ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 1 ಮಾರ್ಚ್ 2022
ಮನೆಯ ಕಣದಲ್ಲಿ ಒಣಗಿಸಲು ಹಾಕಿದ್ದ ಅಡಕೆ ರಾತ್ರೋರಾತ್ರಿ ನಾಪತ್ತೆ ಆಗಿದೆ. 1.50 ಲಕ್ಷ ಮೌಲ್ಯದ ಅಡಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಗರ ತಾಲೂಕು ಯಲಗಳಲೆ ಗ್ರಾಮದ ನಾಗರಾಜ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ತಮ್ಮ ತೋಟದಲ್ಲಿ ಬೆಳೆದ ಸಿಪ್ಪೆಗೋಟು ಅಡಕೆಯನ್ನು ಅವರು ಮನೆ ಹಿಂಭಾಗದ ಕಣದಲ್ಲಿ ಒಣಗಿಸಿದ್ದರು.
ಕಳೆದ ಶುಕ್ರವಾರ ಸಂಜೆ ಒಣಗಿಸಿದ್ದ ಅಡಕೆಯನ್ನ ನಾಗರಾಜ ಅವರು ನೋಡಿಕೊಂಡು ಬಂದಿದ್ದರು. ಅದನ್ನು ಸರಿ ಮಾಡಿಟ್ಟು ಬಂದಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಅಷ್ಟೂ ಅಡಕೆ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದರೂ ಅಡಕೆಯ ಸುಳಿವು ಸಿಕ್ಕಿಲ್ಲ.
ಕಳುವಾದ ಅಡಕೆಯ ಮೌಲ್ಯದ ಸುಮಾರು 1.50 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಆಗುಂಬೆ | ಒಂದೂವರೆ ಕ್ವಿಂಟಾಲ್ ಅಡಕೆ ಕದ್ದವನು ಅರೆಸ್ಟ್
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





