SHIVAMOGGA LIVE NEWS | 3 ಮಾರ್ಚ್ 2022
ಸಾಕು ನಾಯಿ ಕರೆದುಕೊಂಡು ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಗೋಪಾಳದ ಪದ್ಮಾ ಟಾಕೀಸ್ ಬಳಿ ಇಂದು ಸಂಜೆ ಘಟನೆ ಸಂಭವಿಸಿದೆ. ಸ್ಥಳೀಯರಾದ ವೆಂಕಟೇಶ್ ಅವರ ಮೇಲೆ ಹಲ್ಲೆಯಾಗಿದೆ. ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೇಗಾಯ್ತು ಘಟನೆ?
ವೆಂಕಟೇಶ್ ಅವರು ತಮ್ಮ ಮನೆ ಪಕ್ಕದ ಸರ್ಕಾರಿ ಶಾಲೆ ಬಳಿ ಸಾಕು ನಾಯಿ ಕರೆದುಕೊಂಡು ವಾಕಿಂಗ್ ಮಾಡುತ್ತಿದ್ದರು. ಶಾಲೆ ಗೇಟ್ ಬಳಿ ಇದ್ದ ನಾಲ್ವರು ಯುವಕರು ವೆಂಕಟೇಶ್ ಅವರ ಜೊತೆಗೆ ಕ್ಷುಲಕ ವಿಚಾರಕ್ಕೆ ಜಗಳ ಆರಂಭಿಸಿದ್ದಾರೆ. ಏಕಾಏಕಿ ಕಲ್ಲುಗಳನ್ನು ತೆಗೆದುಕೊಂಡು ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಲೆಗೆ ಗಂಭೀರ ಪೆಟ್ಟು
ಕಲ್ಲು ತೂರಿದ್ದರಿಂದ ವೆಂಕಟೇಶ್ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಅವರು ಕೆಳಗೆ ಬೀಳುತ್ತಿದ್ದ ಹಾಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ಥಳೀಯರು ಕೂಡಲೆ ವೆಂಕಟೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾರೆ. ಚಿಕಿತ್ಸೆ ಬಳಿಕ ವೆಂಕಟೇಶ್ ಅವರನ್ನು ವಾರ್ಡ್’ಗೆ ಶಿಫ್ಟ್ ಮಾಡಲಾಗಿದೆ. ಸದ್ಯ ವೆಂಕಟೇಶ್ ಅವರ ಆರೋಗ್ಯ ಸ್ಥಿರವಾಗಿದೆ.
ಆಸ್ಪತ್ರೆಗೆ ಮುಖಂಡರ ದೌಡು
ವೆಂಕಟೇಶ್ ಅವರ ಮೇಲೆ ದಾಳಿಯಾಗಿರುವ ವಿಚಾರ ತಿಳಿಯುತ್ತಿದ್ದ ಹಾಗೆ ಹಲವು ಮುಖಂಡರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಪ್ರಮುಖರಾದ ಎಸ್.ದತ್ತಾತ್ರಿ, ದೀನದಯಾಳು, ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆ ಕುರಿತು ವೆಂಕಟೇಶ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ವೆಂಕಟೇಶ್ ಹೇಳಿದ್ದೇನು?
ಘಟನೆ ಕುರಿತು ಹಲ್ಲೆಗೊಳಗಾದ ವೆಂಕಟೇಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಮನೆಯಲ್ಲಿ ಯಾರೂ ಇರಲಿಲ್ಲ. ನಾಯಿಯನ್ನು ಮಹಡಿ ಮೇಲೆ ಬಿಟ್ಟಿದ್ದೆ. ಮನೆ ಬೀಗ ಹಾಕಿಕೊಂಡು ಮಹಡಿ ಮೇಲೆ ನಾಯಿಯನ್ನು ಆಟವಾಡಿಸುತ್ತಿದ್ದೆ. ನಮ್ಮ ಮನೆಯಲ್ಲಿ ಬಾಡಿಗೆಗಿದ್ದವರ ಮಕ್ಕಳು ಕೂಡ ಬಂದು ಆಟವಾಡಿ ಹೋದರು. ಆಮೇಲೆ ನಾಯಿಗೆ ಚೈನ್ ಹಾಕಿಕೊಂಡು, ಮನೆಯಿಂದ ಹೊರಗೆ ಬಂದೆ. ಗೇಟ್ ತೆಗೆದು ಒಂದು ಫರ್ಲಾಂಗ್ ದೂರ ಬಂದಿದ್ದೆ. ಅಲ್ಲಿ ನಾಲ್ವರು ಯುವಕರು ಇದ್ದರು’ ಎಂದು ತಿಳಿಸಿದರು.
‘ನಾಲ್ವರ ಪೈಕಿ ಒಬ್ಬಾತ ‘ಯಾಕೋ ನನ್ನ ನೋಡುತ್ತಿದ್ದೀಯ’ ಎಂದು ಬೈದನು. ‘ನಾನೆಲ್ಲಿ ನಿನ್ನ ನೋಡಿದೆ’ ಎಂದು ಕೇಳಿದೆ. ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ, ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು. ನಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಇದೆ ಅಂತಾ ಹೇಳುತ್ತಿದ್ದ ಹಾಗೆ ನಾಲ್ವರು ಪಾರಿಯಾದರು. ಒಬ್ಬಾತ ಬಿಳಿ ಶರ್ಟ್ ಧರಿಸಿದ್ದ. ಆತನೆ ನನಗೆ ಜಾಸ್ತಿ ಹಲ್ಲೆ ಮಾಡಿದ’ ಎಂದು ವೆಂಟೇಶ್ ಆರೋಪಿಸಿದರು.
ಸಂಸದ ರಾಘವೇಂದ್ರ ದೌಡು
ವೆಂಕಟೇಶ್ ಅವರ ಮೇಲಿನ ಹಲ್ಲೆ ಕುರಿತು ಮಾಹಿತಿ ತಿಳಿಯುತ್ತಿದ್ದ ಹಾಗೆ ಸಂಸದ ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ರಾಘವೇಂದ್ರ, ‘ಹರ್ಷನ ಕೊಲೆ ಪ್ರಕರಣದ ಬಳಿಕ ಶಿವಮೊಗ್ಗ ಶಾಂತ ಸ್ಥಿತಿಗೆ ಬರುತ್ತಿದೆ. ಈ ನಡುವೆ ಮತ್ತೊಬ್ಬ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಇದ್ದಕ್ಕಿದ್ದ ಹಾಗೆ ನಾಲ್ವರು ಯುವಕರು ಉರ್ದು ಭಾಷೆಯಲ್ಲಿ ಬೈದು ಹಲ್ಲೆ ನಡೆಸಿದ್ದಾರೆ. ವೆಂಕಟೇಶ್ ಅವರ ಅಣ್ಣ ಪಕ್ಷದ ಚುಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಹಿಂದೆ ಏನು ನಡೆಯುತ್ತಿದೆ ತಿಳಿಯುತ್ತಿಲ್ಲ. ಸರಿಯಾದ ರೀತಿಯಲ್ಲಿ ರಕ್ಷಣೆ ಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸುತ್ತೇವೆ. ಕಾನೂನು ವಿರೋಧಿ ಚಟುವಟಿಕೆ ನಡೆಸುವವರಿಗೆ ಪೊಲೀಸರು ಭಯ ಮೂಡಿಸಬೇಕು. ಅಲ್ಲಿ ಗಾಂಜಾ ಸೇರಿದಂತೆ ಬೇರೆ ಬೇರೆ ದುಶ್ಚಟಗಳಿಂದ ದಾಳಿ ನಡೆಸುತ್ತಿರುವ ಕುರಿತು ಕಾರ್ಯಕರ್ತರು ಹೇಳುತ್ತಿದ್ದಾರೆ. ಇಂತಹ ಚಟುವಟಿಕೆಗಳಿಗೆ ಕೊನೆ ಹಾಡಬೇಕು’ ಎಂದು ತಿಳಿಸಿದರು.
ವೆಂಕಟೇಶ್ ಅವರ ಮೇಲಿನ ಹಲ್ಲೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.