ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
BHADRAVATHI NEWS, 28 SEPTEMBER 2024 : ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಅಪಹರಣಕ್ಕೆ (Abduct) ವಿಫಲ ಯತ್ನವಾಗಿದೆ. ಭದ್ರಾವತಿ ಪಟ್ಟಣದ ಎಪಿಎಂಸಿ ಮಾರ್ಕೆಟ್ ಸಮೀಪ ಘಟನೆ ಸಂಭವಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಹತ್ತು ವರ್ಷದ ವಿದ್ಯಾರ್ಥಿನಿ (ಹೆಸರು ಗೌಪ್ಯ) ಶಾಲೆ ಮುಗಿಸಿ ಆಟೋದಲ್ಲಿ ಸಂಜೆ ಮನೆಗೆ ಮರಳಿದ್ದಳು. ಆಟೋ ಇಳಿದು ಮನೆಯತ್ತ ತೆರಳುತ್ತಿದ್ದಂತೆ ಬೈಕ್ನಲ್ಲಿ ಬಂದ ಅಪರಿಚಿತ, ನಿಮ್ಮ ಅಪ್ಪ ಸರ್ಕಲ್ಗೆ ಬಿಡಲು ತಿಳಿಸಿದ್ದಾರೆ ಎಂದು ಕರೆದೊಯ್ಯಲು ಯತ್ನಿಸಿದ್ದಾನೆ. ಬಾಲಕಿ ಬರಲು ಒಪ್ಪದಿದ್ದಾಗ ಚಾಕ್ಲೇಟ್ ಕೊಡಿಸುತ್ತೇನೆ ಎಂದು ಆಕೆಯ ಕೈ ಹಿಡಿದು ಎಳದೊಯ್ಯಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಅಪರಿಚಿತನಿಂದ ತಪ್ಪಿಸಿಕೊಂಡು ಮನೆಗೆ ಬಂದ ಬಾಲಕಿ ವಿಷಯ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಿಡ್ನಾಪ್ಗೆ ಯತ್ನಿಸಿದವರ ಕೆನ್ನೆಯ ಮೇಲೆ ಮಚ್ಚೆ ಇತ್ತು ಎಂದು ಉಲ್ಲೇಖಿಸಲಾಗಿದೆ. ಬಾಲಕಿಯ ತಂದೆಯ ದೂರಿನ ಹಿನ್ನೆಲೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಗ್ಯಾರಂಟಿ ಯೋಜನೆ, ಶಿವಮೊಗ್ಗದಲ್ಲಿ ಮಹತ್ವದ ಮೀಟಿಂಗ್ಗೆ ದಿನಾಂಕ ಫಿಕ್ಸ್