ಶಿವಮೊಗ್ಗ ಲೈವ್.ಕಾಂ | SHIMOGA | 24 ಅಕ್ಟೋಬರ್ 2019
ಅಪಘಾತದಲ್ಲಿ ಮೃತಪಟ್ಟ ಪೇದೆಗೆ ಪರಿಹಾರ ನೀಡುವಲ್ಲಿ ವಿಫಲವಾದ ಕಾರಣ ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೆಆರ್’ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ) ಕಚೇರಿಯ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಯಿತು.

ಕೆಎಸ್ಆರ್ಪಿ ಪೇದೆ ಶಾಮ್ಸನ್ ಎಂಬುವರು 2010ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕೆಆರ್ಐಡಿಎಲ್’ಗೆ ಸೇರಿದ ವಾಹನ ಡಿಕ್ಕಿಯಾಗಿ ಶಾಮ್ಸನ್ ಮೃತಪಟ್ಟಿದ್ದರು.
2013ರಲ್ಲಿ ವಿಚಾರಣೆ ನಡೆಸಿದ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 13 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಮಾಡಿತ್ತು. ಆದರೂ ಕೆಆರ್’ಐಡಿಎಲ್ ಅಧಿಕಾರಿಗಳು ಪರಿಹಾರ ನೀಡರಲಿಲ್ಲ.
ಕುಟುಂಬಸ್ಥರು ಮತ್ತೆ ನ್ಯಾಯಾಲಯದ ಮೊರೆ ಹೋದ ಪರಿಣಾಮ ಆಸ್ತಿ ಜಪ್ತಿಗೆ ಸೂಚಿಸಿತ್ತು. ಅದರಂತೆ ಬುಧವಾರ ನ್ಯಾಯಾಲಯದ ಸಿಬ್ಬಂದಿಯೊಂದಿಗೆ ತೆರಳಿ ಕಂಪ್ಯೂಟರ್, ಖುರ್ಚಿ, ಟೇಬಲ್ ಸೇರಿ ಪೀಠೋಪಕರಣ ಜಪ್ತು ಮಾಡಲಾಯಿತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]