ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019
ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಕರೆ ಮಾಡಿದ ವಂಚಕನೊಬ್ಬ, ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ 50 ಸಾವಿರ ರೂ. ಪಂಗನಾಮ ಹಾಕಿದ್ದಾನೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬ್ಯಾಂಕ್ ಅಧಿಕಾರಿ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬ, ಹಸೂಡಿ ಗ್ರಾಮದ ಎ.ಎನ್.ಬೆಳ್ಳಯ್ಯ ಎಂಬುವವರನ್ನು ವಂಚಿಸಿದ್ದಾನೆ.
ಎಟಿಎಂ ಕಾರ್ಡ್ ಅವಧಿ ಮುಗಿದಿದೆ. ಅದನ್ನು ಕೂಡಲೇ ನವೀಕರಣ ಮಾಡಿಸಿಕೊಳ್ಳಿ. ಇದಕ್ಕಾಗಿ ಮೊಬೈಲ್’ಗೆ ಬರುವ ಒಟಿಪಿ ಪಿನ್ ನಂಬರ್ ಹೇಳುವಂತೆ ತಿಳಿಸಿದ್ದಾನೆ. ವಂಚಕನ ಮಾತು ನಂಬಿದ ಬೆಳ್ಳಯ್ಯ ಒಟಿಪಿ ನಂಬರ್ ನೀಡಿದ್ದಾರೆ. ಕೆಲವೇ ಕ್ಷಣದಲ್ಲಿ ಬೆಳ್ಳಯ್ಯ ಅವರ ಬ್ಯಾಂಕ್ ಖಾತೆಯಿಂದ 50,327 ರೂ. ಹಣ ಮಾಯವಾಗಿದೆ.
ಆನ್’ಲೈನ್ ಮೂಲಕ ಬೆಳ್ಳಯ್ಯ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದ್ದು, ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]