ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 26 ಸೆಪ್ಟೆಂಬರ್ 2019
ಭಗತ್ ಸಿಂಗ್ ಹುಟ್ಟುಹಬ್ಬದ ಅಂಗವಾಗಿ ಭಗತ್ ಸೇನೆ ವತಿಯಿಂದ ಸೆ.29ರಂದು ಕ್ರಾಂತಿ ಉದಯ್ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಆ ದಿನ ಬೆಳಗ್ಗೆ 9.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಂಸ್ಕಾರ ಭಾರತಿ ತಂಡದಿಂದ ಭಗತ್ ಸಿಂಗ್ ಜೀವನಾಧಾರಿತ ರಂಗ್ ದೇ ಬಸಂತಿ ಕಿರುನಾಟಕ ಪ್ರದರ್ಶನ ನಡೆಯಲಿದೆ. ಬಳಿಕ ಜಿಲ್ಲೆಯ ಯೋಧರು, ಅವರ ಕುಟುಂಬದವರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಭಗತ್ ಸೇನೆ ಸಂಸ್ಥಾಪಕ ಕೃಷ್ಣ ಶಾನುಬೋಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭವ್ಯಾ ಶಾನುಭೋಗ್, ಸಂತೋಷ್, ರಶ್ಮಿ, ಮಂಜುನಾಥ್, ಪ್ರಶಾಂತ್ ಮುಂತಾದವರು ಸುದ್ದಿಗೋಷ್ಠಿಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
