ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SAGARA : ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ತಾಲೂಕು ಕಚೇರಿಯ ಅಟೆಂಡರ್ ಒಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಸಾಗರ ತಾಲೂಕು ಕಚೇರಿಯ ದಾಖಲಾತಿ ವಿಭಾಗದ ಆರ್.ಆರ್.ಟಿ ಶಾಖೆಯ ಅಟೆಂಡರ್ (Attender) ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದಾತ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏನಿದು ಪ್ರಕರಣ?
ಸಾಗರದ ಬಳಸಗೋಡು ಗ್ರಾಮದಲ್ಲಿ ತೋಹಿದ್ ಅಬ್ದುಲ್ ಎಂಬುವವರಿಗೆ ಸೇರಿದ ಜಮೀನಿನ ಆರ್.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಅವರ ಸ್ನೇಹಿತ ಅಸೀಬ್ ಎಂಬುವವರು ತಾಲೂಕು ಕಚೇರಿಗೆ ತೆರಳಿ ಅಟೆಂಡರ್ ಬಸವರಾಜ್ ಅವರ ಆರ್‌ಟಿಸಿಗೆ ಬೇಡಿಕೆ ಇಟ್ಟಿದ್ದರು. ಆಗ ಬಸವರಾಜು 1500 ರೂ. ಹಣ ಪಡೆದಿದ್ದರು. ಅಸೀಬ್ ಅವರ ಸ್ನೇಹಿತ ನವೀನ್ ಎಂಬುವವರು ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದರು. ದಾಖಲೆ ಒದಗಿಸಿದಾಗ ಶಿರಸ್ತೇದಾರ್ ಸಹಿ ಇರಲಿಲ್ಲ. ಇದನ್ನು ಹಾಕಿಸಿಕೊಡಲು 2000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಇವತ್ತು ಅಟೆಂಡರ್ ಬಸವರಾಜು 2000 ಸಾವಿರ ರೂ. ನಗದು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಣವನ್ನು ವಶಕ್ಕೆ ಪಡೆದು ಅಟೆಂಡರ್ ಬಸವರಾಜುನನ್ನು ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಲೋಕಾಯುಕ್ತ ಅಧೀಕ್ಷಕ ಮಂಜುನಾಥ ಚೌದರಿ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ದಾಳಿ ನಡೆಸಲಾಗಿದೆ. ಡಿವೈಎಸ್‌ಪಿ ಉಮೇಶ್ ಈಶ್ವರ ನಾಯ್ಕ, ಇನ್ಸ್‌ಪೆಕ್ಟರ್ ಹೆಚ್.ಎಸ್.ಸುರೇಶ್, ಸಿಬ್ಬಂದಿ ಯೋಗೇಶ್, ಸುರೇಂದ್ರ, ಚನ್ನೇಶ, ರಘುನಾಯ್ಕ, ಪುಟ್ಟಮ್ಮ, ಗಂಗಾಧರ, ಪ್ರದೀಪ್, ಜಯಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಮತ ಎಣಿಕೆ ಆರಂಭ, ಇವತ್ತು ನಿರ್ಧಾರವಾಗುತ್ತೆ ಡಾ.ಸರ್ಜಿ, ಆಯನೂರು, ದಿನೇಶ್, ರಘಪತಿ ಭಟ್ ಭವಿಷ್ಯ