ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಫೆಬ್ರವರಿ 2022
ಪ್ರಕರಣ ಒಂದರ ಸಾಕ್ಷಿ ಹೇಳಲು ಶಿವಮೊಗ್ಗದ ನ್ಯಾಯಾಲಯಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಮರ್ಮಾಂಗಕ್ಕೆ ಒದ್ದು ರಾಜಿ ಮಾಡಿಕೊಳ್ಳುವಂತೆ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹನುಮಂತಪ್ಪ ಎಂಬುವವರ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಮಂಗಳವಾರ ಹನುಮಂತಪ್ಪ ಅವರು ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ಸಂದರ್ಭ ನಾಗರಾಜ, ಕಿರಣ, ಸೂರ್ಯ ಎಂಬುವವರು ಹನುಮಂತಪ್ಪ ಅವರ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ ನಡೆಸಿದ್ದರೆ ಎಂದು ಆರೋಪಿಸಲಾಗಿದೆ.
ಮರ್ಮಾಂಗಕ್ಕೆ ಒದ್ದು ಈ ಪ್ರಕರಣದಲ್ಲಿ ರಾಜಿ ಆಗಬೇಕು ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಹನುಮಂತಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.
ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕಂಡು ತನಿಖೆ ನಡೆಸುತ್ತಿದ್ದಾರೆ.