SHIVAMOGGA LIVE NEWS | 15 MARCH 2024
ತಮಿಳ್ ತಾಯ್ ಸಮುದಾಯ ಭವನದ ಮುಂದೆ ಬೈಕ್ ನಾಪತ್ತೆ
SHIMOGA : ಚಿಟ್ ಫಂಡ್ ಹಣ ಕಲೆಕ್ಷನ್ಗೆಂದು ತಮಿಳು ತಾಯ್ ಸಮುದಾಯದ ಭವನದ ಒಳಗೆ ಹೋಗಿ ಬರುವಷ್ಟರಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯ ಡೆವಲಪ್ಮೆಂಟ್ ಆಫೀಸರ್ ಶಿವಕುಮಾರ್ ಎಂಬುವವರ ಬೈಕ್ ಕಳ್ಳತನವಾಗಿದೆ. ಶಿವಕುಮಾರ್ ಅವರು ಮಾ.1ರಂದು ಸಮುದಾಯ ಭವನದ ಎದುರು ಸ್ಪ್ಲೆಂಡರ್ ಪ್ಲಸ್ ಬೈಕ್ ನಿಲ್ಲಿಸಿ ಒಳಗೆ ಹೋಗಿದ್ದರು. ಸಂಸ್ಥೆಯ ಹಣ ಪಡೆದು ಮರಳಿದಾಗ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಿ ನಂತರ ವಿನೋಬನಗರ ಠಾಣೆಗೆ ದೂರು ನೀಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೊಬೈಲ್ ಫೋನ್ಗಾಗಿ ಭರ್ಚಿ, ಬಿಯರ್ ಬಾಟಲಿಯಿಂದ ಹಲ್ಲೆ
SHIMOGA : ಮೊಬೈಲ್ ಫೋನ್ ವಿಚಾರವಾಗಿ ಯುವಕರ ಮಧ್ಯೆ ಗಲಾಟೆಯಾಗಿದ್ದು ಭರ್ಚಿ, ಬಿಯರ್ ಬಾಟಲ್ಗಳಿಂದ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಶಿವಮೊಗ್ಗದ ಪಿ ಅಂಡ್ ಟಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ಪುನಿತ್ ಎಂಬಾತನ ಮೊಬೈಲ್ ಫೋನ್ ಅನ್ನು ಮತ್ತೊಬ್ಬ ಸ್ನೇಹಿತ ತೆಗೆದುಕೊಂಡು ಕೊಡದೆ ಸತಾಯಿಸುತ್ತಿದ್ದ. ಈ ವಿಚಾರನ್ನು ಪುನೀತ್ ತನ್ನ ಸ್ನೇಹಿತ ಸಂಜಯ್ಗೆ ತಿಳಿಸಿದ್ದ. ಮತ್ತೊಬ್ಬ ಸ್ನೇಹಿತನಿಗೆ ಫೋನ್ ಮಾಡಿದ ಸಂಜಯ್ ಮೊಬೈಲ್ ಹಿಂತಿರುಗಿಸುವಂತೆ ಸೂಚಿಸಿದ್ದ. ಇದೇ ವಿಚಾರವಾಗಿ ಮೊಬೈಲ್ ಕಸಿದುಕೊಂಡಿದ್ದ ಸ್ನೇಹಿತ ಸೇರಿ ಐವರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚಿರಾಗ್, ಸಂಜಯ್, ಮಂಜುನಾಥ ಸಿಂಗ್, ಸಂದೀಪ್ ಎಂಬುವವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್, ಎಫ್ಐಆರ್ನಲ್ಲಿ ಏನಿದೆ? ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ ಏನು?