ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜನವರಿ 2022
ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳವಾಗಿದೆ. ಇವತ್ತು ಜಿಲ್ಲೆಯಲ್ಲಿ 366 ಮಂದಿಗೆ ಸೋಂಕು ತಗುಲಿದೆ ಎಂದು ಶಿವಮೊಗ್ಗ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಇವತ್ತು ಪಾಸಿಟಿವ್ ಬಂದಿರುವವರ ಪೈಕಿ ಅತಿ ಹೆಚ್ಚು ಮಂದಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿಗೆ ಸೇರಿದವರಾಗಿದ್ದಾರೆ. ಶಿವಮೊಗ್ಗ ತಾಲೂಕಿನ 161 ಮಂದಿಗೆ ಸೋಂಕು ತಗುಲಿದೆ. ಇನ್ನು, ಭದ್ರಾವತಿಯ 98, ತೀರ್ಥಹಳ್ಳಿಯ 16, ಶಿಕಾರಿಪುರದ 5, ಸಾಗರದ 49, ಹೊಸನಗರದ 23, ಸೊರಬದ 8, ಹೊರ ಜಿಲ್ಲೆಯ 6 ಮಂದಿಗೆ ಸೋಂಕು ತಗುಲಿದೆ.
ಮತ್ತೊಂದೆಡೆ ಕರೋನದಿಂದ ಗುಣವಾದವರ ಸಂಖ್ಯೆ ಕೂಡ ದೊಡ್ಡದಿದೆ. ಜಿಲ್ಲೆಯಲ್ಲಿ ಇವತ್ತು 199 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ ಎಂದು ಜಿಲ್ಲಾಡಳಿತದ ವರದಿಯಲ್ಲಿ ತಿಳಿಸಲಾಗಿದೆ. ಇದು ಜಿಲ್ಲೆಯ ಜನರಲ್ಲಿ ನಿಟ್ಟುಸಿರು ಬಿಡುವ ಹಾಗೆ ಮಾಡಿದೆ.
ಈ ಮಧ್ಯೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1335ಗೆ ಏರಿಕೆಯಾಗಿದೆ. 49 ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 21 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸಿಹೆಚ್’ಸಿಯಲ್ಲಿ 36, ಟ್ರಯೇಜ್’ನಲ್ಲಿ 33 ಮಂದಿ, ಹೋಮ್ ಐಸೊಲೇಷನ್’ನಲ್ಲಿ 1196 ಮಂದಿ ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.