ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಜಿಲ್ಲೆಯ ವಿವಿಧೆಡೆ ಪೊಲೀಸರು ದಿಢೀರ್ ಏರಿಯಾ ಡಾಮಿನೇಷನ್ (Area Domination) ವಿಶೇಷ ಗಸ್ತು ನಡೆಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು 71 ಲಘು ಪ್ರಕರಣ ದಾಖಲು ಮಾಡಿದ್ದಾರೆ.
ಎಲ್ಲೆಲ್ಲಿ ನಡೆಯಿತು ವಿಶೇಷ ಗಸ್ತು?
ಶಿವಮೊಗ್ಗದ ಎಂ.ಕೆ.ಕೆ ರಸ್ತೆ, ಭರ್ಮಪ್ಪ ನಗರ, ಕ್ಲಾರ್ಕ್ ಪೇಟೆ, ಶೇಷಾದ್ರಿ ಪುರಂ, ಕೋಟೆ ರಸ್ತೆ, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆ, ಪದ್ಮ ಟಾಕೀಸ್ ಹತ್ತಿರ, ಬೊಮ್ಮನಕಟ್ಟೆ, ಶಿವಮೂರ್ತಿ ವೃತ್ತ, ತಿಲಕ್ ನಗರ, ರಾಗಿಗುಡ್ಡ.
ಇದನ್ನೂ ಓದಿ – ಶಿವಮೊಗ್ಗದ ಮದುವೆ ರಿಸೆಪ್ಷನ್ನಲ್ಲಿ RCB ಪಂದ್ಯ ಲೈವ್, ಕುಣಿದು ಕುಪ್ಪಳಿಸಿದ ನೆಂಟರು, ಇಷ್ಟರು
ಶಿಕಾರಿಪುರ ಟೌನ್, ಸಂತೆ ಮಾರ್ಕೆಟ್, ಅಂಬರಗೊಪ್ಪ, ಸೊರಬದ ಆನವಟ್ಟಿ, ಸಾಗರದ ಉಪ್ಪಾರ ಕೇರಿ, ಜನ್ನತ್ ನಗರ, ಚೈನಾ ಗೇಟ್, ಕಾರ್ಗಲ್, ಯಡೆಹಳ್ಳಿ, ಆನಂದಪುರ ಮತ್ತು ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ವಿಶೇಷ ಗಸ್ತು ನಡೆಸಲಾಯಿತು. ಆಯಾ ಠಾಣೆಯ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ಗಳು, ಸಿಬ್ಬಂದಿ ವಿಶೇಷ ಗಸ್ತಿನಲ್ಲಿ ಪಾಲ್ಗೊಂಡಿದ್ದರು.