SHIVAMOGGA LIVE NEWS | 3 APRIL 2024
SHIMOGA : ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರವಾಗಿ ಇಬ್ಬರು ಆಟೋ ಚಾಲಕರ ಮಧ್ಯೆ ಗಲಾಟೆಯಾಗಿ, ಒಬ್ಬ ಚಾಲಕನ ಮೂಗಿಗೆ ಡಿಚ್ಚಿ ಹೊಡೆದು ಗಾಯಗೊಳಿಸಲಾಗಿದೆ. ಗಾಯಾಳು ಚಾಲಕ ನಗರದ ಸರ್ಜಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಸರ್ಜಿ ಆಸ್ಪತ್ರೆ ಸಮೀಪ ನಿಲ್ದಾಣದಲ್ಲಿ ಸುಜಿತ್ ಆಟೋ ನಿಲ್ಲಿಸಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಇನ್ನೊಂದು ಆಟೋದ ಚಾಲಕ ಪ್ರಯಾಣಿಕರನ್ನು ಕೆಳಗಿಳಿಸಿ, ಮತ್ತೊಬ್ಬ ಪ್ರಯಾಣಿಕನನ್ನು ಹತ್ತಿಸಿಕೊಂಡಿದ್ದ. ನಿಲ್ದಾಣದ ಬಳಿಗೆ ಬೇರೆಡೆಯಿಂದ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಸರಿಯಲ್ಲ ಎಂದು ಸುಜಿತ್ ಆಕ್ಷೇಪಿಸಿದ್ದರು. ಇದರಿಂದ ಆಕ್ರೋಶಗೊಂಡ ಮತ್ತೊಂದು ಆಟೋದ ಚಾಲಕ ಸುಜಿತ್ನನ್ನು ಅಡ್ಡಗಟ್ಟಿ ಮುಖಕ್ಕೆ ಡಿಚ್ಚಿ ಹೊಡೆದಿದ್ದು, ರಕ್ತಸ್ರಾವವಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ತುಂಗಾ ನದಿಯಲ್ಲಿ ಮೂವರು ಬಾಲಕರು ನೀರು ಪಾಲು