ಶಿವಮೊಗ್ಗ ಲೈವ್.ಕಾಂ | 19 ಮೇ 2019
ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜು ಬಳಿ ಸವಳಂಗ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಸುನೈನಾ (18) ಮೃತ ವಿದ್ಯಾರ್ಥಿನಿ. ಬೆಳಗ್ಗೆ ಟ್ಯೂಷನ್ ಮುಗಿಸಿಕೊಂಡು ಸ್ನೇಹಿತೆಯ ಮನೆಗೆ ಪುಸ್ತಕ ಕೊಡಲು ಬೈಕ್’ನಲ್ಲಿ ತೆರಳುವಾಗ ಘಟನೆ ನಡೆದಿದೆ. ಎದುರಿನಿಂದ ಬಂದ ಬೊಲೆರೊ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಸುನೈನಾ ಚಲಾಯಿಸುತ್ತಿದ್ದ ಬೈಕ್ ಎರಡು ಭಾಗವಾಗಿದೆ. ಬೊಲೆರೋದ ಮುಂದಿನ ಗಾಜು ಪುಡಿ ಪುಡಿಯಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ, ಸ್ಥಳೀಯರು ಸುನೈನಾಳನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಮಾರ್ಗ ಮಧ್ಯೆ ಸುನೈನಾ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ. ಸುನೈನಾ, ನಗರದ ಚನ್ನಪ್ಪ ಲೇಔಟ್ ನಿವಾಸಿ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]