SHIVAMOGGA LIVE NEWS | 15 ಮಾರ್ಚ್ 2022
ಹೊಟ್ಟೆ ಬಿರಿಯುವ ಹಾಗೆ ಮಾಂಸದೂಟ ಮಾಡಿ ಯುವಕರ ಗುಂಪು ಬಿಲ್ ಕೇಳಿದಾಗ ಜಗಳ ಶುರು ಮಾಡಿ ಹೊಟೇಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಡುಗೆ ಭಟ್ಟನ ಮುಖದ ಮೇಲೆ ಬಾಣೆಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಎರಚಿದ್ದಾರೆ.
ಭದ್ರಾವತಿಯ ಜನ್ನಾಪುರದಲ್ಲಿ ಘಟನೆ ಸಂಭವಿಸಿದೆ. ಮಿಲ್ಟ್ರಿ ಹೊಟೇಲ್ ಒಂದರಲ್ಲಿ ಹೊಟ್ಟೆ ಬಿರಿಯುವ ಹಾಗೆ ಮಾಂಸದ ಊಟ ಮಾಡಿದ ಯುವಕರ ಗುಂಪು, ಬಿಲ್ ಕೇಳಿದಾಗ ಗಲಾಟೆ ಶುರು ಮಾಡಿದ್ದಾರೆ.
ಮಾಲೀಕನ ಮೇಲೆ ಹಲ್ಲೆ
ಜನ್ನಾಪುರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಮಿಲ್ಟ್ರಿ ಹೊಟೇಲ್ ಒಂದರಲ್ಲಿ ಘಟನೆ ಸಂಭವಿಸಿದೆ. ಬಿಲ್ ಕೇಳಿದ ಹೊಟೇಲ್ ಕೆಲಸಗಾರ ಸುರೇಶ್ ಮೇಲೆ ಮೊದಲಿಗೆ ಹಲ್ಲೆ ನಡೆಸಲಾಗಿದೆ. ಮಧ್ಯ ಪ್ರವೇಶ ಮಾಡಿದ ಹೊಟೇಲ್ ಮಾಲೀಕ ಲೋಹಿತ್ ಕುಮಾರ್’ಗೂ ಯುವಕರು ಥಳಿಸಿದ್ದಾರೆ.
ಭಟ್ಟನ ಮುಖಕ್ಕೆ ಬಿಸಿ ಎಣ್ಣೆ
ಗಲಾಟೆ ಬಿಡಿಸಲು ಹೋದ ಅಡುಗೆ ಭಟ್ಟನಿಗೂ ಯುವಕರ ಗುಂಪು ಥಳಿಸಿದೆ. ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಅಡುಗೆ ಭಟ್ಟ ಮನೋಜ್ ಕುಮಾರ್ ಮುಖದ ಮೇಲೆ ಎರಚಲಾಗಿದೆ. ಕಣ್ಣು ಸೇರಿದಂತೆ ಹಲವು ಭಾಗಕ್ಕೆ ಹಾನಿಯಾಗಿದೆ. ಮನೋಜ್ ಕುಮಾರ್’ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗ್ಲಾಸ್ ಪೀಸ್ ಪೀಸ್
ಹೊಟೇಲ್’ನಿಂದ ಹೊರಗೆ ಬಂದ ಯುವಕರ ಗುಂಪು, ಕಲ್ಲು ತೂರಾಟ ಮಾಡಿದೆ. ಹೊಟೇಲ್’ನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಯುವಕರು ಗುಂಪು ಹೊಟೇಲ್ ಗಾಜುಗಳನ್ನು ಪುಡಿಗಟ್ಟುವ ವಿಡಿಯೋ ವೈರಲ್ ಆಗಿದೆ.
ಘಟನೆ ಸಂಬಂಧ ಮೂವರನ್ನು ಬಂಧಸಲಾಗಿದೆ. ಉಳಿದವರಿಗೆ ಶೋಧ ಕಾರ್ಯ ನಡೆಯುತ್ತಿದೆ. ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200