ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JANUARY 2021
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗೆ ಟಿಸಿ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ, ಐದು ಸಾವಿರ ರೂ. ಲಂಚ ಪಡೆಯುತ್ತಿದ್ದ ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಬ್ಬರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಮೆಸ್ಕಾಂನ ಹೊಳೆಹೊನ್ನೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್.ಪ್ರಕಾಶ್, ಎಸಿಬಿ ಬಲೆಗೆ ಬಿದ್ದವರು. ಇವತ್ತು ಮಧ್ಯಾಹ್ನ ಪ್ರಕಾಶ್ ಅವರು ಐದು ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಲಾಗಿದೆ. ಹೊಳೆಹೊನ್ನೂರು ಉಪ ವಿಭಾಗ ಕಚೇರಿಯಲ್ಲೇ ದಾಳಿ ನಡೆಸಲಾಗಿದೆ.
ಎಸಿಬಿಯ ಪೂರ್ವ ವಲಯ ಎಸ್‍ಪಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಲೋಕೇಶ್ ನೇತೃತ್ವದಲ್ಲಿ, ಇನ್ಸ್ ಪೆಕ್ಟರ್ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ ಎನ್.ಕೆ., ರಘುನಾಯ್ಕ, ನಾಗರಾಜ, ಸುರೇಂದ್ರ, ಯೋಗೇಶಪ್ಪ, ಹರೀಶ್, ಶ್ರೀನಿವಾಸ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಸಿದ್ಲೀಪುರದಲ್ಲಿ ವೈಭವದ ಬ್ರಹ್ಮರಥೋತ್ಸವ, ಏನೇನೆಲ್ಲ ಪೂಜೆಗಳು ನೆರವೇರಿದವು?

- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

- ಶಿವಮೊಗ್ಗದ JNN ಕಾಲೇಜು ವಿದ್ಯಾರ್ಥಿಗಳು ಚಾಂಪಿಯನ್ಸ್, ಯಾವ್ಯಾವ ಸ್ಪರ್ಧೆಗಳಲ್ಲಿ ಯಾರೆಲ್ಲ ಗೆದ್ದಿದ್ದಾರೆ?

- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

About The Editor
ನಿತಿನ್ ಆರ್.ಕೈದೊಟ್ಲು






