ಶಿವಮೊಗ್ಗದ ಜಲಾಶಯಗಳಿಗೆ ಒಳ ಹರಿವು ಹೆಚ್ಚಳ, ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

Bhadra-Dam-General-Images

SHIVAMOGGA LIVE NEWS | DAM LEVEL | 20 ಮೇ 2022 ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ತುಂಗಾ ಜಲಾಶಯ ಭರ್ತಿ ಆಗಿರುವುದರಿಂದ ಇಲ್ಲಿ ಹೊರ ಹರಿವು ಕೂಡ ದಾಖಲಾಗಿದೆ. ಯಾವ್ಯಾವ ಜಲಾಶಯದಲ್ಲಿ ಎಷ್ಟಿದೆ ನೀರು? ಲಿಂಗನಮಕ್ಕಿ ಜಲಾಶಯಕ್ಕೆ 11,125 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ 1763.65 ಅಡಿಯಷ್ಟು ನೀರಿದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯ … Read more

ಗಾಜನೂರು ತುಂಗಾ ಜಲಾಶಯದ ಐದು ಗೇಟುಗಳು ಓಪನ್

Tunga-Dam-full-5-gates-opened

SHIVAMOGGA LIVE NEWS | DAM | 19 ಮೇ 2022 ತುಂಗಾ ಜಲಾಶಯದ ಐದು ಗೇಟುಗಳನ್ನು ಮೇಲೆತ್ತಲಾಗಿದೆ. ಭಾರಿ ಮಳೆ ಮತ್ತು ಈಗಾಗಲೇ ಜಲಾಶಯ ಭರ್ತಿಯಾಗಿದ್ದರಿಂದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 588.24 ಮಿಮೀ. ಈಗಾಗಲೆ ಅಷ್ಟೆ ಪ್ರಮಾಣದ ನೀರಿನ ಸಂಗ್ರಹವಿತ್ತು. ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿತ್ತು. ಇವತ್ತು ಜಲಾಶಯದ ಐದು ಕ್ರಸ್ಟ್ ಗೇಟುಗಳನ್ನು ಮೇಲೆತ್ತಿ, ಹೊಳೆಗೆ … Read more

BREAKING NEWS | ಶಿವಮೊಗ್ಗ ತಾಲೂಕಿನ ಶಾಲೆಗಳಿಗೆ ಇವತ್ತು ರಜೆ

Shimoga-City-Rain-Woman-with-Umbrella.

SHIVAMOGGA LIVE NEWS | SCHOOL | 19 ಮೇ 2022 ಭಾರಿ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನಾದ್ಯಂತ ಇವತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ರಾತ್ರಿಯಿಂದ ಶಿವಮೊಗ್ಗ ತಾಲೂಕಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಇವತ್ತು ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ – ಇವತ್ತಿನ ಎಲ್ಲಾ ಸುದ್ದಿಗಳನ್ನು … Read more

ಖಾಸಗಿ ಬಸ್, ಓಮ್ನಿ ಕಾರು ಮುಖಾಮುಖಿ ಡಿಕ್ಕಿ

Car-Bus-Accident-at-Yedhealli.

SHIVAMOGGA LIVE NEWS | ACCIDENT | 12 ಮೇ 2022 ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಭದ್ರಾವತಿ ತಾಲೂಕು ಯಡೆಹಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಚನ್ನಗಿರಿ ಕಡೆಯಿಂದ ಬರುತ್ತಿದ್ದ ಮಾರುತಿ ಓಮ್ನಿ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕಾರಿನ … Read more

ಶಿವಮೊಗ್ಗ ತ್ಯಾವರೆಕೊಪ್ಪ ಸಫಾರಿಯಲ್ಲಿ ಹುಲಿ ಸಾವು

Tiger-Dies-at-Lion-Tiger-safari-in-Shimoga

SHIVAMOGGA LIVE NEWS | TIGER| 12 ಮೇ 2022 ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಗಂಡು ಹುಲಿಯೊಂದು ಮೃತಪಟ್ಟಿದೆ. ರಾಮ (17) ಮೃತಪಟ್ಟಿರುವ ಹುಲಿ. ವಯೋಸಹಜ ಕಾರಣದಿಂದ ಹುಲಿ ಮೃತಪಟ್ಟಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾನೂನು ರೀತಿ ಮರಣೋತ್ತರ ಪರೀಕ್ಷೆ ನಡೆದಿದ್ದು, ದಹನ ಪ್ರಕ್ರಿಯೆ ನಡಸಲಾಗಿದೆ. ಸದ್ಯ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಸ್ತುತ 5 ಹುಲಿಗಳಿವೆ. ಇದನ್ನೂ ಓದಿ ⇒ ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಹೊಳೆಹೊನ್ನೂರು ಬಳಿ ಭದ್ರಾ ನಾಲೆಯಲ್ಲಿ ಈಜಲು ಹೋದ ಮಕ್ಕಳು ನಾಪತ್ತೆ

Children-Drowned-in-Bhadra-Canal

SHIVAMOGGA LIVE NEWS | DROWN | 12 ಮೇ 2022 ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚಂದನಾ (14) ಮತ್ತು ಹರ್ಷ (10) ನಾಪತ್ತೆಯಾಗಿದ್ದಾರೆ. ಹೊಳೆಹೊನ್ನೂರು ಸಮೀಪದ ಅಗರದಹಳ್ಳಿ ಬಳಿ ಭದ್ರಾ ಬಲದಂಡೆ ನಾಲೆಯಲ್ಲಿ ಮಕ್ಕಳು ತಮ್ಮ ದೊಡ್ಡಪ್ಪನೊಂದಿಗೆ ಈಜಲು ತೆರಳಿದ್ದರು. ಈ ಸಂದರ್ಭ ನಾಪತ್ತೆಯಾಗಿದ್ದಾರೆ. ರಜೆಗೆ ದೊಡ್ಡಪ್ಪನ ಮನೆಗೆ ಬಂದಿದ್ದರು ಮಕ್ಕಳು ಶಿವಮೊಗ್ಗ ತಾಲೂಕು ಮುದುವಾಲ ಗ್ರಾಮದವರು. ಶಾಲೆಗೆ ರಜೆ … Read more

ಮುಖ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ, ಜನರಲ್ಲಿ ಢವಢವ, ವಿಡಿಯೋ ವೈರಲ್

Elephant-Found-on-Main-Road-At-Umblebyle-Village

SHIVAMOGGA LIVE NEWS | ELEPHANT | 09 ಮೇ 2022 ಹೊಲ, ಗದ್ದೆಗೆ ನುಗ್ಗಿ ಬೆಳೆ ಹಾನಿ ಉಂಟು ಮಾಡುತ್ತಿದ್ದ ಆನೆಗಳು ಈಗ ಊರಿನ ಮುಖ್ಯ ರಸ್ತೆಯಲ್ಲಿ ಓಡಾಡಲು ಆರಂಭವಿಸಿವೆ. ಇದರಿಂದ ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ. ಮೂರ್ನಾಲ್ಕು ದಿನದ ಹಿಂದೆ ಕಾಡಾನೆಯೊಂದು ಉಂಬ್ಳೆಬೈಲು ಮುಖ್ಯ ರಸ್ತೆಯಲ್ಲಿ ಸಂಚರಿಸಿದೆ. ಬೆಳಗಿನ ಹೊತ್ತಿನಲ್ಲೆ ಆನೆಯೊಂದು ಈ ರೀತಿ ಓಡಾಡಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಆನೆ ಕಂಡು ಜನರಲ್ಲಿ … Read more

ಕಾರು ಗಾಜು ಪೀಸ್ ಪೀಸ್ ಕೇಸ್, ಮತ್ತೂರಿಗೆ ಗೃಹ ಸಚಿವರ ಭೇಟಿ

Home-Minister-Araga-Jnanendra-Visit-Mattur-Village.

SHIVAMOGGA LIVE NEWS | HOME MINISTER | 07 ಮೇ 2022 ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇತ್ತು ಮತ್ತೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಕಳೆದ ಸೂಳೆಬೈಲಿನಲ್ಲಿ ಕಾರು ಗಾಜು ಒಡೆದು ಪ್ರಕರಣ ಸಂಬಂಧ ಸ್ಥಳೀಯರಿಂದ ಮಾಹಿತಿ ಪಡೆದರು. ಮತ್ತೂರಿನ ಪ್ರಮುಖರೊಂದಿಗೆ ಗೃಹ ಸಚಿವರು ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಮಚ್ಚು ಲಾಂಗು ಹಿಡಿದು ಒಂದು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಮಾಹಿತಿ ಗೊತ್ತಾದ ಅರ್ಧ … Read more

ವಿದ್ಯುತ್ ಕಂಬದಿಂದ ಬಿದ್ದು ಸೊಂಟ ಮುರಿದುಕೊಂಡ ಕಾರ್ಮಿಕ, ಗುತ್ತಿಗೆದಾರನ ವಿರುದ್ಧ ಕೇಸ್

Tunga-Nagara-Police-Station-Shimoga

ಶಿವಮೊಗ್ಗ ಲೈವ್.ಕಾಂ | ELECTRIC POLE | 7 MAY 2022 ಉಂಬೈಬೈಲ್-ಲಿಂಗಾಪುರದಲ್ಲಿ ಎಲೆಕ್ಟ್ರಿಕ್ ಕೆಲಸ ಮಾಡುವಾಗ ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಿಕಾರಿಪುರದ ಹುಚ್ಚರಾಯಪ್ಪ ಗಾಯಾಳು, ಫೆ.3ರಂದು ಶಿರಾಳಕೊಪ್ಪದ ಎಲೆಕ್ಟ್ರಿಕಲ್ ಗುತ್ತಿಗೆದಾರ ಸಚಿನ್ ಉಂಬೈಬೈಲ್-ಲಿಂಗಾಪುರ ಗ್ರಾಮಕ್ಕೆ ವಿದ್ಯುತ್ ಕಾಮಗಾರಿಗೆ ಹುಚ್ಚರಾಯಪ್ಪನನ್ನು ಕರೆದೊಯ್ದಿದ್ದ ಎಂದು ಆರೋಪಿಸಲಾಗಿದೆ. ಸುರಕ್ಷಿತ ಕ್ರಮವಿಲ್ಲ ಯಾವುದೇ ಸುರಕ್ಷಿತಾ ಕ್ರಮ ಅನುಸರಿಸದೆ ಹುಚ್ಚರಾಯಪ್ಪನನ್ನು ವಿದ್ಯುತ್ ಕಂಬ ಹತ್ತಿಸಲಾಗಿತ್ತು. ಈ ವೇಳೆ ವಿದ್ಯುತ್ ಕಂಬದಿಂದ ಬಿದ್ದು ಹುಚ್ಚರಾಯಪ್ಪ ಸೊಂಟ ಮುರಿದುಕೊಂಡಿದ್ದ. ತಕ್ಷಣವೇ ಆತನನ್ನು … Read more

ಕುಂಸಿ, ಆಯನೂರು ಸುತ್ತಮುತ್ತ ಹಲವು ಕಡೆ ಮೇ 7ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ ಇರಲ್ಲ ವಿದ್ಯುತ್?

power cut mescom ELECTRICITY

SHIVAMOGGA LIVE NEWS | POWER | 06 ಮೇ 2022 ಶಿವಮೊಗ್ಗ ತಾಲ್ಲೂಕು ಕುಂಸಿ ಗ್ರಾಮದ 110/11 ಕೆವಿ ವಿದ್ಯುತ್ ನಿರ್ವಹಣೆ ಕಾರ್ಯ ಹಾಗೂ ನಿರಂತರ ಜ್ಯೋತಿ ಕಾಮಗಾರಿಯ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಆದ್ದರಿಂದ ಮೇ 7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ? ಕುಂಸಿ, ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣೆಹೊಸೂರು, ಹೊರಬೈಲು ಇನ್ನಿತರ ಸುತ್ತಮುತ್ತಲ ಹಳ್ಳಿಗಳು ಹಾಗೂ ಹಾರ್ನಳ್ಳಿ, … Read more