SHIVAMOGGA LIVE NEWS | 12 NOVEMBER 2023
SHIMOGA : ನಗರದಲ್ಲಿ ಪಟಾಕಿ (Crackers) ಮಾರಾಟ ಬಿರುಸಾಗಿದೆ. ಈ ಬಾರಿ ಒಂದೇ ಕಡೆ ಎಲ್ಲ ಮಳಿಗೆ ಸ್ಥಾಪಿಸಲಾಗಿದೆ.
ಒಂದೇ ಕಡೆ ಮಾರಾಟ
ಪ್ರತಿ ವರ್ಷ ನೆಹರು ಕ್ರೀಡಾಂಗಣ ಮತ್ತು ಸೈನ್ಸ್ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿತ್ತು. ಈ ಬಾರಿ ಒಂದೇ ಕಡೆ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಫ್ರೀಡಂ ಪಾರ್ಕ್ನಲ್ಲಿ ಸುಮಾರು 60 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಶನಿವಾರ ಸಂಜೆ ಹೊತ್ತಿಗೆ ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ ಆರಂಭಿಸಲಾಯಿತು.
ಪಟಾಕಿ ಖರೀದಿಗೆ ಜನವೋ ಜನ
ಒಂದೇ ಕಡೆ ಎಲ್ಲ ಮಳಿಗೆ ಸ್ಥಾಪಿಸಿರುವುದರಿಂದ ಜನರಿಗೆ ಪಟಾಕಿ ಆಯ್ಕೆ ಸುಲಭವಾಗಿದೆ. ಹಾಗಾಗಿ ದೊಡ್ಡ ಸಂಖ್ಯೆಯ ಜನರು ಫ್ರೀಡಂ ಪಾರ್ಕ್ಗೆ ಆಗಮಿಸಿ ಪಟಾಕಿ ಖರೀದಿಸುತ್ತಿದ್ದಾರೆ. ಬೆಳಗ್ಗೆಯಿಂದ ಅಂಗಡಿಗಳಲ್ಲಿ ವ್ಯಾಪಾರ ಬಿರುಸಾಗಿ ಸಾಗುತ್ತಿದೆ. ಮಕ್ಕಳು ಪಟಾಕಿ ಆಯ್ಕೆಯಲ್ಲಿ ಮಗ್ನರಾಗಿದ್ದಾರೆ. ವೆರೈಟಿ ಪಟಾಕಿ ಖರೀದಿ ನಡೆಯುತ್ತಿದೆ.
ವಿಶಾಲ ಪಾರ್ಕಿಂಗ್, ಹೂ, ಹಣ್ಣು ಖರೀದಿ
ಫ್ರೀಡಂ ಪಾರ್ಕ್ನಲ್ಲಿ ವಿಶಾಲ ಪಾರ್ಕಿಂಗ್ ಸ್ಥಳವಿದೆ. ಹಾಗಾಗಿ ಪಟಾಕಿ ಖರೀದಿಗೆ ಬರುವವರಿಗೆ ಪಾರ್ಕಿಂಗ್ ಕಿರಿಕಿರಿ ಇಲ್ಲದಂತಾಗಿದೆ. ಇನ್ನು, ಫ್ರೀಡಂ ಪಾರ್ಕ್ನಲ್ಲಿ ಐಸ್ ಕ್ರೀಂ ಸೇರಿದಂತೆ ತಳ್ಳು ಗಾಡಿಯಲ್ಲಿ ತಿಂಡಿ, ತಿನಿಸು ಮಾರಾಟವು ಬಿರುಸಾಗಿದೆ. ಇನ್ನೊಂದೆಡೆ ಫ್ರೀಡಂ ಪಾರ್ಕ್ ಹೊರಾಂಗಣದಲ್ಲಿ ಹೂವು, ಹಣ್ಣು ವ್ಯಾಪಾರವು ಜೋರಾಗಿದೆ.
ಸುರಕ್ಷಿತ ಕ್ರಮಗಳದ್ದೇ ಸವಾಲು
ಬೆಂಗಳೂರಿನ ಆನೆಕಲ್ನಲ್ಲಿ ಪಟಾಕಿ ದುರಂತದ ಬೆನ್ನಿಗೆ ಪಟಾಕಿ ಮಾರಾಟಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ಮೊದಲು ಪಟಾಕಿ ಅಂಗಡಿಗಳು ಒಂದರ ಪಕ್ಕದಲ್ಲಿ ಒಂದು ಇದ್ದವು. ಈ ಬಾರಿ ಪ್ರತಿ ಮಳಿಗೆ ಮಧ್ಯೆ ಜಾಗ ಖಾಲಿ ಬಿಡಲಾಗಿದೆ. ಇನ್ನು ಮಳಿಗೆಗಳಲ್ಲಿ ಅಗ್ನಿಶಾಮಕ ಸಾಧನಗಳನ್ನು ಇರಿಸಲಾಗಿದೆ.
ಮಳಿಗೆಗಳ ಮುಂದೆ ನೀರಿನ ಡ್ರಮ್ ಇರಿಸಲಾಗಿದೆ. ಆದರೆ ಕೆಲವು ಡ್ರಮ್ಗಳಲ್ಲಿ ಮಾತ್ರ ನೀರು ತುಂಬಿಸಲಾಗಿದೆ. ಬಹುತೇಕ ಫೈರ್ ಬಕೆಟ್ಗಳಲ್ಲಿ ಮಣ್ಣು ತುಂಬಿಸಿಲ್ಲ. ಇದರ ಹೊರತು ಪಟಾಕಿ ಮಳಿಗೆಗಳಲ್ಲಿ ಒಂದೇ ಕಡೆ ಸ್ಥಾಪಿಸಿರುವುದು ಗ್ರಾಹಕರಿಗೆ ಅನುಕೂಲವಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಲಕ್ಷ ಲಕ್ಷ ಮೌಲ್ಯದ ಅತ್ಯಂತ ಅಪರೂಪದ ನಾಟ ವಶ, ರಾಜ್ಯದಲ್ಲೇ ಮೊದಲು ಇಂತಹ ಪ್ರಕರಣ
