಾನಿ ಮೋದಿ

PM-Narendra-Modi-Aircraft-in-Shimoga-Airport.

SHIVAMOGGA LIVE NEWS | 25 MARCH 2023 SHIMOGA : ಒಂದು ತಿಂಗಳ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಎರಡನೆ ಭಾರಿ ಭೇಟಿ ನೀಡಿದ್ದರು. ದಾವಣಗೆರೆಯಿಂದ ಆಗಮಿಸಿದ್ದ ಪ್ರಧಾನಿ, ವಾಯು ಸೇನೆಯ ವಿಶೇಷ ವಿಮಾನದಲ್ಲಿ (Special Flight) ನವದೆಹಲಿಗೆ ಪ್ರಯಾಣ ಬೆಳೆಸಿದರು. ಮೂರು ಹೆಲಿಕಾಪ್ಟರ್ ನಲ್ಲಿ ಆಗಮನ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಕಚೇರಿಯ ಸಿಬ್ಬಂದಿ ಮೂರು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಂಸದ ಬಿ.ವೈ.ರಾಘವೇಂದ್ರ, … Read more

ಕೂಡಲಿ ಜಾತ್ರೆ, ತುಂಗಾ – ಭದ್ರಾ ಸಂಗಮದಲ್ಲಿ ಮಿಂದೆದ್ದ ಭಕ್ತ ಸಮೂಹ, ಹೇಗಿತ್ತು ಈ ಭಾರಿ ವೈಭವ?

Kudli-Temple-Jathre-in-2023-yugadi

SHIVAMOGGA LIVE NEWS | 24 MARCH 2023 SHIMOGA : ಕೂಡಲಿಯ ಪುರಾಣ ಪ್ರಸಿದ್ಧ ಶ್ರೀ ಸಂಗೇಶ್ವರ ಸ್ವಾಮಿ ಜಾತ್ರೆ (Kudli Jathre) ಅದ್ಧೂರಿಯಾಗಿ ನಡೆಯಿತು. ಈ ಬಾರಿ ಸುತ್ತಮುತ್ತಲ ಸುಮಾರು 200 ಗ್ರಾಮಗಳ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ಯುಗಾದಿ ಹಬ್ಬದಂದು ಶ್ರೀ ಸಂಗಮೇಶ್ವರ ಜಾತ್ರೆಗೆ (Kudli Jathre)  ಚಾಲನೆ ನೀಡಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳು, ನೆರಹೊರೆಯ ಜಿಲ್ಲೆಯಿಂದಲು ಭಕ್ತರು … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಬರುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಕಾರಣವೇನು?

Prime-Minister-Narendra-Modi-in-Shivamogga-Airport

SHIVAMOGGA LIVE NEWS | 21 MARCH 2023 SHIMOGA : ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport) ಆಗಮಿಸಲಿದ್ದಾರೆ. ಅಂದು ಸಂಜೆ ಶಿವಮೊಗ್ಗಕ್ಕೆ ಬರುವ ಪ್ರಧಾನಿ ಮೋದಿ ಅವರು, ಇಲ್ಲಿಂದ ವಿಮಾನದಲ್ಲಿ ನವದೆಹಲಿಗೆ ತೆರಳಲಿದ್ದಾರೆ. ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾವೇಶ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಶಿವಮೊಗ್ಗದಿಂದ ದೆಹಲಿಗೆ ಪ್ರಯಾಣ … Read more

ಶಿವಮೊಗ್ಗದಲ್ಲಿ ಅನಾವರಣಗೊಳ್ಳಲಿದೆ ಛತ್ರಪತಿ ಶಿವಾಜಿ ಪುತ್ಥಳಿ, ಎಲ್ಲಿ? ಯಾವಾಗ?

Shivaji-Statue-in-Amulya-Shodha-in-Shimoga

SHIVAMOGGA LIVE NEWS | 21 MARCH 2023 SHIMOGA : ಛತ್ರಪತಿ ಶಿವಾಜಿ ಅವರ 396ನೇ ಜಯಂತಿ ಅಂಗವಾಗಿ ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯದಲ್ಲಿ ಶಿವಾಜಿ ಪುತ್ಥಳಿ (Shivaji Statue) ಅನಾವರಣ ಮಾಡಲಾಗುತ್ತಿದೆ ಎಂದು ಅಮೂಲಕ ಶೋಧ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಖಂಡೋಬರಾವ್ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಂಡೋಬರಾವ್ ಅವರು, ಮಾರ್ಚ್ 24ರಂದು ಬೆಳಗ್ಗೆ 11.45ಕ್ಕೆ ಹಿಂದೂ ರಾಷ್ಟ್ರದ ಸಂರಕ್ಷಕರಾದ ಛತ್ರಪತಿ ಶಿವಾಜಿ ಅವರ ಪುತ್ಥಳಿಯನ್ನು (Shivaji Statue) ಅನಾವರಣ ಮಾಡಲಾಗುತ್ತಿದೆ. … Read more

ಶಿವಮೊಗ್ಗ – ಸಾಗರ ಹೆದ್ದಾರಿ, ನೀರಗಂಟಿಗೆ ಡಿಕ್ಕಿ ಹೊಡೆದು ಬಸ್ ನಿಲ್ದಾಣಕ್ಕೆ ನುಗ್ಗಿದ ಲಾರಿ

Truck-collides-with-bus-stand-at-tuppur-in-Shimoga-Sagara-Road

SHIVAMOGGA LIVE NEWS | 20 MARCH 2023 SHIMOGA : ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಲಾರಿ (Truck) ಬಳಿಕ ಬಸ್ ನಿಲ್ದಾಣಕ್ಕೆ ನುಗ್ಗಿದೆ. ಘಟನೆಯಲ್ಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನಿಲ್ದಾಣ ಧ್ವಂಸವಾಗಿದೆ. ಶಿವಮೊಗ್ಗ – ಸಾಗರ ರಾಷ್ಟ್ರೀಯ ಹೆದ್ದಾರಿಯ ತುಪ್ಪೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ. ನೀರಗಂಟಿ ನಾಗರಾಜ್ (56) ಗಂಭೀರ ಗಾಯಗೊಂಡಿದ್ದಾರೆ. ಹೇಗಾಯ್ತು ಘಟನೆ? ಸಾಗರ ಕಡೆಯಿಂದ ವೇಗವಾಗಿ ಬಂದ ಲಾರಿ (Truck) ತುಪ್ಪೂರು ಬಳಿ ಚಾಲಕನ ನಿಯಂತ್ರಣ … Read more

ಶಿವಮೊಗ್ಗದ ಸೆಂಟ್ರಲ್ ಜೈಲ್ ಮೇಲೆ ಪೊಲೀಸರಿಂದ ದಿಢೀರ್ ದಾಳಿ

Shimoga-Central-Jail-Building

SHIVAMOGGA LIVE NEWS | 20 MARCH 2023 SHIMOGA : ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ದಿಢೀರ್ ದಾಳಿ (Raid) ನಡೆಸಿ ಪರಿಶೀಲನೆ ನಡೆಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಿಢೀರ್ ದಾಳಿ ಸೋಗಾನೆ ಬಳಿ ಇರುವ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಇಂದು ಬೆಳಗ್ಗೆ ದಿಢೀರ್ ದಾಳಿ (Raid) ನಡೆಸಲಾಯಿತು. ಕಾರಾಗೃಹದಲ್ಲಿರುವ ಪ್ರತಿ ಸೆಲ್ ನಲ್ಲಿಯು ಪೊಲೀಸರು ತಪಾಸಣೆ ಮಾಡಿದರು. ಆದರೆ ಜೈಲಿನಲ್ಲಿ ಯಾವುದೆ ಅಕ್ರಮ ವಸ್ತುಗಳು … Read more