ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 20 ಫೆಬ್ರವರಿ 2022
ಮಹಿಳೆಯೊಬ್ಬರು ಸ್ನಾನ ಮಾಡುವಾಗ ಬಾತ್ ರೂಂ ವೆಂಟಿಲೇಟರ್’ನಿಂದ ಕದ್ದು ನೋಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರಿಬ್ಬರು ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಕೊಲೆ ಮಾಡುವುದಾಗಿಯು ಬೆದರಿಕೆ ಒಡ್ಡಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರದಲ್ಲಿ ಗುರುವಾರ ಬೆಳಗ್ಗೆ ಘಟನೆ ಸಂಭವಿಸಿದೆ. ಮಹಿಳೆ ಸ್ನಾನ ಮಾಡುವಾಗ ಸಯ್ಯದ್ ಹುಸೇನ್ ಎಂಬಾತ ಕದ್ದು ನೋಡಿದ್ದಾನೆ. ಇದನ್ನು ಅರಿತ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದವರು ಸಯ್ಯದ್ ಹುಸೇನ್’ನನ್ನು ಹಿಡಿದು, ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.
ಮಚ್ಚು ಹಿಡಿದು ಬಂದರು
ಸಯ್ಯದ್ ಹುಸೇನ್, ಸಯ್ಯದ್ ಇಮ್ರಾನ್ ಇಬ್ಬರು ಶುಕ್ರವಾರ ರಾತ್ರಿ ಮಹಿಳೆ ಮನೆ ಬಳಿಗೆ ಬಂದು ಜಗಳವಾಡಿದ್ದಾರೆ. ಮಹಿಳೆ ಮಗ ಮನೆಯಿಂದ ಹೊರ ಬಂದು ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ.
ಮಹಿಳೆಯ ಮಗನ ಕಿವಿ, ಎಡಗೈ ಹೆಬ್ಬರಳಿಗೆ ಗಾಯವಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ | ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಡಬಲ್ ಮರ್ಡರ್
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






