ಶಿವಮೊಗ್ಗ ಲೈವ್.ಕಾಂ | FILMI UPDATE | 16 ನವೆಂಬರ್ 2019
ಮತ್ತೆ ನಿರ್ಮಾಣವಾಗಲಿದೆ ಪ್ರೇಮಲೋಕ

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕ ಸಿನಿಮಾದ ಸೀಕ್ವೆಲ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಭಾರತೀಯ ಸಿನಿಲೋಕದಲ್ಲಿ ಟ್ರೆಂಡ್ ಸೆಟ್ ಮಾಡಿದ್ದ ಪ್ರೇಮಲೋಕದ ಪಾರ್ಟ್ 2 ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರೇಮಲೋಕ 2ನಲ್ಲಿ ರವಿಚಂದ್ರನ್ ಅವರ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಂ ಇಬ್ಬರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರವಿಚಂದ್ರನ್ ಅವರೆ ಚಿತ್ರಕ್ಕೆ ಡೈರೆಕ್ಟ್ ಮಾಡಲಿದ್ದಾರೆ.
ಒಂದೆ ಸಾಂಗಲ್ಲಿ ಕನ್ನಡದ 16 ಹೀರೋಯಿನ್ಸ್
ಬೆಂಗಳೂರು : ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದ ಹಾಡೊಂದರಲ್ಲಿ ಕನ್ನಡದ 16 ಹೀರೋಯಿನ್ಸ್ ಸ್ಟೆಪ್ಸ್ ಹಾಕಿದ್ದಾರಂತೆ. ರಚಿತಾ ರಾಮ್, ಹರಿಪ್ರಿಯಾ, ಅನುಪಮಾ ಗೌಡ, ಕೃಷಿ ತಾಪಂಡ, ಹರ್ಷಿಕಾ ಪೂಣಚ್ಚ, ಆದಿತಿ ಪ್ರಭುದೇವ, ವೈಭವಿ, ವೈನಿಧಿ, ವೈಸಿರಿ, ಕಾರುಣ್ಯ ರಾಮ್, ನಿಶ್ವಿಕಾ ನಾಯ್ಡು, ಸೋನು ಗೌಡ, ಸಂಯುಕ್ತ ಹೊರನಾಡು, ಸಿಂಧು ಲೋಕನಾಥ್, ಶುಭಾ ಪೂಂಜಾ, ರೂಪಿಕಾ, ದಿವ್ಯಾ ಉರುಡಗ, ದಿಶಾ ಪೂವಯ್ಯ ಅವರು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನವರಸ ನಾಯಕ ಜಗ್ಗೇಶ್, ಮೇಘನಾ ಗಾಂವ್ಕರ್ ಚಿತ್ರದ ಹೀರೋ, ಹೀರೋಯಿನ್. ಮುಂದಿನ ವಾರ ಸಿನಿಮಾ ರಿಲೀಸ್ ಆಗಲಿದೆ.

ಗಾನ ಕೋಗಿಲೆ ಆರೋಗ್ಯದ ಕುರಿತ ವದಂತಿ
ಮುಂಬೈ : ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಅವರ ಟ್ವಟರ್ ಖಾತೆಯಲ್ಲ ಪ್ರಕಟಿಸಲಾಗಿದೆ. ಮತ್ತೊಂದೆಡೆ ಅವರ ಆರೋಗ್ಯದ ಕುರಿತು ವದಂತಿ ಹಬ್ಬಿಸದಂತೆ ಮನವಿ ಮಾಡಲಾಗಿದೆ.

ಚಾಲೆಂಜಿಂಗ್ ಸ್ಟಾರನ್ನ ಕೊಂಡಾಡಿದ ಬಾಲಿವುಡ್ ಡೈರೆಕ್ಟರ್
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಕೊಂಡಾಡಿದ ಬಾಲಿವುಡ ನಿರ್ದೇಶಕ. ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ರೋಹಿತ್ ಶೆಟ್ಟಿ, ದರ್ಶನ್ ಅವರನ್ನ ಸಂದರ್ಶನವೊಂದರಲ್ಲಿ ಹೊಗಳಿರವ ವಿಡಿಯೋ ವೈರಲ್ ಆಗಿದೆ. ಹುಟ್ಟುಹಬ್ಬದಂದು ರಾತ್ರಿ 12 ಗಂಟೆಯಿಂದ ಮರುದಿನ ರಾತ್ರಿ 12ಗಂಟೆವರೆಗೆ ಅಭಿಮಾನಿಗಳು ಅವರಿಗೆ ಶುಭಕೋರಿದ್ದಾರೆ. ಆ ದಿನ ಅವರು ಸಾವಿರಕ್ಕೂ ಹೆಚ್ಚು ಕೇಕ್ ಕತ್ತರಿಸಿರಬೇಕು ಎಂದು ತಿಳಿಸಿದ್ದಾರೆ.

ಮಗನ ಹೆಸರು ರಿವೀಲ್ ಮಾಡಲು ಟೀಸರ್
ಬೆಂಗಳೂರು : ಸಿನಿಮಾದ ಟೀಸರ್ ಮಾದರಿಯಲ್ಲೇ ಮಗನ ಹೆಸರು ರಿವೀಲ್ ಮಾಡಲು ಟೀಸರ್ ಬಿಡುಗಡೆ ಮಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಮಕ್ಕಳ ದಿನಾಚರಣೆಯನ್ನೇ ಟೀಸರ್ ಬಿಡುಗಡೆ ಮಾಡಿ, ಹೆಸರು ಬಹಿರಂಗ. ಮಗನಿಗೆ ರಣ್’ವಿತ್ ಶೆಟ್ಟಿ ಎಂದು ನಾಮಕಾರಣ ಮಾಡಿದ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿ.
