ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 22 FEBRUARY 2021
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಶಿವಮೊಗ್ಗದಲ್ಲಿ ಮನೆಗಳ್ಳತನ ಮಾಡಿ ನಾಪತ್ತೆಯಾಗಿದ್ದ ಆರೋಪಿಯೊಬ್ಬನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಚಿಕ್ಕಮಗಳೂರಿನ ರಮೇಶ್ (67) ಬಂಧಿತ. ಈತನ ವಿರುದ್ಧ ಜಯನಗರ ಠಾಣೆ ಮತ್ತು ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಮನೆಗಳ್ಳತನ ಪ್ರಕರಣ ದಾಖಲಾಗಿದೆ.
ರಮೇಶನಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 255 ಗ್ರಾಂ ಬಂಗಾರದ ಆಭರಣ, 170 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ , ವಿನೋಬನಗರ ಇನ್ಸ್ ಪೆಕ್ಟರ್ ರವಿ ಎನ್.ಎಸ್ ನೇತೃತ್ವದಲ್ಲಿ ಜಯನಗರ ಪಿಎಸ್ಐ ಕೋಮಲಾ, ಎಎಸ್‍ಐ ಸೋಮು, ಸಿಬ್ಬಂದಿಗಳಾದ ಸುಧಾಕರ್, ಆದರ್ಶ್, ಶಿವರಾಜ್ ನಾಯಕ್, ರಾಮಕೃಷ್ಣ, ರೋಷನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಶಿವಮೊಗ್ಗಕ್ಕೆ ಡಿಜಿಪಿ ಅಲೋಕ್ ಕುಮಾರ್, ಕೇಂದ್ರ ಕಾರಾಗೃಹಕ್ಕೆ ಭೇಟಿ

- ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿದ ವ್ಯಕ್ತಿ ಸಾವು, ಎರಡು ಭಾಗವಾದ ದೇಹ

- ಒಂದು ಮೆಸೇಜ್, ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹6.50 ಲಕ್ಷ ಮಾಯ, ಏನಿತ್ತು ಮೆಸೇಜ್ನಲ್ಲಿ?

- ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ಆಗಿದ್ದೇನು?

- ಅರಬಿಳಚಿ ದುರಂತ, ಭದ್ರಾ ನಾಲೆಯಲ್ಲಿ ಎರಡನೇ ಮೃತದೇಹ ಪತ್ತೆ

About The Editor
ನಿತಿನ್ ಆರ್.ಕೈದೊಟ್ಲು






