SHIVAMOGGA LIVE NEWS | 21 NOVEMBER 2022
THIRTHAHALLI | ಮಂಗಳೂರು ಸ್ಪೋಟ (Mangaluru Blast) ಪ್ರಕರಣದಲ್ಲಿ ತೀರ್ಥಹಳ್ಳಿಯ ಶಾರಿಕ್ ಎಂಬಾತನಿಗೆ ಶೇ.40ರಷ್ಟು ಸುಟ್ಟ ಗಾಯವಾಗಿದೆ. ಶಂಕಿತ ಶಾರಿಕ್ ಗಾಗಿ ಪೊಲೀಸರು, ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಇಲಾಖೆ ಅಧಿಕಾರಿಗಳು ಶೋಧ ಮಾಡುತ್ತಿದ್ದರು.
(Mangaluru Blast)
ಈತ ವಿಧ್ವಂಸಕರ ಜೊತೆ ಸೇರಿ ಕುಕೃತ್ಯ ನಡೆಸುವ ಸದ್ಯತೆ ಇತ್ತು. ಇದೆ ಕಾರಣಕ್ಕೆ ತೀರ್ಥಹಳ್ಳಿಯ ಶಾರಿಕ್ ಪೊಲೀಸರ ಪಾಲಿಗೆ ಮೋಸ್ಟ್ ವಾಂಟೆಡ್ ಆಗಿದ್ದ.
ಯಾರಿವನು ಶಾರಿಕ್? ಇವನ ಹಿನ್ನೆಲೆ ಏನು?
ಶಾರಿಕ್ ಮೂಲತಃ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವನು. ಶಾಲಾ ವಿದ್ಯಭ್ಯಾಸದ ನಂತರ ಮಂಗಳೂರಿಗೆ ತೆರಳಿ ನೆಲೆಸಿದ್ದ. ತಾಯಿ ತೀರಿಕೊಂಡಿದ್ದರಿಂದ ಶಾರಿಕ್ ತಂದೆ ಮರು ವಿವಾಹವಾಗಿದ್ದರು. ಸ್ವಲ್ಪ ಸಮಯದ ಬಳಿಕ ಶಾರಿಕ್ ಮಂಗಳೂರಿನಿಂದ ತೀರ್ಥಹಳ್ಳಿಗೆ ಬಂದು ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ.
(Mangaluru Blast)
2020ರ ನವೆಂಬರ್ ತಿಂಗಳ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಮೊಹಮ್ಮದ್ ಶಾರಿಕ್ ಪ್ರಮುಖ ಆರೋಪಿಯಾಗಿದ್ದ. ಲಷ್ಕರ್-ಎ-ತೊಯ್ಬ ಉಗ್ರ ಸಂಘಟನೆ ಪರವಾಗಿ ಗೋಡೆ ಬರಹ ಬರೆದಿದ್ದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ತನಿಖೆ ನಡೆಸಿದ್ದ ಪೊಲೀಸರು ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್, ಆತನ ಸಹವರ್ತಿ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಜ್ ಮುನೀರ್ ಅಹಮ್ಮದ್ ಎಂಬಾತನನ್ನು ಬಂಧಿಸಿದ್ದರು. ಇವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳು ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಆರೋಪಿಗಳಿಗೆ ಜಾಮೀನು ಲಭಿಸಿತ್ತು.
(Mangaluru Blast)
2022ರ ಆಗಸ್ಟ್ ತಿಂಗಳಲ್ಲಿ ಸಾರ್ವಕರ್ ಫ್ಲೆಕ್ಸ್ ವಿವಾದದ ಬೆನ್ನಿಗೆ ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿಯಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಮೊಹಮ್ಮದ್ ಶಾರಿಕ್ ಹೆಸರು ಮುನ್ನಲೆಗೆ ಬಂದಿತ್ತು. ತನಿಖೆ ನಡೆಸಿದಾಗ ಶಿವಮೊಗ್ಗದಲ್ಲಿ ಬಾಂಬ್ ತಯಾರಿ, ಪ್ರಯೋಗಿಕ ಸ್ಪೋಟ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಶಾರಿಕ್ ಸಹಚರರಾದ ತೀರ್ಥಹಳ್ಳಿಯ ಮಾಜ್ ಮುನೀರ್ ಅಹಮ್ಮದ್ ಮತ್ತು ಶಿವಮೊಗ್ಗದ ಸಯ್ಯದ್ ಯಾಸೀನ್ ಎಂಬಾತನನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಶಾರಿಕ್ ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.
ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಉಗ್ರ ಸಂಘಟನೆಯಿಂದ ಮೊಹಮ್ಮದ್ ಶಾರಿಕ್ ಪ್ರಭಾವಿತನಾಗಿದ್ದ ಎಂದು ಹೇಳಲಾಗುತ್ತಿದೆ. ತೀರ್ಥಹಳ್ಳಿಯ ಮತೀನ್ ಅಹಮ್ಮದ್ ತಾಹ ಎಂಬಾತನ ಸಹಚರ ಎಂದು ಶಂಕಿಸಲಾಗಿದೆ. ತಲೆಮರೆಸಿಕೊಂಡಿರುವ ಮತೀನ್ ಅಹಮ್ಮದ್ ಐಎಸ್ಐಎಸ್ ಸಂಘಟನೆಯಿಂದ ಪ್ರಭಾವಿತನಾಗಿದ್ದ. ಸಂಘಟನೆಯ ಅಲ್ ಹಿಂದ್ ಘಟಕದ ಪ್ರಮುಖ ಸದಸ್ಯನಾಗಿದ್ದಾನೆ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಅಲ್ ಹಿಂದ್ ಘಟಕ ಸಕ್ರಿಯವಾಗಿದೆ. ಇದೆ ಘಟಕದ ಭಾಗವಾಗಿ ಮೊಹಮ್ಮದ್ ಶಾರಿಕ್ ಕೆಲಸ ಮಾಡುತ್ತಿದ್ದ ಎಂಬ ಅನುಮಾನವಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ | ಮಂಗಳೂರು ಸ್ಪೋಟ – ತೀರ್ಥಹಳ್ಳಿಯಲ್ಲಿ ಪರಿಶೀಲನೆ, ಹಲವರ ವಿಚಾರಣೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.