ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕಾರಿನಲ್ಲಿ (Car) ತೆರಳುತ್ತಿದ್ದವರನ್ನು ಕೂಗಿ ಕರೆದ ಅಪರಿಚಿತರು, ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ಬಾರ್ ಒಂದರ ಮುಂದೆ ರಾತ್ರಿ 11.30ರ ಹೊತ್ತಿಗೆ ಘಟನೆ ಸಂಭವಿಸಿದೆ.
ಉದ್ಯಮಿ ಪ್ರದೀಪ್, ಯೋಗೀಶ್ ಗೌಡ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಗಾಯ್ತು ಘಟನೆ?

ಪ್ರದೀಪ್, ಯೋಗೀಶ್ ಗೌಡ ಮತ್ತು ದಾಮೋದರ ಎಂಬುವವರು ಗಾಡಿಕೊಪ್ಪದ ಸಮೀಪದ ಬಿರಿಯಾಗಿ ಹೊಟೇಲ್‌ನಲ್ಲಿ ಊಟ ಮುಗಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಸಾಗರ ರಸ್ತೆಯ ಬಾರ್ ಒಂದರ ಮುಂದೆ ಆರೇಳು ಜನರು ಗುಂಪಾಗಿದ್ದರು. ಕಾರು ಅವರನ್ನು ದಾಟಿ ಹೋಗುತ್ತಿದ್ದಂತೆ ಅವರು ಜೋರಾಗಿ ಹೋಯ್ ಎಂದು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗಕ್ಕೆ ನಿಖಿಲ್ ಕುಮಾರಸ್ವಾಮಿ, ಮೂರು ಪ್ರತ್ಯೇಕ ಕಾರ್ಯಕ್ರಮದಲ್ಲಿ ಭಾಗಿ, ಎಲ್ಲೆಲ್ಲಿಗೆ ಭೇಟಿ ನೀಡ್ತಾರೆ?
ಪರಿಚಿತರಿರಬೇಕು ಎಂದು ಪ್ರದೀಪ್ ಕಾರು ನಿಧಾನ ಮಾಡಿ ಹಾರನ್ ಮಾಡಿದ್ದಾರೆ. ಆಗ ಗುಂಪಿನಲ್ಲಿದ್ದವರು ಅವಾಚ್ಯವಾಗಿ ನಿಂದಿಸಿ, ಹೋಗು ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಕಾರಿನಲ್ಲಿದ್ದವರು ಬೈದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಆಗ ಗುಂಪಿನಲ್ಲಿದ್ದವು ಬೈಕುಗಳನ್ನ ತಂದು ಅಡ್ಡಗಟ್ಟಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






