ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 7 AUGUST 2024 : ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಗೆಯ ಮುಖಂಡರು, ಕಾರ್ಯಕರ್ತರಿದ್ದಾರೆ (Workers). ಅದರೆ ಪಕ್ಷಕ್ಕೆ ಅಗತ್ಯವಿರುವುದು ಒಂದೇ ಬಗೆಯ ಕಾರ್ಯಕರ್ತ ಎಂದು ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ವಿಶ್ಲೇಷಿಸಿದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ತಿಳಿಯುವ ಸತ್ಯಶೋಧನಾ ಸಭೆಯಲ್ಲಿ ವಿ.ಎಸ್.ಉಗ್ರಪ್ಪ ಮಾತನಾಡಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮೂರು ಬಗೆಯ ಮುಖಂಡರು, ಕಾರ್ಯಕರ್ತರು
ಪಕ್ಷಗಳಲ್ಲಿ ಪ್ರದಕ್ಷಿಣೆ ಮಾಡುವ ಒಂದು ವರ್ಗ ಇರುತ್ತದೆ. ಮುಖ್ಯಮಂತ್ರಿ, ಸಚಿವರು, ಪ್ರಮುಖರು ಬಂದಾಗಷ್ಟೆ ಪಕ್ಷದ ಕಚೇರಿಗೆ ಭೇಟಿ ಕೊಡುತ್ತಾರೆ. ಎರಡನೇ ವರ್ಗದ ಕಾರ್ಯಕರ್ತರು ಜನರ ಜೊತೆಗೆ ಇರುತ್ತದೆ. ಜನರಿಗೆ ಕೆಲಸಗಳನ್ನು ಮಾಡಿಕೊಡುತ್ತಲೆ ಇರುತ್ತಾರೆ. ಇಂತಹ ಕಾರ್ಯಕರ್ತರು ಯಾರಿಗೂ ಗೊತ್ತಾಗುವುದಿಲ್ಲ. ಮೂರನೆ ವರ್ಗದ ಕಾರ್ಯಕರ್ತರು ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ಕೊಡುತ್ತಾರೆ ಎಂದು ವಿ.ಎಸ್.ಉಗ್ರಪ್ಪ ವಿಶ್ಲೇಷಿಸಿದರು.
ಕಾಂಗ್ರೆಸ್ಗೆ ಎಂತಹ ಕಾರ್ಯಕರ್ತರು ಬೇಕು?
ಕಾರ್ಯಕರ್ತರು ವೈಚಾರಿಕತೆ ಬೆಳೆಸಿಕೊಳ್ಳಬೇಕು. ನಾಯಕರ ಜೊತೆಗು ಇರಬೇಕು. ಜನರ ಜೊತೆಗೂ ಇರಬೇಕು. ಕೇವಲ ನಾಯಕರ ಬ್ಯಾಗ್ ಹಿಡಿದು ಓಡಾಡುವುದು, ಸಲ್ಯೂಟ್ ಹೊಡೆಯುವುದಲ್ಲ. ತಪ್ಪು ಮಾಡಿದರೆ ನಾಯಕನಿಗು ಮುಲಾಜಿಲ್ಲದೆ ಪ್ರಶ್ನೆ ಮಾಡುವ ದಮ್ಮು, ತಾಕತ್ತು ಬೆಳೆಸುಕೊಳ್ಳಬೇಕು. ಆಗ ಪಕ್ಷ ಬಲವಾಗಿ ಬೇರೂರುತ್ತದೆ ಎಂದು ಉಗ್ರಪ್ಪ ತಿಳಿಸಿದರು.