SHIVAMOGGA LIVE NEWS | 8 FEBRURARY 2023
SHIMOGA : ಚುನಾವಣೆ ಹಿನ್ನೆಲೆ ಮೂಲ ಸೌಲಭ್ಯ ಒದಗಿಸದೆ ತರಾತುರಿಯಲ್ಲಿ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು (Ashraya House) ಹಂಚಿಕೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಬಿ.ಪ್ರಸನ್ನ ಕುಮಾರ್ ಅವರು, ಕಾಮಗಾರಿ ಪೂರ್ಣಗೊಂಡ ಮೇಲೆ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ಆದರೆ ಚುನಾವಣೆ ಹಿನ್ನೆಲೆ ತರಾತುರಿಯಲ್ಲಿ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಯಿಸುತ್ತಿದ್ದಾರೆ ಎಂದರು.
ಮನೆಗಳಿಗೆ ಮೂಲ ಸೌಕರ್ಯವಿಲ್ಲ
ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ಆಶ್ರಯ ಮನೆಗಳನ್ನು (Ashraya House) ನಿರ್ಮಿಸಲಾಗುತ್ತಿದೆ. ಮೆಸ್ಕಾಂಗೆ 9 ಕೋಟಿ ರೂ. ಠೇವಣಿ ಪಾವಿತಿಸದೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ. ಈಗ 20 ಲಕ್ಷ ರೂ. ಮಾತ್ರ ಠೇವಣಿ ನೀಡಿ 28 ದಿನಗಳ ಮಟ್ಟಿಗೆ ಆಶ್ರಯ ಮನೆಗಳಿಗೆ ಸಂಪರ್ಕ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬದಲು ಬೋರ್ ಕೊರೆಸಿದ್ದಾರೆ. ತುಂಗಾ ನದಿ ನೀರು ಒದಗಿಸುವ ಬದಲು ಸ್ಥಳೀಯ ಗ್ರಾಮ ಪಂಚಾಯಿತಿಯೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಈಶ್ವರಪ್ಪ ಅವರು ಹಾರಿಕೆ ಉತ್ತರ ನೀಡಿದ್ದಾರೆ. ಮೂಲ ಸೌಲಭ್ಯ ಒದಗಿಸದೆ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಮಾಡಬಾರದು ಎಂದು ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದರು.
ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಸಿ.ನಾಯ್ಕ್, ಸದಸ್ಯ ಬಿ.ಎ.ರಮೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಶಿವಾನಂದ, ಶ್ಯಾಮಸುಂದರ್ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲಿಗೆಲ್ಲ ಭೇಟಿ ನೀಡಲಿದ್ದಾರೆ?