ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 NOVEMBER 2023
THIRTHAHALLI : ಟೆಲಿಗ್ರಾಂನಲ್ಲಿ ರಾತ್ರಿ ಬಂದ ಮೆಸೇಜ್‌ನಿಂದ ಇಂಜಿನಿಯರ್ (engineer) ಒಬ್ಬರು 93 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಜಿನಿಯರ್ ಒಬ್ಬನ (ಹೆಸರು ಗೌಪ್ಯ) ಟೆಲಿಗ್ರಾಂಗೆ ನ.4ರಂದು A DAILY TASKS ಎಂಬ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಟಾಸ್ಕ್‌ಗಳನ್ನು ಪೂರೈಸುವ ಪಾರ್ಟ್ ಟೈಮ್ ಉದ್ಯೋಗ ಎಂದು ನಂಬಿಸಿ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಗೂಗಲ್ ರಿವ್ಯೂಸ್ ಎಂದು ತಿಳಿಸಿ ಮೊದಲ ದಿನ 300 ರೂ.ಗಳನ್ನು ಇಂಜಿನಿಯರ್ (engineer) ಖಾತೆಗೆ ವರ್ಗಾಯಿಸಿದರು.
ಇದನ್ನೂ ಓದಿ- ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಸರ್ಕಲ್‌ನಲ್ಲಿ ಬೃಹತ್ ಗುಂಡಿ, ರಸ್ತೆ ತುಂಬೆಲ್ಲ ಹರಡಿದೆ ಜೆಲ್ಲಿ, ಎಲ್ಲಿ ಇದು?
ನಂತರ ಪ್ರೀಪೇಡ್ ಟಾಸ್ಕ್ ಎಂದು 1 ಸಾವಿರ ರೂ. ಹಾಕಿಸಿಕೊಂಡಿದ್ದು 1300 ರೂ. ಹಣವನ್ನು ಇಂಜಿನಿಯರ್‌ಗೆ ವರ್ಗಾಯಿಸಿದ್ದರು. ಒಮ್ಮೆ 3 ಸಾವಿರ ರೂ. ಹಣ ಹಾಕಿಸಿಕೊಂಡಿದ್ದು ಟಾಸ್ಕ್ ಪೂರೈಸಿದರು ಹಣ ಮರಳಿಸಲಿಲ್ಲ. ಹೆಚ್ಚು ಟಾಸ್ಕ್‌ಗಳನ್ನು ಪೂರೈಸಿದರೆ ಒಟ್ಟಿಗೆ ಹಣ ಹಿಂತಿರುಗಿಸುವುದಾಗಿ ನಂಬಿಸಿ 93 ಸಾವಿರ ರೂ. ಹಣ ಹಾಕಿಸಿಕೊಂಡು ವಂಚಿಸಲಾಗಿದೆ.
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





