ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 ಮಾರ್ಚ್ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಬೈಕಿನಿಂದ ಪೆಟ್ರೋಲ್ ತೆಗೆದುಕೊಂಡ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿಗೆ ಬೆಳೆದು, ಹೊಡೆದಾಟವಾಗಿದೆ. ಕೊಲೆ ಬೆದರಿಕೆಯನ್ನು ಒಡ್ಡಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸಾಗರ ತಾಲೂಕು ನೇರಲಗಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಅಣ್ಣಪ್ಪ ಅವರ ಬೈಕಿನಿಂದ ಗಣಪತಿ ಎಂಬುವವರು ಪೆಟ್ರೋಲ್ ತೆಗೆದುಕೊಂಡಿದ್ದರು. ಈ ಕುರಿತು ಅಣ್ಣಪ್ಪ ಅವರ ಸೊಸೆಗೆ ತಿಳಿಸಿದ್ದರು.
ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಅಣ್ಣಪ್ಪ ಅವರು ಮನೆಗೆ ಬಂದಾಘ ಬೈಕಿನಲ್ಲಿ ಪೂರ್ಣ ಪೆಟ್ರೋಲ್ ಖಾಲಿಯಾಗಿತ್ತು. ಈ ಸಂಬಂಧ ಗಣಪತಿ ಅವರೊಂದಿಗೆ ಅಣ್ಣಪ್ಪ ಜಗಳವಾಡಿದ್ದರು.
ಫೆ.28ರಂದು ಅಣ್ಣಪ್ಪ ಅವರು ಗಣಪತಿ ಅವರ ಮನೆಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಪುನಃ ಜಗಳವಾಗಿದೆ. ಈ ವೇಳೆ ಗಣಪತಿ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಅಣ್ಣಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.