ಶಿವಮೊಗ್ಗ ಲೈವ್.ಕಾಂ | SHIMOGA NEWS | 4 MAY 2021
ಕರೋನ ಕರ್ಫ್ಯೂ ಹಿನ್ನೆಲೆ ಆಟೋಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹಾಗಿದ್ದೂ ರಸ್ತೆಗಿಳಿದಿದ್ದ ಆಟೋಗಳನ್ನು ಇವತ್ತು ಪೊಲೀಸರು ಸೀಜ್ ಮಾಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆಸಿದ ಶಿವಮೊಗ್ಗ ನಗರದ ಪೊಲೀಸರು, ರಸ್ತೆಗಿಳಿದಿದ್ದ ಆಟೋಗಳನ್ನು ಸೀಜ್ ಮಾಡಿದರು. ನಗರದಲ್ಲಿ ಇವತ್ತು 84 ಆಟೋಗಳನ್ನು ಸೀಜ್ ಮಾಡಲಾಗಿದೆ.
ಆಟೋ ಚಾಲಕರ ಆಕ್ರೋಶ
ಆಟೋಗಳನ್ನು ಸೀಜ್ ಮಾಡುತ್ತಿದ್ದಂತೆ ಒಬ್ಬೊಬ್ಬ ಚಾಲಕರು ಸಬೂಬು ಹೇಳಿದ್ದಾರೆ. ಆಸ್ಪತ್ರೆಗೆ ಪೇಷೆಂಟ್ ಕರೆದೊಯ್ಯುತ್ತಿದ್ದೆವು. ನಮ್ಮ ಮನೆಯವರನ್ನು ಕರೆದೊಯ್ಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೆ ಅನ್ನದ ಪೊಲೀಸರು ಆಟೋಗಳನ್ನು ಸೀಜ್ ಮಾಡಿದ್ದಾರೆ.
‘ನಮಗೆ ಯಾವುದೆ ಪರಿಹಾರ ಘೋಷಿಸಿಲ್ಲ. ಆಟೋಗಳ ಸಂಚಾರವನ್ನು ನಿರ್ಬಂಧಿಸುತ್ತಿದ್ದಾರೆ. ನಮ್ಮ ಜೀವನದ ಗತಿ ಏನು’ ಎಂದು ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಅಸ್ಗರ್ ಪಾಷಾ ಪ್ರಶ್ನಿಸಿದ್ದಾರೆ.
ಶಿವಮೊಗ್ಗದ ಪೂರ್ವ ಮತ್ತು ಪಶ್ಚಿಮ ಠಾಣೆಗಳ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]