ಶಿವಮೊಗ್ಗ ಲೈವ್.ಕಾಂ | SHIMOGA | 14 ಮಾರ್ಚ್ 2020
ವಿಷ ಸೇವಿಸಿ ಗಂಡ, ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರದ ಬಸವನಹೊಳೆ ಬ್ಯಾರೇಜ್ ಸಮೀಪ ವಿಷ ಸೇವಿಸಿ ಮೃತರಾಗಿದ್ದಾರೆ.
ಹರೀಶ್ (35) ಮತ್ತು ಅನಿತಾ (28) ಮೃತರು. ದಂಪತಿಗಳು ನಿನ್ನೆ ಸಂಜೆ ವೇಳೆ ಬಸವನಹೊಳೆ ಬ್ಯಾರೇಜ್ ಬಳಿ ವಿಷ ಸೇವಿಸಿ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಇವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಇಬ್ಬರು ಮೃತಪಟ್ಟಿದ್ದಾರೆ.
ಹುಟ್ಟುಹಬ್ಬ ಆಚರಿಸಿಕೊಂಡು ಸಾವು
ಮಾರ್ಚ್ 13ರಂದು ಹರೀಶ್ ಅವರ ಹುಟ್ಟುಹಬ್ಬವಿತ್ತು. ಹಾಗಾಗಿ ಸಂಜೆ ಬಸವನಹೊಳೆ ಬ್ಯಾರೇಜ್ ಬಳಿಗೆ ಬಂದಿದ್ದ ದಂಪತಿ, ಕೇಕ್ ಕಟ್ ಮಾಡಿದ್ದಾರೆ. ಕೇಕ್ ಸೇವಿಸಿದ ಕೆಲವು ಕ್ಷಣದ ಬಳಿಕ ಇಬ್ಬರು ಕೆಳಗೆ ಬಿದ್ದು ಹೊರಳಾಡಲು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಷ ಸೇವನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಾಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]