60 ವರ್ಷವಾದ್ರೂ ಸರ್ವೆಯಾಗಿಲ್ಲ, ಕಾಡು ಪ್ರಾಣಿ ಹಾವಳಿ ತಡೆಯೋಕಾಗ್ತಿಲ್ಲ, ಉಂಬ್ಳೆಬೈಲು ಅರಣ್ಯ ಕಚೇರಿ ಮುಂದೆ ಆಕ್ರೋಶ

010321 Protest in Front Of Umblebyle Forest Dept 1

ಶಿವಮೊಗ್ಗ ಲೈವ್.ಕಾಂ | SHIMOGA TALUK NEWS | 1 MARCH 2021 ಉಂಬ್ಳೆಬೈಲು, ಕೊರ್ಲಹಳ್ಳಿ, ಮತ್ತೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳ ಉಪಟಳ ತಡೆಯುವಲ್ಲಿ ವಿಫಲವಾದ ಅರಣ್ಯ ಇಲಾಖೆ ವಿರುದ್ಧ ಪ್ರಜಾಸ್ಪಂದನ ಸಾಮಾಜಿಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದನ್ನೂ ಓದಿ | ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಕಾಣಿಸಿದ ಕಾಡಾನೆ, ಲಕ್ಕಿನಕೊಪ್ಪದಲ್ಲಿ ತೋಟಕ್ಕೆ ದಾಳಿ ಉಂಬ್ಳೆಬೈಲು ವಲಯ ಅರಣ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕಾಡಾನೆ ಸೇರಿದಂತೆ ಕಾಡು ಪ್ರಮಾಣಿಕಗಳ … Read more

ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಕಾಣಿಸಿದ ಕಾಡಾನೆ, ಲಕ್ಕಿನಕೊಪ್ಪದಲ್ಲಿ ತೋಟಕ್ಕೆ ದಾಳಿ

020221 UMBLEBYLE ELEPHANT news 1

ಶಿವಮೊಗ್ಗ ಲೈವ್.ಕಾಂ | SHIMOGA CITY NEWS | 26 FEBRUARY 2021 ಕಾಡಾನೆಯೊಂದು ಲಕ್ಕಿನಕೊಪ್ಪದ ತೋಟವೊಂದಕ್ಕೆ ನುಗ್ಗಿ ಅಡಕೆ ಮರ, ಬಾಳೆಗಿಡಗಳನ್ನು ಹಾಳುಗೆಡವಿದೆ. ಇದು ಸ್ಥಳೀಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದನ್ನೂ ಓದಿ | SHIMOGA | ಅಪರೇಷನ್ ಮುಗಿದು ವಾರ ಕಳೆಯೋದರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ತೋಟಗಳಿಗೆ ದಾಳಿ ಲಕ್ಕಿನಕೊಪ್ಪದ ಮಂಜುನಾಥ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಯೊಂದು, ತೋಟವನ್ನು ಹಾನಿಗೊಳಿಸಿದೆ. ಬುಧವಾರ ರಾತ್ರಿ ಕಾಡನೆ ದಾಳಿ ಮಾಡಿದೆ. ಆನೆ ದಾಳಿ ಮತ್ತಷ್ಟು ಹೆಚ್ಚಳವಾಗುವ ಆತಂಕ ರೈತರಲ್ಲಿದೆ. … Read more

ರೈಲು ನಿಲ್ಲಿಸ್ತಿಲ್ಲ, ಟಿಕೆಟ್‌ಗಳನ್ನು ಕೊಡ್ತಿಲ್ಲ, ರೈಲು ತಡೆಗೆ ಮುಂದಾದ ಕುಂಸಿ ಗ್ರಾಮಸ್ಥರು | VIDEO REPORT

260221 Villagers Protest In Front of Kumsi Railway Station 1

ಶಿವಮೊಗ್ಗ ಲೈವ್.ಕಾಂ | SHIMOGA TALUK NEWS | 26 FEBRUARY 2021 ಕುಂಸಿಯಲ್ಲಿ ರೈಲುಗಳ ನಿಲುಗಡೆ ಮಾಡಬೇಕು, ಇಲ್ಲಿನ ನಿಲ್ದಾಣದಲ್ಲಿ ಟಿಕೆಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಕುಂಸಿ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು. ರೈಲು ತಡೆಗೆ ಯತ್ನ ಶಿವಮೊಗ್ಗ – ತಾಳಗುಪ್ಪ ನಡುವೆ ಸಂಚರಿಸುವ ಎಲ್ಲಾ ರೈಲುಗಳು ಕುಂಸಿಯಲ್ಲಿ ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ, ರೈಲು ತಡೆಗೆ ಗ್ರಾಮಸ್ಥರು, ವಿವಿಧ ಸಂಘಟನೆಗಳ ಪ್ರಮುಖರು ಮುಂದಾದರು. ಆದರೆ ಗ್ರಾಮಸ್ಥರು … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರಿಗೆ 13 ವರ್ಷವಾದರೂ ಸಿಕ್ಕಿಲ್ಲ ನಿವೇಶನ

160221 Vijay Kumar Veda Vijaykumar Memorandum about sogane houses 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 FEBRUARY 2021 ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ತಸ್ತರಿಗೆ ಶೀಘ್ರವೇ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ನೇತೃತ್ವದಲ್ಲಿ ಸಂತ್ರಸ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ಹಿಂದೆ ವಿಮಾನ ನಿಲ್ದಾಣಕ್ಕಾಗಿ ರೈತರಿಂದ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಸಂತ್ರಸ್ತರಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿರುವುದು ಸರಿಯಷ್ಟೇ. ಆದರೆ, 13 ವರ್ಷ ಕಳೆದರೂ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಿಲ್ಲ. ಹಾಗಾಗಿ ಶೀಘ್ರವೇ … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಎಂ ಯಡಿಯೂರಪ್ಪ ಭೇಟಿ

160221 Yedyurappa Visit Shimoga Airport 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 FEBRUARY 2021 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯ ಪರಿಶೀಲನೆ ನಡೆಸಿದರು. ಇನ್ನೊಂದು ವರ್ಷದಲ್ಲಿ ಇಲ್ಲಿ ವಿಮಾನ ಹಾರಾಟ ಆರಂಭವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇವತ್ತು ಬೆಳಗ್ಗೆ ಸೋಗಾನೆಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ಕಾಮಗಾರಿ ಪರಿಶೀಲಿಸಿದರು. ರನ್‍ವೇಯಲ್ಲಿ ಸಂಚರಿಸಿದ ಸಿಎಂ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 1.7 ಕಿ.ಮೀ ರನ್‍ ವೇ ರೆಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, 384 … Read more

SHIMOGA | ಅಪರೇಷನ್ ಮುಗಿದು ವಾರ ಕಳೆಯೋದರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ತೋಟಗಳಿಗೆ ದಾಳಿ

020221 UMBLEBYLE ELEPHANT news 1

(FILE PHOTO) ಶಿವಮೊಗ್ಗ ಲೈವ್.ಕಾಂ | SHIMOGA NEWS | 11 FEBRUARY 2021 ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷವಾಗಿವೆ. ತೋಟಗಳಿಗೆ ನುಗ್ಗಿ ಅಡಕೆ ಸಸಿಗಳಿಗೆ ಹಾನಿ ಮಾಡಿರುವುದು ವರದಿಯಾಗಿದೆ. ಇದರಿಂದ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಕ್ರೆಬೈಲು ಬಿಡಾರದ ಆನೆಗಳನ್ನು ಉಪಯೋಗಿಸಿಕೊಂಡು ನಡೆಸಿದ ಕಾರ್ಯಾಚರಣೆ ಹೊಳೆಯಲ್ಲಿ ಹುಣಸೇಹಣ್ಣು ಹಿಂಡಿದಂತೆ ಆಗಿದೆ. ಎಲ್ಲೆಲ್ಲಿ ಪ್ರತ್ಯಕ್ಷವಾಗಿವೆ ಆನೆಗಳು? ಸೋಮವಾರ ಹಾಲ್‍ ಲಕ್ಕವಳ್ಳಿಯಲ್ಲಿ ಅಡಕೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಸಸಿಗಳನ್ನು ತಿಂದಿರುವುದು ತಿಳಿದು ಬಂದಿದೆ. ಕೈದೊಟ್ಲು ಗ್ರಾಮದ … Read more

AYANUR | ಸೂರ್ಯ ಮುಳುಗುತ್ತಿದ್ದಂತೆ ಊರು ಬಿಡ್ತಾರೆ, ಗಡಿ ದಾಟಿಸುವ ಪದ್ಧತಿ ಮುಗಿಯೋತನಕ ಒಬ್ಬರೂ ಮನೆಗೆ ಬರಲ್ಲ

100221 Ayanur Kote Tanda Gadi Pooje 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021 ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಆಯನೂರು ಸಮೀಪ ರಾತ್ರಿ ವೇಳೆ ಗ್ರಾಮ ತೊರೆದು, ವಿಶೇಷ ಪೂಜೆ ಸಲ್ಲಿಸುವ ಆಚರಣೆ ನಡೆಯಿತು. ಬಂಜಾರ ಸಮುದಾಯದವರು ಒಂದೆಡೆ ಸೇರಿ ಈ ವಿಶೇಷ ಆಚರಣೆ ಮಾಡಿದರು. ಆಯನೂರು ಸಮೀಪದ ಕೋಟೆ ತಾಂಡದವರು ಊರ ಹೊರಗೆ ಈ ಸಂಪ್ರದಾಯ ನೆರವೇರಿಸಿದರು. ಊರಿನ ಹೊರಗೆ ಗದ್ದೆ ಬಯಲಿನಲ್ಲಿ ಅಡುಗೆ ಮಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡಿದರು. ಮಂಗಳವಾರ ರಾತ್ರಿ ಈ ವಿಶೇಷ ಆಚರಣೆ … Read more

SHIMOGA | ಊರಿಗೂರೆ ಖಾಲಿ, ಗ್ರಾಮದ ಸುತ್ತಲು ಬೇಲಿ, ಇಡೀ ದಿನ ಯಾರೂ ಇಲ್ಲಿ ಕಾಲಿಡುವಂತಿಲ್ಲ, ಏನಿದು? ಯಾಕಿಂಗೆ?

100221 Mandagatta Horabidu Jathre in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021 ಮೂರು ವರ್ಷಕ್ಕೊಮ್ಮೆ ಗ್ರಾಮಸ್ಥರೆಲ್ಲ ಊರು ಬಿಡ್ತಾರೆ. ಇಡೀ ಗ್ರಾಮಕ್ಕೆ ಬೇಲಿ ಹಾಕ್ತಾರೆ. ದನಕರು, ನಾಯಿ, ಕೋಳಿಗಳನ್ನು ಕೂಡ ಊರಲ್ಲಿ ಬಿಡದೆ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಇದು ಹೊರಬೀಡು ಜಾತ್ರೆಯ ವಿಶೇಷ. ಶಿವಮೊಗ್ಗ ತಾಲೂಕು ಮಂಡಘಟ್ಟ ಗ್ರಾಮದಲ್ಲಿ ಈ ಜಾತ್ರೆ ನಡೆಯಲಿದೆ. ಗ್ರಾಮಸ್ಥರೆಲ್ಲ ಊರಾಚೆಗೆ ಇದ್ದು ಒಟ್ಟಿಗೆ ಬೆರೆತು, ಊಟ, ತಿಂಡಿ ಮಾಡಿ ಸಾಮಾರಸ್ಯದಿಂದ ಹಬ್ಬ ಆಚರಿಸುತ್ತಾರೆ. ಮಂಗಳವಾರ ಹೊರಬೀಡು ಜಾತ್ರೆ ನಡೆಯಿತು. ಹೇಗಿರುತ್ತೆ ಹೊರಬೀಡು ಜಾತ್ರೆ … Read more

SHIMOGA | ಆಪರೇಷನ್ ಒಂಟಿ ಸಲಗ ಶುರು, ಬೆಳಗ್ಗೆಯಿಂದ ಅರಣ್ಯದಲ್ಲಿ ಕೂಂಬಿಂಗ್

030221 Operation Elephant at Umblebyle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021 ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ‘ಆಪರೇಷನ್ ಒಂಟಿ ಸಲಗ’ ಶುರುವಾಗಿದೆ. ಐದಾರು ವರ್ಷದಿಂದ ಇಲ್ಲಿ ಬೆಳೆ ನಾಶ ಮಾಡುತ್ತ, ಜನರಲ್ಲಿ ಆತಂಕ ಮೂಡಿಸಿರುವ ಒಂಟಿ ಸಲಗ ಸೆರೆ ಹಿಡಿಯುವ ಕಾರ್ಯ ನಡೆಯುತ್ತಿದೆ. ಸಕ್ರೆಬೈಲಿನಿಂದ ಆನೆಗಳ ಆಗಮನ ಒಂಟಿ ಸಲಗವನ್ನು ಹಿಡಿಯಲು ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು ಕಾರ್ಯಾಚರಣೆಗೆ ಇಳಿದಿವೆ. ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಇವತ್ತು ಬೆಳಗ್ಗೆಯಿಂದಲೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ | ಇದು ಸಣ್ಣ … Read more

SHIMOGA | ಉಂಬ್ಳೆಬೈಲು ಅರಣ್ಯದ ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ, ಹೇಗಿರುತ್ತೆ ಆಪರೇಷನ್?

020221 UMBLEBYLE ELEPHANT news 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 02 FEBRUARY 2021 ಉಂಬ್ಳೆಬೈಲು ಅರಣ್ಯ ವಲಯದಲ್ಲಿ  ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳನ್ನು ಹಿಡಿಯಲು ಸಕ್ರೆಬೈಲು ಬಿಡಾರದ ಆನೆಗಳು ಸಜ್ಜಾಗಿವೆ. ಫೆಬ್ರವರಿ 3ರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ. ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿಯಲು ಸರ್ಕಾರ ಸೂಚಿಸಿದೆ. ಅದರನ್ವಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿ ಶಂಕರ್ ಅವರು ವನ್ಯಜೀವಿ ವಿಭಾಗದ ಉಪ ಅರಣ್ಯ  ಸಂರಕ್ಷಣಾಧಿಕಾರಿ ನಾಗರಾಜ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಂತೆಯೆ ಫೆಬ್ರವರಿ … Read more