SHIMOGA| ‘ಆಯನೂರು, ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಆಗಲು ಅರ್ಹ, ವಿಧಾನಸಭೆಯಲ್ಲೂ ಚರ್ಚೆ’

Ayanuru General Image Board 1

ಶಿವಮೊಗ್ಗ ಲೈವ್.ಕಾಂ | SHIMOGA | 20 ನವೆಂಬರ್ 2019 ಆಯನೂರು ಮತ್ತು ಹೊಳೆಹೊನ್ನೂರು ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಕುರಿತು ವಿಧಾನಸಭೆಯಲ್ಲಿ ಚರ್ಚೆಯಾಗಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ ನಾಯ್ಕ ಹೇಳಿದ್ದಾರೆ. ಕೋಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ ನಾಯ್ಕ, ಬಹುವರ್ಷದ ಹಿಂದೆಯೆ ಆಯನೂರು ಪಟ್ಟಣ ಪಂಚಾಯಿತಿ ಆಗಬೇಕಿತ್ತು. ಈಗ ಆಯನುರು ಮತ್ತು … Read more

ಶಿವಮೊಗ್ಗದಲ್ಲಿ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ, ಮಹಿಳೆಯ ರಕ್ಷಣೆ, ಮಗು ಸಾವು

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019 ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೆ ಗ್ರಾಮಸ್ಥರು ಬಾವಿಗೆ ಬಿದ್ದ ತಾಯಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಾಗಲೆ ಮಗು ಜೀವ ಕಳೆದುಕೊಂಡಿದ್ದು, ತಾಯಿಯನ್ನು ರಕ್ಷಿಸಲಾಗಿದೆ. ಮಗು ಕೌಶಿಕ್ (3) ಮೃತಪಟ್ಟಿದೆ. ತಾಯಿ ಚೈತ್ರ (23) ಅವರನ್ನು ರಕ್ಷಿಸಲಾಗಿದೆ. ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌಟುಂಬಿಕ ಸಮಸ್ಯೆಯೆ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ … Read more

ಹತ್ತು ಅಕ್ರಮ ಮನೆಗಳು ನೆಲಸಮ, ತೆರವು ವೇಳೆ ನಡೆಯಿತು ಹೈಡ್ರಾಮಾ, ಪೊಲೀಸ್ ರಕ್ಷಣೆಯಲ್ಲಿ ಕಾರ್ಯಾಚರಣೆ

ಶಿವಮೊಗ್ಗ ಲೈವ್.ಕಾಂ | SHIMOGA | 22 ಅಕ್ಟೋಬರ್ 2019 ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಇವತ್ತು ತೆರವು ಮಾಡಲಾಯಿತು. ಈ ವೇಳೆ ಸ್ಥಳೀಯರ ವಿರೋಧದಿಂದಾಗಿ ಕೆಲಕಾಲ ಹೈಡ್ರಾಮಾ ನಡೆಯಿತು. ವಿರೂಪಿನಕೊಪ್ಪದ ಸರ್ವೆ ನಂಬರ್ 6ರಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹತ್ತು ಮನೆಗಳ ತೆರವು ಮಾಡಲಾಗುತ್ತಿದೆ. ಮನೆ ತೆರವು ಮಾಡಲು ಜೆಸಿಬಿ ಆಗಮಿಸುತ್ತಿದ್ದಂತೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು. ಮನೆಯಿಂದ ಹೊರಬಾರದೆ ತೆರವು ಕಾರ್ಯಾಚರಣೆಗೆ ತಡೆಯೊಡ್ಡಿದರು. ಪೊಲೀಸರು ಮಧ್ಯಪ್ರವೇಶಿಸಿ ಸ್ಥಳೀಯರನ್ನು ಮನವೊಲಿಸಿ ತೆರವು … Read more

ಶಿವಮೊಗ್ಗ ಉಸ್ತುವಾರಿ ಸಚಿವರ ಮನೆಯಲ್ಲಿ ಗಣೇಶ ಹಬ್ಬ ಜೋರು, ಕುಟುಂಬ ಸಹಿತ ಗಾಂಧಿ ಬಜಾರ್’ನಲ್ಲಿ ವಿಶೇಷ ಪೂಜೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 2 ಸೆಪ್ಟೆಂಬರ್ 2019 ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ಇವತ್ತು ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸಚಿವ ಈಶ್ವರಪ್ಪ ಮತ್ತು ಕಟುಂಬದವರು ಭಜನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದರ ವಿಡಿಯೋ ರಿಪೋರ್ಟ್ ಇಲ್ಲಿದೆ ನೋಡಿ | ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ ಮೇಲ್ | shivamoggalive@gmail.com

ಸಿಸಿಟಿಯಲ್ಲಿ ಸೆರೆಯಾಯ್ತು ತಾಲೂಕು ಕಚೇರಿಯಲ್ಲಿನ ಫೈಲ್ ಕಳ್ಳತನ, ಏನದು ಫೈಲ್? ಕದ್ದಿದ್ಯಾರು? ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಆಗಸ್ಟ್ 2019 ಪರಿಶೀಲನೆ ಹಂತದಲ್ಲಿದ್ದ ಕಡತವನ್ನು ತಹಶೀಲ್ದಾರ್ ಕಚೇರಿಯಿಂದ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ರೈತರೊಬ್ಬರ ವಿರುದ್ಧ ದೂರು ತಾಲೂಕು ಕಚೇರಿ ಶಿರಸ್ತೇದಾರ್ ದೂರು ನೀಡಿದ್ದಾರೆ. ಫೈಲ್ ಕದ್ದೊಯ್ಯುತ್ತಿರುವುದು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಶೀಲನೆ ಹಂತದಲ್ಲಿದ್ದ ಕಡತವನ್ನು, ದೇವೇಂದ್ರಪ್ಪ ಎಂಬುವವರು ಅಧಿಕಾರಿಗಳ ಗಮನಕ್ಕೆ ಬಾರದ ಹಾಗೆ, ತೆಗೆದುಕೊಂಡು ಹೋಗಿದ್ದಾರೆ. ದೇವೇಂದ್ರಪ್ಪ ಫೈಲ್ ಕೊಂಡೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಪರಿಶೀಲಿಸಿದ ಬಳಿಕ, ದೇವೇಂದ್ರಪ್ಪ ವಿರುದ್ಧ ಶಿರಸ್ತೇದಾರ್ ಕೃಷ್ಣಮೂರ್ತಿ ಅವರು ಜಯನಗರ … Read more

ಮಾಹಿತಿ ಕೊಟ್ಟರು ಬರ್ತಿಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ಪುರದಾಳು ಡ್ಯಾಂ ಕಥೆ ಏನಾಗುತ್ತೋ ಅಂತಾ ಗ್ರಾಮಸ್ಥರ ಆತಂಕ

140819 Purdal Dam Kodi at Rain 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 14 ಆಗಸ್ಟ್ 2019 ಕಳೆದ ವಾರ ಸುರಿದ ಭಾರಿ ಮಳೆ ಮತ್ತು ನೀರಿನ ರಭಸಕ್ಕೆ, ಶಿವಮೊಗ್ಗ ನಗರ ಸಮೀಪದ ಪುರದಾಳು ಗ್ರಾಮದಲ್ಲಿ ಭೂಮಿ ಕೊಚ್ಚಿ ಹೋಗಿದೆ. ಚೆಕ್ ಡ್ಯಾಂನ ಕೋಡಿ ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ನೀರು ರಭಸವಾಗಿ ಹರಿಯಲು ಆರಂಭವಾದಂತೆ ಡ್ಯಾಂ ಸಮೀಪದ ಕೋಡಿ ಕೊಚ್ಚಿ ಹೋಗುವ ಆತಂಕ ಎದುರಾಗಿತ್ತು. ಹಾಗಾಗಿ ಗ್ರಾಮಸ್ಥರು ಕೂಡಲೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಆದರೆ ಯಾರೊಬ್ಬರು ಇತ್ತ ಸುಳಿಯಲಿಲ್ಲ. ಈವರೆಗು ಅಧಿಕಾರಿಗಳು … Read more

ಸಕ್ರೆಬೈಲು ಬಿಡಾರದಲ್ಲಿ ರಕ್ತವಾಂತಿ ಮಾಡಿಕೊಂಡು ಮರಿ ಆನೆ ಸಾವು

ಶಿವಮೊಗ್ಗ ಲೈವ್.ಕಾಂ | 1 ಜುಲೈ 2019 ಸಕ್ರೆಬೈಲು ಆನೆ ಬಿಡಾರದಲ್ಲಿ ಮರಿಯಾನೆ ಸಾವನ್ನಪ್ಪಿದೆ. ಕೆಲ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮರಿ ಆನೆ, ರಕ್ತವಾಂತಿ ಮಾಡಿಕೊಳ್ಳುತ್ತಿತ್ತು. ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ, ಆನೆ ಸಾವನ್ನಪ್ಪಿದೆ. ಶಾರದ, ಮೃತ ಮರಿ ಆನೆ. ಕಳೆದ ವರ್ಷ ಹಾಸನದಲ್ಲಿ ಸೆರೆ ಹಿಡಿಯಲಾಗಿದ್ದ ಆನೆಯನ್ನು ಸಕ್ರೆಬೈಲು ಆನೆ ಬಿಡಾರದಲ್ಲಿ ಸಾಕಲಾಗುತ್ತಿತ್ತು. ‘ಆನೆಗೆ ಬಿಡಾರದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ, ಫಲಕಾರಿಯಾಗದೆ ಮೃತಪಟ್ಟಿದೆ. ಆನೆಯ ಅಂಗಾಂಗಗಳನ್ನು ಪರೀಕ್ಷೆಗೆ ಒಳಪಡಿಸಲು ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿಗೆ ಮತ್ತು ಕೇರಳದ ಪಶು … Read more